Powered By Blogger

Friday, March 5, 2021

ವಿಜ್ಞಾನ ಸಾಹಿತ್ಯ ಕಮ್ಮಟದ ಗೋಷ್ಠಿ 7 ಡಾ/ ಅಶ್ವಿನಿ ದೇಸಾಯಿ-ವಿಜ್ಞಾನ ಮತ್ತು ಸಾಹಿತ್ಯ/Dr/ Ashvini Desai -Science and Literature

ಐತಿಹಾಸಿಕ ರೈತ ಹೋರಾಟಕ್ಕೆ 100 ದಿನ: `ಅನ್ನದಾತರ ಆಗ್ರಹ' ಸಾಕ್ಷ್ಯಚಿತ್ರ Farmers Protest

Muraleedhara Upadhya -ಎನ್. ಎಸ್ . ಲಕ್ಷ್ಮೀನಾರಾಯಣ ಭಟ್ಟರ ಕಾವ್ಯ

ಜನಪ್ರಿಯ ಕವಿ ಎನ್‌.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ 6-2-2021

ಜನಪ್ರಿಯ ಕವಿ ಎನ್‌.ಎಸ್ ಲಕ್ಷ್ಮೀನಾರಾಯಣ ಭಟ್ಟ ನಿಧನ | Prajavani: ಹಿರಿಯ ಕವಿ, ಸಾಹಿತಿ ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್ಟ ಅವರು ಶನಿವಾರ ಬೆಳಗ್ಗೆ ನಿಧನರಾದರು

Monday, March 1, 2021

ಕಡಮೆ ಪ್ರಕಾಶ್ -ಕತೆಗಾರ್ತಿ ಬಿ. ಟಿ. ಜಾಹ್ನವಿ /B. T. JAHNAVI / Kadame Prakash

ಬಿ.ಟಿ.ಜಾನ್ಹವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ರ " ಸಾಹಿತ್ಯ ಶ್ರೀ " ಪ್ರಶಸ್ತಿ . ಬಿ.ಟಿ. ಜಾನ್ಹವಿ ನಮ್ಮ ನಡುವಿನ ಪ್ರಮುಖ ಸೃಜನಶೀಲ ಕಥೆಗಾರ್ತಿ. 1987 ರಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ಲಂಕೇಶ್ ಪತ್ರಿಕೆ ಯ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರು . ದಾವಣಗೇರಿಯಲ್ಲಿ ತಮ್ಮದೇ ತಂಡ ಕಟ್ಟಿಕೊಂಡು ನಾಟಕಾಭಿನಯನದಲ್ಲೂ ಇವರದು ಎತ್ತಿದ ಕೈ. ಯಾವುದೇ ಇಸಂ ಇಲ್ಲಾ ಗುಂಪುಗಾರಿಕೆ ಯಲ್ಲಿ ಕಾಣಿಸಿಕೊಳ್ಳದೇ ತಮ್ಮನ್ನು ತಾವೇ ಹೋರಾಟ, ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವರು ಇವರು . 2014 ರಲ್ಲಿ ತಮ್ಮ 25 ಕಥೆಗಳ ಸಂಕಲನ " ಕಳ್ಳು ಬಳ್ಳಿ " ಯನ್ನು ಪ್ರಕಟಿಸಿರುವರು . ಪಿ.ಲಂಕೇಶ್ ಇವರ ಕತೆಗಳ ಕುರಿತು ಬರೆಯುತ್ತಾ....... ಜಾನ್ಹವಿಗೆ ತಾನು ಕಂಡದ್ದನ್ನು ಮಾತ್ರ ಜೀವಂತ ಭಾಷೆಯಲ್ಲಿ ಹೇಳುವ ಕಾತರವಿದೆ. ಮಧ್ಯಮ ವರ್ಗದ ತೆಳುವಾದ ವಸ್ತುವನ್ನು ಆರಿಸಿಕೊಂಡಾಗಲೂ , ದಲಿತರ ಅನುಭವಗಳನ್ನು ನಿರೂಪಿಸುವಾಗಲೂ ಜಾನ್ಹವಿ ದಟ್ಟವಾಗಿ , ತೀವ್ರವಾಗಿ ಬರೆಯುತ್ತಾರೆ. ಬದುಕಿನ ವಿಚಿತ್ರಗಳನ್ನು ಕಂಡು ಎದುರಿಸುವ ಜೊತೆಗೇ ಕಂಡದ್ದನ್ನು ಅದರೆಲ್ಲಾ ಸೊಗಡು ಮತ್ತು ಮುಗ್ಧತೆಯೊಂದಿಗೆ ಹೇಳುವ ಪ್ರತಿಭೆಯನ್ನು ಈ ಹೆಣ್ಣುಮಗಳಲ್ಲಿ ಕಾಣುತ್ತೇವೆ . ಸಾಹಿತಿಗೆ ಬೇಕಾದ ವಸ್ತುನಿಷ್ಠೆ ಮತ್ತು ಮಮತೆ ಇವರಲ್ಲಿ ಉದ್ದಕ್ಕೂ ಕಾಣುವ ವಿಶಿಷ್ಟ ಗುಣ...... ಎಂದಿರುವುದು. ನಾಡಿನ ಸಾಕ್ಷಿಪ್ರಜ್ಞೆಯ ಬರಹಗಾರ ಜಯಂತ್ ಕಾಯ್ಕಿಣಿ ಜಾನ್ಹವಿಯ ಕತೆಯ ಕುರಿತು...... ಮನುಷ್ಯನ ಅಂತಃಸತ್ವವನ್ನು ಒರೆಗೆ ಹಚ್ಚುವ ಕ್ಷಣಗಳಲ್ಲಿ ಇವರ ಕಥನ ಕುತೂಹಲವಿದೆ. ಜೀವನವೆಂಬ ದೈನಿಕ ಧಾರಾವಾಹಿಗಳಲ್ಲಿ ವಾಡಿಕೆಯಂತೆ ಪಾತ್ರ ನಿರ್ವಹಿಸುವ ವ್ಯಕ್ತಿಗಳ ಪಾಡನ್ನು ತೀವ್ರವಾಗಿ ಪರೀಕ್ಷೆಗೆ ಒಡ್ಡುವಂತ ಪ್ರಸಂಗಗಳನ್ನು ಅಂತಃಕರಣದ ಕಣ್ಣುಗಳಿಂದ ನೋಡಲು ಯತ್ನಿಸಿದಾಗೆಲ್ಲಾ ಇವರ ಕಥನ ಹಸಿಕಸುವಿನಿಂದ ಸ್ಪಂಧಿಸತೊಡಗುತ್ತದೆ........ ಎಂದಿರುತ್ತಾರೆ. ಜಾನ್ಹವಿಯವರ ಕತೆಯಲ್ಲಿ ಮನುಷ್ಯರ ಸಮಸ್ಯೆಗಳನ್ನು ಕಾಣುವ ಪ್ರಯತ್ನ, ಹೆಣ್ಣಿನ ಬದುಕಿನ ತಳಮಳ, ಶೋಷಣೆ, ಗುಂಡು ಹೆಣ್ಣಿನ ಸಂಬಂಧದ ಸೂಕ್ಷ್ಮತೆ, ಮನುಷ್ಯನ ಬಡತನ, ಕೆಟ್ಟತನ ಮತ್ತು ಸ್ವಾರ್ಥಿತನ, ದುಃಖ.....ಇವುಗಳ ನಡುವೆಯೂ ಪುಟಿದೇಳುವ ಮನುಷ್ಯತ್ವದ ಜೀವಸೆಲೆಯ ನಿರಂತರತೆ ಇದೆ . ನಾಗಸುಧೆಯ ಜೀವದ ಗೆಳತಿ ಜಾನ್ಹವಿ, ನಿಮ್ಮೆಲ್ಲಾ ಕನಸುಗಳು ನೆರವೇರಲಿ, ಮತ್ತೆ ಕನ್ನಡ ಕಥಾಲೋಕವನ್ನು ಪ್ರವೇಶಿಸಿ ಹೊಸ ಹೊಸ ಸಂಗತಿಗಳನ್ನು ಉಣಬಡಿಸಿರಿ , ಕಾಯುವೆವು ಎನ್ನುತ್ತಾ , ಕರ್ನಾಟಕ ಸಾಹಿತ್ಯ ಅಕಾಡೆಮಿಯವರ 2020 ರ " ಸಾಹಿತ್ಯ ಶ್ರೀ " ಪ್ರಶಸ್ತಿಗೆ ಶುಭಕೋರಿ ಅಭಿನಂದಿಸುವೆ. ಪ್ರಕಾಶ ಕಡಮೆ ನಾಗಸುಧೆ, ಹುಬ್ಬಳ್ಳಿ. With Sunanda Kadame Jahnavi B Thippeswamy Comments Uma Mukund ಹೃತ್ಪೂರ್ವಕ ಅಭಿನಂದನೆಗಳು ಜಾಹ್ನವಿಯವರಿಗೆ 💙💙 · Reply · 12h · Edited Write a comment… Kadame Prakash is with ಭಾಗ್ಯಜ್ಯೋ

ಅಜಿತ್ ಕೌರ್ - ಅಲೆಮಾರಿಯೊಬ್ಬಳ ಆತ್ಮಕತೆ { ರೇಣುಕಾ ನಿಡಗುಂದಿ } Purushottama Bilimale

ಭಾರತದ ವಿವಿಧ ಭಾಷೆಗಳ ಅತ್ಯುತ್ತಮ ಲೇಖಕರಿಗೆ ಪ್ರತಿ ವರ್ಷ ನೀಡುವ 'ಕುವೆಂಪು ರಾಷ್ಟ್ರೀಯ ಪುರಸ್ಕಾರʼವನ್ನು 2019ರಲ್ಲಿ ಪಂಜಾಬಿ ಲೇಖಕಿ ಅಜಿತ್‌ ಕೌರ್‌ ಅವರಿಗೆ ನೀಡಲಾಯಿತು. ಅದೊಂದು ಸರ್ವಾನುಮತದ ಆಯ್ಕೆಯಾಗಿತ್ತು. ಕುವೆಂಪುರವರ ಹಾಗೆ ಕೌರ್‌ ಕೂಡಾ ಇಂಗ್ಲಿಷ್‌ ಓದಲು ಹೋಗಿ ತಾಯ್ನುಡಿಯ ಕಡೆಗೆ ಹೊರಳಿಕೊಂಡವರು. ಕನ್ನಡದ ಮಹಾಲೇಖಕರೊಬ್ಬರ ಹೆಸರಿನ ಪ್ರಶಸ್ತಿಯು ಸರಿಯಾದವರಿಗೇ ಸಂದಾಯವಾಗಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಅದಕ್ಕಾಗಿ ಆ ಸಂದರ್ಭದಲ್ಲಿ ಗೆಳೆಯರ ಸಹಾಯದಿಂದ ಅನೇಕ ಪಂಜಾಬೀ ಲೇಖಕರ ಬಗ್ಗೆ ತಿಳಿದುಕೊಳ್ಳಬೇಕಾಯಿತು. ಆ ಅರಿಯುವ ಪ್ರಕ್ರಿಯೆಯೇ ರೋಚಕವಾಗಿತ್ತು, ಏಕೆಂದರೆ ಪಂಜಾಬೀ ಲೇಖಕರ ಅನುಭವಗಳೇ ಅನನ್ಯ. ಅಜಿತ್‌ ಕೌರ್‌ ಕೂಡಾ ಸೇರಿದಂತೆ, ಇವತ್ತು ಬದುಕಿರುವ ಹಿರಿಯ ಪಂಜಾಬೀ ಲೇಖಕರೆಲ್ಲ ಒಂದಲ್ಲ ಒಂದು ರೀತಿಯಿಂದ ಭಾರತ ವಿಭಜನೆಯನ್ನು ಕಂಡವರು. ಹಿಂದೂ ಮುಸ್ಲಿಂ ದ್ವೇಷ ಮತ್ತು ಕ್ರೌರ್ಯಗಳಿಗೆ ಸಾಕ್ಷಿಯಾದವರು. ಆದರೆ ಇದರಿಂದ ಮನಸು ಕಹಿ ಮಾಡಿಕೊಳ್ಳದೆ, ಕೋಮುಜ್ವಾಲೆಗೆ ಬಲಿಬೀಳದ ಎಚ್ಚರವನ್ನು ಕಾಯ್ದುಕೊಂಡೇ ಅಲ್ಲಿನ ಲೇಖಕರು ಬರೆದರು. ಈ ವಿಷಯದಲ್ಲಿ ಪಂಜಾಬೀ ಲೇಖಕರು ಭಾರತಕ್ಕೆ ಮಾದರಿಯಾಗುವ ಗುಣವುಳ್ಳವರು. ಪ್ರಸ್ತುತ ಪುಸ್ತಕ ಅಲೆಮಾರಿ (ಮೂಲ: ಖಾನಾ ಬದೋಶ್) ಅಜಿತ್‌ ಕೌರ್‌ ಅವರ ಆತ್ಮಚರಿತ್ರೆಯಾಗಿದೆ. ಭಾರತ ವಿಭಜನೆಯೇ ಕಾರಣವಾಗಿ ಬಗೆ ಬಗೆಯ ಸಂಕಷ್ಟಗಳಿಗೆ ಒಳಗಾದ ಅವರು, ಮುಂದೆ ಮಗಳಾಗಿ, ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಪ್ರೇಮಿಯಾಗಿ, ಪತ್ರಿಕೋದ್ಯಮಿಯಾಗಿ, ಲೇಖಕಿಯಾಗಿ, ಮತ್ತೆ ಇನ್ನೇನೋ ಆಗುತ್ತಾ ಹೋಗುವ ಹೊತ್ತು, ಗಟ್ಟಿಯಾಗುತ್ತಾ, ಮರುಕ್ಷಣ ಕರಗುತ್ತಾ ಬದುಕ ಸಾಗಿಸಿದರು. ಸಂವೇದನಾಶೀಲ ಹೆಣ್ಣೊಬ್ಬಳ ಬದುಕಿನ ಈ ಎಲ್ಲಾ ಆಯಾಮಗಳು 'ಅಲೆಮಾರಿʼಯಲ್ಲಿ ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿದೆ. ಕೌರ್‌ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ, ತೀವ್ರವಾಗಿ ಓದುಗನನ್ನು ಮುಟ್ಟುತ್ತದೆ. ಈಗಾಗಲೇ ಅಮೃತಾ ಪ್ರೀತಂ ಕವಿತೆಗಳನ್ನು ಸುಂದರವಾಗಿ ಕನ್ನಡಕ್ಕೆ ತಂದಿರುವ, ಕವಿ, ಲೇಖಕಿ ರೇಣುಕಾ ನಿಡಗುಂದಿಯವರು, ಅಜಿತ್‌ ಅವರ ಬರವಣಿಗೆಯ ಕಲಾವಂತಿಕೆಯನ್ನು ಅಷ್ಟೇ ಸುಂದರವಾಗಿ ಕನ್ನಡಕ್ಕೆ ತಂದಿದ್ದಾರೆ. ಅವರೀಗ ಕನ್ನಡ ಮತ್ತು ಪಂಜಾಬಿ ಭಾಷೆಗಳ ನಡುವಣ ಸೇತುವೆ. ಈಚಿನ ಭಾರತೀಯ ಲೇಖಕರಲ್ಲಿ ಬಹಳ ಜನ ಸಾಹಿತ್ಯ ಸಂಭ್ರಮಗಳಲ್ಲಿ ಕಾಣಿಸಿಕೊಳ್ಳಬಯಸುತ್ತಾರೆ. ಅಜಿತ್‌ ಕೌರ್‌ ಸಂಭ್ರಮಗಳಾಚೆ ಉಳಿದು ಬರೆಹವನ್ನು ಸಂಭ್ರಮಿಸಿದವರು. ಅವರ ಆತ್ಮಕತೆಯನ್ನು ಓದುವುದೆಂದರೆ ಹೊಸ ಲೋಕವೊಂದಕ್ಕೆ ತೆರೆದುಕೊಂಡಂತೆ. - ಪುರುಷೋತ್ತಮ ಬಿಳಿಮಲೆ

Hariappa Pejawar - ಪಿಲಿಯನ್ ರೈಡರ್ { ಎರಡು ಕವನಗಳು }

The Figure of P. Lankesh by Nataraj Huliyar/ ಪಿ. ಲಂಕೇಶ್ --- ನಟರಾಜ್ ಹುಳಿಯಾರ್