Powered By Blogger

Monday, November 30, 2020

ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ |

ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ | | ಅವಧಿ । AVADHI: ರಾಜಶೇಖರ ಕುಕ್ಕುಂದಾ ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು

ಡಾ/ ಶುಭಶ್ರೀ ಪ್ರಸಾದ್ , ಮಂಡ್ಯ - ಕನ್ನಡ ಸಾಹಿತ್ಯ – ಪರಂಪರೆ: ಭಾಗ- 30 ಕೆ . ಸತ್ಯನಾರಾಯಣ Dr Shubhashree Prasad/ k. Satyanarayana

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 30 – Newsnap Kannada

Thursday, November 26, 2020

Dr. S R. Arunkumar - - ಹಿರಿಯಡಕ ಒಂದು ಸಾಂಸ್ಕೃತಿಕ ಕೇಂದ್ರ

Manasi Sudhir - C Pha. Kattimani - Marula kaage ಸಿ ಫ ಕಟ್ಟೀಮನಿ - ಮರುಳ ಕಾಗೆ

ಗಿರಿಜಾ ಶಾಸ್ತ್ರಿ - ಕೆ. ಸತ್ಯನಾರಾಯಣ ಅವರ " ಮಹಾ ಕಥನದ ಮಾಸ್ತಿ "

ಮಾಸ್ತಿಯವರ ಬೃಹತ್ ಕಥಾಕೋಶವನ್ನು ಹೊಕ್ಕು ಹೊರಬಂದಿದ್ದಾಯಿತು. ಕೇವಲ ಕಾದಂಬರಿಯೇ ಏಕೆ, ಕಥೆಗಳೂ ಅವುಗಳ ಅಖಂಡ ಓದು, ಗ್ರಹಿಕೆ ಮತ್ತು ಕಾಣ್ಕೆಗಳಿಂದ ಮಹಾಕಥನವಾಗಬಹುದೆಂದು (grand narrative) ನಿರೂಪಿಸಿದ್ದೀರಿ. ಅಭಿನಂದನೆಗಳು ನಿಮಗೆ. ಮಾಸ್ತಿಯವರ ಕತೆಗಳ ಓದಿನ ಬಗೆಗಿನ ನಿಮ್ಮ ಗ್ರಹಿಕೆ ವಿಶ್ಲೇಷಣೆಗಳು ನಿಮ್ಮ ಓದಿನ ಆಳ ಅಗಲಗಳನ್ನು ಪರಿಚಯಿಸುತ್ತದೆ. ಅವರ ಕತೆಗಳನ್ನು ನೀವು ಕೇಳಿಸಿಕೊಂಡ, ಗ್ರಹಿಸಿದ, ಪ್ರಸ್ತುತಗೊಳಿಸಿದ ರೀತಿಗೆ "ಮಹಾಕಥನದ ಮಾಸ್ತಿ " ಎಂಬ ನಿಮ್ಮ ಅನನ್ಯ ಅಧ್ಯಯನವೇ ಸಾಕ್ಷಿ. ಅವು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ಬಾದಶಹನ ನ್ಯಾಯ, ಪಂಡಿತನ ಮರಣ ಶಾಸನ, ಸುಶೀಲಾ ರಜಾಕಾರ್ ಮುಂತಾದ ಮುಸ್ಲಿಂ ಕತೆಗಳು ಮೂಲಕ ವಿಶ್ಲೇಷಣೆ ಮಾಡಿದ್ಸೀರಿ. ಅವರ ಕತೆಗಳನ್ನು ನಾವು ಕೇಳಿಸಿಕೊಳ್ಳದೇ, ಕಾಣದೇ ಹೋದದ್ದರಿಂದಲೇ ರಾಮಜನ್ಮ ಭೂಮಿ, ಟಿಪ್ಪು ಕುರಿತ ವಾಗ್ವಾದ ಮುಂತಾದವುಗಳನ್ನು ನಿಭಾಯಿಸುವುದರಲ್ಲಿ ಹೆಣಗಾಡುತ್ತಿದ್ದೇವೆ ಎಂಬ ನಿಮ್ಮ ಅಭಿಪ್ರಾಯ ತುಂಬಾ ಸರಿಯಾದುದು. ಟಾಲ್ಸ್ಟಾಯ್ ಮತ್ತು ಮಾಸ್ತಿಯವರನ್ನು ಒಟ್ಟಿಗೇ ಓದುವುದರ ಮಹತ್ವವನ್ನು ತಿಳಿಸಿದ್ದೀರಿ. ಸಾವಿನ ಸನ್ನಿಧಿಯಲ್ಲಿ ಬದುಕಿನ ಅಗಾಧತೆಯ ಪರಿಚಯ ಆಗುವುದರ ಬಗ್ಗೆ ಹೇಳಿರುವುದು ವಿಶಿಷ್ಟವಾಗಿದೆ. ಹೀಗೆ ಜೊತೆಯಾಗಿ ಓದುವುದರಿಂದಲೇ ನಮಗೆ 'ಯಾವ ದರ್ಶನ ಹೆಚ್ಚು ಪ್ರಸ್ತುತ ಆತ್ಮೀಯ ಎಂಬುದು ಜಾಗೃತವಾಗುತ್ತಲೇ ಹೋಗುತ್ತದೆ" ಎಂದು ಅಭಿಪ್ರಾಯ ಪಟ್ಟಿರುವುದು ಕತೆಗಳ ಹೊಸ ರೀತಿಯ ಓದಿಗೆ ದಾರಿ ಮಾಡಿಕೊಡುತ್ತದೆ. ಮಾಸ್ತಿಯವರ ಪ್ರಾರಂಭದ ಕತೆಗಳೇ ಅವರ ಭವಿಷ್ಯದ ಕತೆಗಳಿಗೆ ತಾತ್ವಿಕ ತಳಹದಿಯನ್ನು ನಿರ್ಮಾಣ ಮಾಡಿದವು ಎಂಬುದನ್ನು, ಅವರ ಹಾಸ್ಯ ಪ್ರಜ್ಞೆಯ ರಂಗಪ್ಪನ ಕತೆಗಳಿಂದ ಹಿಡಿದು ದರ್ಶನರೂಪೀ “ಮಾಯಣ್ಣನ ಕನ್ನಡಿ" (“ಬದುಕಿನ ಉದ್ದೇಶವೇನು. ಬದುಕಿನಲ್ಲಿ ಕರುಣೆ, ಪ್ರೀತಿ ತಿಳುವಳಿಕೆಯ ಸ್ಥಾನವೇನು ಮುಂತಾದ ಜಿಜ್ಞಾಸೆ”)ಯವರೆಗಿನ ಕಥಾವಿಸ್ತಾರದಲ್ಲಿ ಈ ತಾತ್ವಿಕತೆಯ ವಿಕಾಸವನ್ನೂ ಅದರ ಎತ್ತರವನ್ನೂ ತೆರೆದು ತೋರಿಸಿದ್ದೀರಿ. ದಾಂಪತ್ಯ, ಕುಟುಂಬ, ಗಂಡು ಹೆಣ್ಣಿನ ಸಂಬಂಧ, ಸಾಮಾಜಿಕ , ರಾಜಕೀಯ ಧಾರ್ಮಿಕ ಸಮಸ್ಯೆಗಳು, ನೈತಿಕತೆ, ರಾಜಧರ್ಮ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕತೆಗಳನ್ನು ಆರಿಸಿಕೊಂಡು ಅವುಗಳ ಅನನ್ಯತೆ, ಪ್ರಸ್ತುತೆಯನ್ನು ವಿಶ್ಲೇಷಣೆ ಮಾಡುತ್ತಲೇ ಆ ಕತೆಗಳಿಗೆ ಪೂರಕವಾದ ಉಳಿದ ಕತೆಗಳನ್ನೂ ಉಲ್ಲೇಖ ಮಾಡಿದ್ದೀರಿ. ಇದು ಮಾಸ್ತಿಯವರ ಅಖಂಡ ದೃಷ್ಟಿಕೋನವನ್ನು ಎತ್ತಿ ಹಿಡಿಯಬೇಕೆನ್ನುವ ನಿಮ್ಮ ನಿಲುವಿಗೆ ಉದಾಹರಣೆಯಾಗಿದೆ. ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man and woman put together' ಎಂದು ಮಾಸ್ತಿಯವರೇ ಒಮ್ಮೆ ಹೇಳಿದ್ದರೆಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆಯುತ್ತಾರೆ. (ಶ್ರೀನಿವಾಸ : ಅಭಿನಂದನಾ ಗ್ರಂಥ). ಅವರು ಮುಂದುವರೆದು " ಸ್ತ್ರೀ ಯು ತುಳಿಯಲ್ಪಟವಳೆಂಬ ಕಾರಣಗಳಿಂದಲೋ ಏನೋ ಅವರ ಆದರವು ಅವರ ಕಡೆಗೇ ಇದೆ. ಸ್ತ್ರೀಯ ಪ್ರಾಧಾನ್ಯವನ್ನು ಹೆಚ್ಚಿಸಿ ಆ ಮೂಲಕ ಪುರುಷನ ಪರಿಚಯ ಮಾಡಿಸುವುದು ಶ್ರೀನಿವಾಸರ ಮಾರ್ಗ" ಎಂದು ಹೇಳುತ್ತಾರೆ. ನೀವೂ ಕೂಡ ನಿಮ್ಮ ಕೃತಿಯಲ್ಲಿ ಮಾಸ್ತಿಯವರ ಕತೆಗಳಲ್ಲಿ ಎಲ್ಲಾ ಸ್ತ್ರೀಯರು ಅನ್ಯಾಯದ ವಿರುದ್ಧ ಒಂದಲ್ಲಾ ಒಂದು ಬಗೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದೀರಿ. ಇದು ಮಾಸ್ತಿಯವರ ಕೆಳವರ್ಗದ ಹೆಣ್ಣುಮಕ್ಕಳ ( ಚೆನ್ನಮ್ಮ, ಎಮ್ಮೆ ಕಳವು,ಮುನೀಶ್ವರನ ಮರ, ಪಕ್ಷಿಜಾತಿ, ದುರದೃಷ್ಟದ ಹೆಣ್ಣು) ಪಾತ್ರಗಳಿಗಾಗಲೀ, ವಿದೇಶಿ ಪಾತ್ರಗಳಿರುವ (ಚಟ್ಟೆಕ್ಕಾರ ತಾಯಿ, ಆಂಗ್ಲ ನೌಕಾ ಕ್ಯಾಪ್ಟನ್) ಕತೆಗಳಿಗಗಾಲೀ ಸರಿಯಿರಬಹುದೇನೋ. ಕೃಷ್ಣಮೂರ್ತಿಯ ಹೆಂಡತಿಗೆ (ಗಂಡ ಸತ್ತ ಸುದ್ದಿ ತಿಳಿದು) "ಬಾವಿಗೆ ಬೀಳುವುದನ್ನು ಬಿಟ್ಟು ಬೇರೆ ಯಾವ ದಾರಿ ಇದೆ" ಎನ್ನುವ ಮಾತನ್ನು‌ ನೀವು ಒಪ್ಪುತ್ತೀರಿ. ಮಾಸ್ತಿಯವರಿಗಿಂತ ಹತ್ತಿಪ್ಪತ್ತು ವರುಷಗಳಷ್ಟು ಹಿಂದೆಯೇ ಗುಲ್ವಾಡಿ ವೆಂಕಟರಾಯರಾಗಲೀ, ಕೆರೂರು ವಾಸುದೇವಾಚಾರ್ಯರಾಗಲೀ, ಕಲ್ಯಾಣಮ್ಮನವರಾಗಲೀ 'ಇಂದಿರೆಯರ'ನ್ನು ನಿರ್ಮಾಣ ಮಾಡಲಿಲ್ಲವೇ? ಪ್ರಶ್ನೆಯೆಂದರೆ ಮೇಲುಜಾತಿಯ ಹೆಣ್ಣು ಪಾತ್ರಗಳಾದ 'ಮೇಲೂರಿನ ಕುರುಡಿ ಲಕ್ಷಮ್ಮ,', 'ಕಾಮನ ಹಬ್ಬದ ಒಂದು ಕತೆ'ಯ ಸಾವಿತ್ರಮ್ಮ, 'ಕೃಷ್ಣಮೂರ್ತಿ ಯ ಹೆಂಡತಿ', 'ಸನ್ಯಾಸವಲ್ಲದ ಸನ್ಯಾಸ'ದ ನರಸಿಂಹಯ್ಯನ ಹೆಂಡತಿ ಈ ಪಾತ್ರಗಳ ಪ್ರತಿರೋಧವು ಪ್ರತಿರೋಧದಂತೆ ಕಾಣದೆ ಬಲಿಪಶುಗಳಂತೆ ಕಾಣುತ್ತದೆ. ಇದನ್ನು ಪ್ರತಿರೋಧ ಎಂದರೂ ಇವರೆಲ್ಲರ ಈ ಪ್ರತಿರೋಧವು ಇಷ್ಟು ದುರ್ಬಲವಾಗಲು ಕಾರಣವೇನು? ಬಹುಶಃ ಅವು ಪ್ರಾರಂಭದ ಕತೆಗಳು ಎನ್ನುವ ಸಮಾಧಾನ ಸಾಕೆ? ಅಥವಾ ಮೇಲು ಜಾತಿಯ ಹೆಣ್ಣುಮಕ್ಕಳಿಗೆ ಮಾತ್ರ ಸಂಸ್ಕೃತಿಯನ್ನು ಜತನವಾಗಿ ಕಾಪಾಡಿಕೊಂಡು ಹೋಗಲು ಬೇಕಾದ ಮೌಲ್ಯಗಳಿವೆ ಎಂಬುದನ್ನು ಸಾರುವುದೋ?. ಈ ಅನುಮಾನಕ್ಕೆ ಕಾರಣ, ತಿರುಮಲಾಂಬ ಅವರ ನಭ, ವಿರಾಗಿನಿ ಕಾದಂಬರಿಗಳಿಗೆ ಮಾಸ್ತಿಯವರು ಕಟುವಾಗಿ ವಿಮರ್ಶಿಸಿದ್ದು (ಆಮೇಲೆ ಅವರು ಪಶ್ಚಾತ್ತಾಪ ಪಟ್ಟದ್ದು ಬೇರೆಯ ಮಾತು). ಚಿ.ನ. ಮಂಗಳ ತಿರುಮಲಾಂಬ ಅವರನ್ನು ಮೊದಲ ಬಾರಿಗೆ ನೋಡಲು ಮದ್ರಾಸಿಗೆ ಹೋಗಿದ್ದರಂತೆ ಆಗ ಅವರ ಎದುರಿಗೆ ಬಂದ ತಿರುಮಲಾಂಬ 'ಅವಳು ಸತ್ತು ಹೋದಳು' ಎಂದು ಹೇಳಿದರಂತೆ. ತಿರುಮಲಾಂಬ ಅವರ ಪ್ರಸ್ತಾಪವನ್ನು ನೀವು ಮಾಡಿದ್ದೀರಿ. 'ಬಾದಶಹನ ನ್ಯಾಯ' ಬರೆದ ಮಾಸ್ತಿಯವರು, ಸ್ತ್ರೀಪಕ್ಷಪಾತಿಯಾದ ಮಾಸ್ತಿಯವರು ತಿರುಮಲಾಂಬ ಅವರನ್ನು ಹೀಗೆ ಹಣಿದದ್ದು ಸರಿಯೇ ಎನ್ನುವುದು ನನಗೆ ಇಂದಿಗೂ ಕಾಡುವ ಸಂಗತಿ. ಮಾಸ್ತಿಯವರನ್ನು ಇಂತಹ ಎಲ್ಲಾ ಋಣಾತ್ಮಕ ಅಂಶಗಳ ಜೊತೆಗೇ ನಾವು ಒಪ್ಪಿಕೊಳ್ಳ ಬೇಕಲ್ಲವೇ? ಕೆ.ವಿ. ನಾರಾಯಣ ಮತ್ತು ಎಚ್.ಎಸ್ ರಾಘವೇಂದ್ರರಾವ್ ಅವರು ಮಾಸ್ತಿಯವರೊಡನೆ ನಡೆಸಿದ ಸಂದರ್ಶನದಲ್ಲಿ ಅವರ ಮಿತಿಗಳನ್ನು (ಪ್ರಶ್ನೆಗಳನ್ನು ಎದುರಿಸುವ ರೀತಿ) ನೀವು ನಿಷ್ಪಕ್ಷಪಾತಿಯಾಗಿ ಗುರುತಿಸಿದ್ದೀರಿ ಇದು ಇತ್ಯಾತ್ಮಕ ಅಂಶ. ಮಾಸ್ತಿಯವರನ್ನು ಅವರ ಕತೆಗಳನ್ನು ನವೋದಯದ ಆನಂತರದವರು, ಮುಖ್ಯವಾಗಿ ನವ್ಯ ವಿಮರ್ಶಕರು ಅರ್ಥಮಾಡಿಕೊಂಡಿದ್ದಕ್ಕಿಂತ ಅಪಾರ್ಥಮಾಡಿಕೊಂಡಿದ್ದೇ ಹೆಚ್ಚು. ಅವರ ಕತೆಗಳಲ್ಲಿ ಕಾಣುವ ಮನುಷ್ಯನ ಧಾರಣ ಶಕ್ತಿಯನ್ನು, ಕೇಡಿನ ಪರಿಕಲ್ಪನೆಯನ್ನು ಲೇವಡಿಮಾಡಿದವರೇ ಬಹಳ. ಇಂತಹ ಒಂದು ತಪ್ಪು ಕಲ್ಪನೆಯನ್ನು ನಿಮ್ಮ ಅಧ್ಯಯನ ಶೀಲ ಕೃತಿಯಲ್ಲಿ ಸರಿಪಡಿಸಲು ಪ್ರಯತ್ನಿಸಿದ್ದೀರಿ. ಮಾಸ್ತಿಯವರ ಕಥಾ ಲಕ್ಷ್ಯವಾದ “ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯಲ್ಲಿ” (ಯಶವಂತ ಚಿತ್ತಾಲರು) ಮಾಸ್ತ್ತಿಯವರು ಗ್ರ್ರಹಿಸಿದ್ದೆಷ್ಟು, ಕಂಡೆದ್ದೆಷ್ಟು?, ಕಂಡದ್ದನ್ನು ಇನ್ನೊಬ್ಬರಿಗೆ ಕತೆಮಾಡಿ ಹೇಳುವಲ್ಲಿ ಮಾಸ್ತಿಯವರ ಯಾವ ನಂಬಿಕೆಗಳು ಬದುಕಿನ ಧೋರಣೆಗಳು ಕೆಲಸಮಾಡಿವೆ

Wednesday, November 18, 2020

ವಾಚಕರ ವಾಣಿ: ಪ್ರಜಾಪ್ರಭುತ್ವ ಅಂದರೆ ಇದೇನಾ...? |ಡಿ. ಎಸ್. ನಾಗಭೂಷಣ - D. S. NAGABHUSHANA

ವಾಚಕರ ವಾಣಿ: ಪ್ರಜಾಪ್ರಭುತ್ವ ಅಂದರೆ ಇದೇನಾ...? | Prajavani

Deepavali celebrations!! Full of music and dance!! ಸಖೀಗೀತದಲ್ಲಿ ದೀಪಾವಳಿ 2020

Ancient Folk Art | ನಶಿಸಿ ಹೋಗುತ್ತಿರುವ ಪ್ರಾಚೀನ ಕಲೆ | Togalugombe Aata | Puppet Show

ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ -ಕಪಿಲ್ ಸಿಬಲ್ Kapil Sibal

ಸಂದರ್ಶನ: ಜನ ಕಾಂಗ್ರೆಸ್ಸನ್ನು ಪರ್ಯಾಯವೆಂದು ಭಾವಿಸುತ್ತಿಲ್ಲ | Udayavani – ಉದಯವಾಣಿ

ವಾದಿರಾಜ್| ದಲಿತ ರಾಜಕಾರಣ, ಬಿಹಾರದ ಜಾಡು | Dalits in Bihar Politics

ಸಂಗತ| ದಲಿತ ರಾಜಕಾರಣ, ಬಿಹಾರದ ಜಾಡು | Prajavani

ಬರಗೂರು ರಾಮಚಂದ್ರಪ್ಪ : ಯಾವುದೇ ಅಲೆಯಿಲ್ಲದ ಬಿಹಾರ ಚುನಾವಣೆ / BARAGURU RAMACHANDRAPPA

ವಾಚಕರ ವಾಣಿ: ಯಾವುದೇ ಅಲೆಯಿಲ್ಲದ ಬಿಹಾರ ಚುನಾವಣೆ | Prajavani

Monday, November 16, 2020

ಎಮ್ ಆರ್. ಕಮಲ - ಅವು ಪದಗಳಲ್ಲ , ದನಿಗಳಲ್ಲ /M R. Kamala / Pablo Neruda

ಅವು ಪದಗಳಲ್ಲ, ದನಿಗಳಲ್ಲ -ಎಂ. ಆರ್. ಕಮಲ ಪ್ಯಾಬ್ಲೋ ನೆರೂಡನ ಸಮಗ್ರ ಕಾವ್ಯವನ್ನು ಪರೀಕ್ಷೆಗಾಗಿ ಓದುವಾಗ ಅವಳಿಗೆ ಹತ್ತೊಂಬತ್ತು ವರ್ಷ. ಅವನ ಒಂದೊಂದೇ ಕವಿತೆಯನ್ನು ಎದೆಗಿಳಿಸಿಕೊಳ್ಳುತ್ತಿದ್ದಾಗ ವಿಚಿತ್ರವಾಗಿ ಕಾಡಿದ್ದು ಅವನ `ಕಾವ್ಯ' ಎಂಬ ಕವಿತೆ! ಕವಿತೆಯೇ ಕವಿಯನ್ನು ಅರಸಿಕೊಂಡು ಬಂದು ಬರೆಸಿಕೊಳ್ಳುವುದೇ ಕವಿತೆಯ ವಸ್ತು. ಅದು ಎಲ್ಲಿಂದ ಹೇಗೆ ಬಂತು ಎನ್ನುವುದು ಕವಿಗೆ ತಿಳಿಯುವುದೇ ಇಲ್ಲ. ನದಿಯಿಂದಲೋ, ಶಿಶಿರ ಋತುವಿನಿಂದಲೋ ಒಟ್ಟಿನಲ್ಲಿ ನಿಸರ್ಗದಿಂದ ಬಂದಿದ್ದರೂ ಬಂದಿರಬಹುದೇನೋ ಎಂದು ಕವಿಗೆ ಅನ್ನಿಸುತ್ತದೆ. ಆದರೆ ಅವು ಪದಗಳಲ್ಲ, ದನಿಗಳಲ್ಲ, ಮೌನವಲ್ಲ . ಕತ್ತಲಿನ ಕೊಂಬೆಯಿಂದ, ಭಾವಾತಿರೇಕದ ಬೆಂಕಿಯಿಂದ, ಯಾವುದೋ ರಸ್ತೆಯಲ್ಲಿ, ಒಬ್ಬಂಟಿ ಇದ್ದವನನ್ನು, ಯಾರಿಗೂ ಗುರುತು ಪರಿಚಯವಿಲ್ಲದವನನ್ನು ಬಂದು ಮುಟ್ಟಿ ಎಳೆದು ತಂದುಬಿಟ್ಟಿತು! ಕವಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಆತ್ಮದೊಳಗೊಂದು ಕದಲಿಕೆ ಆರಂಭವಾಗಿದ್ದು ನಿಜ. ಆ ಬೆಂಕಿ ಎಂಥದ್ದೆಂದು ಕಂಡುಕೊಳ್ಳಲು ಪ್ರಯತ್ನಪಟ್ಟು ದುರ್ಬಲವಾದ ಮೊದಲ ಸಾಲೊಂದನ್ನು ಬರೆದ. ಅವನು ಬರೆದದ್ದರ ಬಗ್ಗೆ ಅಂಥ ಆತ್ಮವಿಶ್ವಾಸವು ಇರಲಿಲ್ಲ. ಆ ಸಾಲಿನಲ್ಲಿ ಸತ್ವವೇ ಇರಲಿಲ್ಲ. ಆದರೂ ಅದು ಸ್ವರ್ಗದ ಬಾಗಿಲನ್ನು ತೆರೆಸಿತು. ಗ್ರಹ, ತಾರೆಗಳತ್ತ ಒಯ್ದಿತು. ಮರುಭೂಮಿಯಂತಿದ್ದ ಭೂಮಿಯಲ್ಲಿ ಗಿಡಗಳು ಹುಟ್ಟಿ, ಹೂವರಳಿ ಜೀವಂತಿಕೆ ಮೂಡಿತು. ಕಾವ್ಯದ ಗುಲಾಮನಾಗಿ ಕೆಲವೊಮ್ಮೆನೋವನ್ನು ಅನುಭವಿಸಬೇಕಾಯಿತು. ಆದರೆ ನಕ್ಷತ್ರಗಳೊಂದಿಗೆ ಓಡುತ್ತ, ಎದೆ ಹಗುರಾಗಿ ಗಾಳಿಯಲ್ಲಿ ತೇಲಿತು. ಈ ಇಂಥ ಮಂಕು ಕವಿದ ಗಳಿಗೆಗಳಲ್ಲಿ ತನ್ನನ್ನು ಕೈಹಿಡಿದು ನಡೆಸುತ್ತಿರುವುದೇನು, ನಕ್ಷತ್ರದಿಂದ ನಕ್ಷತ್ರಕ್ಕೆ ಕಾಲಿಡಲು ಅನುವು ಮಾಡಿಕೊಡುತ್ತಿರುವ ಶಕ್ತಿ ಯಾವುದು? ಅಂಗೈ ಅಗಲದ ಜಾಗದಲ್ಲಿ ಕಣ್ಮನ ಸೆಳೆವ ಹೂದೋಟವನ್ನು ನಿರ್ಮಿಸಿಕೊಂಡ ಬಗೆ ಹೇಗೆ? ಎದೆಯ ಕತ್ತಲನ್ನು ಬಗೆದು ಬಗೆದು ಮಿಂಚು ಮರಿಗಳ ತಂದಿದ್ದು ಹೇಗೆ ಎಂದೆಲ್ಲ ಯೋಚಿಸುತ್ತಾಳೆ. ಬಹುಶಃ ಓದು, ಬರವಣಿಗೆಯೇ! `ಅರ್ಥಶಾಸ್ತ್ರ'ವನ್ನೇ ವ್ಯಾಸಂಗಕ್ಕೆ ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದರೂ `ಅರ್ಥ' ಅವಳ ಬದುಕಿನಲ್ಲಿ ವಿಶೇಷ ಅರ್ಥ ಪಡೆದುಕೊಳ್ಳಲೇ ಇಲ್ಲ. ಬದುಕಿನ ಕಾವ್ಯ ಅರ್ಥವಾದ ಹಾಗೆ ಗಣಿತ ತಿಳಿಯಲೇ ಇಲ್ಲ . ಅದರ ಬಗ್ಗೆ ಹೆಮ್ಮೆ, ಕೀಳರಿಮೆ ಯಾವುದೂ ಇಲ್ಲ. ಅವಳು ತನ್ನನ್ನು ಕವಿಯೆಂದು ಗುರುತಿಸಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಯಾರು ಕವಿಯಲ್ಲ? ಬರೆದವರು ಮಾತ್ರವೇ ಎಂಬ ಪ್ರಶ್ನೆ ಅವಳನ್ನು ಕಾಡುತ್ತಿರುತ್ತದೆ. ಬರೆದವರಲ್ಲೂ `ಆಹಾ ಕವಿ' `ಓಹೋ ಕವಿ' ಎನಿಸಿಕೊಂಡವರು ಕವಿಗಳೇ? ಮೊದಲಿನಿಂದಲೂ ಅವಳು ಈ ಸಾಂಸ್ಕೃತಿಕ ರಾಜಕಾರಣಗಳಿಂದ ದೂರ, ಬಹುದೂರ! ಯಾರಾದರೂ ತನ್ನ ಬರಹವನ್ನು ಮೆಚ್ಚಿದರೆ ಮನಸ್ಸು ಅರಳುವುದು ಮಾತ್ರ ಸುಳ್ಳಲ್ಲ. ಬದುಕಿನ ಕವಿತೆಯೇ ಅವಳಿಗೆ ಬರೆದ ಕವಿತೆಗಳಿಗಿಂತ ಹೆಚ್ಚು ಪ್ರಿಯ. ಅಲ್ಲೇ ಬಡಿದಾಡಿ ಹೊಸ ಲಯ, ಛಂದಸ್ಸನ್ನು ಕಂಡುಕೊಂಡಿದ್ದಾಳೆ, ಮಾರ್ಗವನ್ನು ಅರಸಿದ್ದಾಳೆ, ದೇಸಿಯಲ್ಲಿ ನಿಂತಿದ್ದಾಳೆ. ದಿನ ದಿನದ ರಗಳೆಯ ಸಾಂಗತ್ಯವೂ ಅಲ್ಲೇ. ಪ್ರತಿಕ್ಷಣ ತನ್ನ ವಿದ್ಯಾರ್ಥಿಗಳ ಬದುಕನ್ನು ಕವಿತೆಯಾಗಿಸುವುದು ಹೇಗೆ ಎಂದೇ ಆಲೋಚಿಸಿದ್ದಾಳೆ. * ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಅವಳು ಕವಿತೆ ಬರೆಯುತ್ತಲೇ ಇದ್ದಾಳೆ. ಯಾರೋ ಬೈದಾಗ, ಅವಮಾನಿಸಿದಾಗ, ಎದೆಯ ತಳಮಳಗಳನ್ನು ತಾಳದೆ ಹೋದಾಗ, ಪ್ರೀತಿ ಹುಟ್ಟಿದಾಗ, ಖುಷಿಯಾದಾಗ, ನಿಸರ್ಗದೊಂದಿಗೆ ಒಡನಾಡಿದಾಗ, ಕೆಲಸದ ಒತ್ತಡ ತಾಳಿಕೊಳ್ಳುವುದು ಅಸಾಧ್ಯವಾಗಿದ್ದಾಗ ಹೀಗೆ ಎಲ್ಲ ಗಳಿಗೆಗಳಲ್ಲೂ ಕವಿತೆಗಳನ್ನೇ ಆಶ್ರಯಿಸಿದ್ದಾಳೆ. ಬರೆದ ಕವಿತೆಗಳಲ್ಲಿ ಶೇಕಡಾ ಹತ್ತನ್ನು ಕೂಡ ಪ್ರಕಟಿಸಲಿಲ್ಲ. ಪ್ರಕಟಣೆ ಮಾಡಬೇಕು ಎಂದೂ ಅನ್ನಿಸಲಿಲ್ಲ. ಕವಿತೆ ತನ್ನನ್ನೇಕೆ ಅರಸಿ ಬಂದಿತು ಎಂದು ನೆರೂಡನಂತೆ ಅವಳು ಯೋಚಿಸಿದ್ದಾಳೆ. ಅವಳು ಬಹಳ ಹಿಂದೆ ವಿಸಾವ ಸಿಂಬೋಸ್ಕಳ ಕವಿತೆಯೊಂದನ್ನು ಅನುವಾದಿಸಿದ್ದಳು. ಅದರ ಕೆಲವು ಸಾಲುಗಳು ಇಂದು ನೆನಪಿಗೆ ಬರುತ್ತಿವೆ. `ಕವಿತೆ ಬರೆಯದ ಎಷ್ಟೋ ಕುಟುಂಬಗಳು ನಮ್ಮ ಸುತ್ತಮುತ್ತೆಲ್ಲ ಇವೆ. ಈ ಸಾಂಕ್ರಾಮಿಕ ಒಮ್ಮೆ ಹರಡಿತೆಂದರೆ ತಡೆಯುವುದು ಕಷ್ಟ ಜಲಪಾತದಂತೆ ಧುಮ್ಮಿಕ್ಕುತ್ತದೆ ತಲೆತಲಾಂತರಕ್ಕೆ ಹರಿದು ಸುಳಿಗೆ ಸಿಕ್ಕಿಸುತ್ತದೆ' ಕವಿತೆ ಮತ್ತು ಬದುಕಿನ ಕವಿತೆ ಸೃಷ್ಟಿಸಿದ ಸುಳಿಯಲ್ಲಿ ಅವಳು ಸಂತೋಷದಿಂದಲೇ ಸಿಕ್ಕಿಕೊಂಡಿದ್ದಾಳೆ. ಬಿಟ್ಟುಬಿಡಿ. * ಈ ಭಾರದ ದಿನಗಳಲ್ಲಿ ಎಷ್ಟೊಂದು ಕಲೆಗಳು, ಎಷ್ಟೊಂದು ಜನರ ಮನಸ್ಸನ್ನು ಹಗುರಗೊಳಿಸುತ್ತಿವೆ. `ಕಲೆ' (Arts ) ಯನ್ನೇ ತಿರಸ್ಕರಿಸಿ ನಿರ್ಮಿಸಿದ ಕೃತಕ ಸಮಾಜ ಬಹುಶಃ ಈಗ ಆತ್ಮಾವಲೋಕನ ಮಾಡಿಕೊಳ್ಳಬಹುದೇನೋ! (#ಕ್ವಾರಂಟೈನ್ ಪುಸ್ತಕದಿಂದ ಈ ಲೇಖನ ...ಪುಸ್ತಕ ಬೇಕಾದವರು ಸಂಪರ್ಕಿಸಬಹುದು...ಬದುಕು ಬಣ್ಣವೇ ಆಗಿದ್ದ ಕಾಲದ ಒಂದು ಫೋಟೋ )

ಗಿರಿಧರ ಕಾರ್ಕಳ - ಯಾವ ಗುರುವು ತೊಡಿಸಬಲ್ಲ ಬೆಳಕಿನಂಗಿಯ ? Giridhara Karkala

 

Giridhara Karkala