Powered By Blogger

Sunday, August 30, 2020

Sudhanva J. Rao - Monoacting- Tenali Rama and Kali Devi ಸುಧನ್ವ ಜೆ. ರಾವ್....

ಅರವಿಂದ ಚೊಕ್ಕಾಡಿ - - ಬಿಳಿಮಲೆ ಅವರ " ಕಾಗೆ ಮುಟ್ಟಿದ ನೀರು " - ಸಂಘರ್ಷಗಳ ಬದುಕಿನ ಸಂಜೆ ನೋಟ -PURUSHOTTAMA BILIMALE

ಸಂಘರ್ಷಗಳ ಬದುಕಿನ ಸಂಜೆ ನೋಟ | Prajavani


purushottama bilimale ಕಾಗೆಮುಟ್ಟಿದ   ನೀರು

'ಕಾಗೆ ಮುಟ್ಟಿದ ನೀರು' ಆತ್ಮಕಥೆಯ ಕುರಿತು ಪುರುಷೋತ್ತಮ ಬಿಳಿಮಲೆ ಅವರ ಮಾತು PURUSHOTTAMA BILIMALE.

ಎಚ್.ಎಲ್. ಪುಷ್ಪ ರವರವ ಕವನ ಅಮೃತಮತಿಯ ಸ್ವಗತ ವಾಚನ - ಉದಯ ಅಂಕರವಳ್ಳಿ ವಿಶ್ಲೇಷಣೆ -.. H. L. PUSHPA

ಗಿರಿಜಾ ಶಾಸ್ತ್ರಿ - ಪ್ರತಿಭಾ ನಂದಕುಮಾರ್ ಅವರ ಕಾವ್ಯ KANNADA POET PRATHIBHA NANDAKUMAR

ಹೆಣ್ಣು- ಕಾಡು
ಮೂವತ್ತು ವರುಷಗಳ ಮಾತಿದು. ಒಬ್ಬ ಪ್ರಸಿದ್ಧ ವಿಮರ್ಶಕರ ಸ್ತ್ರೀವಾದಿ ಹೆಂಡತಿಯೊಬ್ಬರು " ಮೆಣಸಿನ ಪುಡಿ ಹಪ್ಪಳ ಮಾಡುವ ಹೆಂಗಸರಿಗೆ ಬುದ್ಧಿಯಿಲ್ಲ" ಎಂದು ಸಾರಿದರು. ಹೀಗೆ ಅನೇಕ ಮಹಿಳೆಯರು ಅಂದು ಸ್ತ್ರೀವಾದದ ಭರತದಲ್ಲಿ ಪಿತೃಪ್ರಧಾನತೆ ಎತ್ತಿಹಿಡಿಯುವ ಮೌಲ್ಯಗಳನ್ನೇ ತಾವೂ ಎತ್ತಿಹಿಡಿಯುವ ಅಪಾಯಕ್ಕೆ ಸಿಲುಕಿದರು. ಓಶೋ "ಗಂಡಸು ಪ್ರಬಲ ಅವನಂತೆ ಆಗಬೇಕೆಂದು ಅವನನ್ನು ಅನುಸರಿಸುವ ಮಹಿಳೆಯರು ಇತ್ತ ಹೆಣ್ಣುತನವನ್ನೂ ಉಳಿಸಿ ಕೊಳ್ಳದೇ ಅತ್ತ ಗಂಡೂ ಆಗದೇ ಎಡಬಿಡಂಗಿಗಳಾಗಿಬಿಡುತ್ತಾರೆ" ಎಂದು ಉದ್ಗಾರ ತೆಗೆದದ್ದು ಮಹಿಳೆಯರು ಇಂತಹ ಅಪಾಯಕ್ಕೆ ಸಿಲುಕಿದ ಕಾಲದಲ್ಲೇ.
ಈಗ ಕಾವೇರಿಯಲ್ಲಿ ಬಹಳ ನೀರು ಹರಿದು ಹೋಗಿದೆ.
೯೦ ರ ದಶಕದನಂತರ ಕನ್ನಡ ಮಹಿಳಾ ಕಾವ್ಯದಲ್ಲಿ ಒಂದು ರೀತಿಯ paradigm shift ನ್ನು ಕಾಣುತ್ತೇವೆ. ಇದು ಒಟ್ಟು ಕನ್ನಡ ಸಾಹಿತ್ಯಕ್ಕೆ ನಿಜವಾದರೂ ನಾನು ಸದ್ಯ ಕೇಂದ್ರೀಕರಿಸಿರುವುದು ಮಹಿಳಾ ಕಾವ್ಯವನ್ನು ಮಾತ್ರ. ಹೆಣ್ಣು ಬಲಿಪಶು ಧೋರಣೆ (victim mode) ಯಿಂದ ಯಶಸ್ವೀ ಮಹಿಳೆ ಅಥವಾ ಗೆದ್ದ ಮಹಿಳೆ (survivor mode) ಧೋರಣೆಗೆ ತಿರುವನ್ನು ಪಡೆದುಕೊಂಡ ಮಹತ್ವದ ಹಂತ. ಅದುವರೆಗೂ ಹೆಣ್ಣು ಮೋಹಿನಿ ಅಥವಾ ದೇವಿಯಾಗಿದ್ದವಳು ಇವೆರೆಡು ಅತಿಗಳ ಮಧ್ಯದ ಅನಂತ ಸಾಧ್ಯತೆಗಳ ಸುವರ್ಣ ಮಧ್ಯಮವನ್ನು (grey area) ತೆರೆದುಕೊಂಡ ಹಂತವಿದು. ತನ್ನ ಅಸ್ಮಿತೆಯನ್ನು ಬಲವಾಗಿ ನಿರೂಪಿಸಿದ ಹಂತವಿದು. ಇದರ ಒಂದು ಪ್ರತೀಕವಾಗಿ ಪ್ರತಿಭಾ ನಂದಕುಮಾರ್ ಅವರ "ಹೆಣ್ಣು- ಕಾಡು" ಎನ್ನುವ ಕವಿತೆಯನ್ನು ವಿಶ್ಲೇಷಿಸಿದ್ದೇನೆ. ಆ ಕವಿತೆಯ ಫೋಟೋವನ್ನು ಸಹ ಹಾಕಿದ್ದೇನೆ ಆಸಕ್ತರು ಗಮನಿಸಬಹುದು.
ಪ್ರತಿಭಾ ಇಲ್ಲಿ ಹೆಣ್ಣನ್ನು 'ಕಾಡು' ಎನ್ನುತ್ತಾರೆ. ಇದು ಕ್ರಿಯಾಪದವಾಗಿ ಕೂಡಾ ಯಶಸ್ವಿಯಾಗಿದ್ದರೂ ನಾಮಪದವಾಗಿ ತೆರೆದುಕೊಳ್ಳುವ ಅರ್ಥಾಂತರಗಳು ವಿಸ್ಮಯಗೊಳಿಸುತ್ತವೆ.
ಕಾಡು ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು, ಅನೂಹ್ಯವಾದದ್ದು, ಅಭೇದ್ಯವಾದದ್ದು, ನಿಗೂಢವಾದದ್ದು, ದಟ್ಟ ಮರಗಳಿಂದ ಕೂಡಿರುವಂತಹದ್ದು. ಕ್ರೂರ ಪ್ರಾಣಿಗಳಿರುವುದರಿಂದ ಭಯಾನಕವಾಗಿರುವಂತಹದ್ದು, ಜಿಂಕೆ, ನವಿಲು, ಹಸಿರು, ನದಿ ಇವುಗಳು ಇರುವುದರಿಂದ ಆಪ್ಯಾಯಮಾನವಾಗಿರುವಂತಹದ್ದು ಕೂಡ. ಕಾಡು ಮೋಡಗಳನ್ನು ತಡೆದು ಮಳೆಗೆ ಕಾರಣವಾದುದರಿಂದ, ತನ್ನ ಘ್ಹನವಾದ ಬೇರುಗಳಿಂದ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಕಾರಣದಿಂದ ಇದು ಜೀವದಾಯನಿಯೂ ಹೌದು. ಪುರುಷ ತನ್ನ ಮೋಕ್ಷ ಸಾಧನೆಗಾಗಿ ಹೊಗುವ ಗಹ್ವರವೂ ಹೌದು. ಹಾಗಾಗಿ ಸರಿಯಾದ ಸಿದ್ಧತೆ ಯಿಲ್ಲದಿದ್ದರೆ ಈ ಕಾಡಿನೊಳಗೆ ಪ್ರವೇಶ ಸಾಧ್ಯವಿಲ್ಲ.
ಹೆಣ್ಣು ಹೀಗೆ ಕಾಡಿನ ಹಾಗೆ ಅನೇಕ ವೈರುಧ್ಯಗಳ ಮೊತ್ತ. ಅಷ್ಟೇ ಸಂಕೀರ್ಣ, ಅನೇಕ ದ್ವಂದ್ವಗಳ ಊಟೆ. ಮಹಾ ಶಕ್ತಿಶಾಲಿ.
ಪ್ರತಿಭಾ ಅವರ 'ಹೆಣ್ಣು- ಕಾಡು' ಕವಿತೆ ಓದಿದ ತಕ್ಷಣ ನನಗೆ F.W.Bain ಎನ್ನುವವನು ತನ್ನ "Digit of the Moon" ಗ್ರಂಥದಲ್ಲಿ ಉಲ್ಲೇಖಿಸಿದ ಒಂದು ಸಂಗತಿ ನೆನಪಾಗುತ್ತಿದೆ. ಅದನ್ನು ಕ್ವಚಿತ್ತಾಗಿ ಇಲ್ಲಿ ಹಂಚಿಕೊಳ್ಳುತ್ತಿರುವೆ.
ಒಮ್ಮೆ ಸೃಷ್ಟಿಕರ್ತ , ಸೃಷ್ಟಿಯ ಪ್ರಾರಂಭದಲ್ಲಿ ಹೆಣ್ಣನ್ನು ಸೃಷ್ಟಿಸಲು ತೊಡಗಿದ ತಕ್ಷಣ ಅವನಿಗೆ ಹೊಳೆಯಿತಂತೆ- ಈಗಾಗಲೇ ಗಂಡನ್ನು ಸೃಷ್ಟಿಸುವುದರಲ್ಲಿಯೇ ಎಲ್ಲ ಸಲಕರಣೆ, ಸಾಧನೋಪಾಯಗಳೆಲ್ಲ ಮುಗಿದು ಹೋಗಿ ಯಾವುದೇ ಮೂಲವಸ್ತುವೂ ಉಳಿದಿಲ್ಲವೆಂದು. ಹೀಗಾಗಿ ಬಹಳ ಕಾಲದ ತಪಸ್ಸಿನ ನಂತರ ಅವನು ತನ್ನ ತಪಸ್ಸಿನ ಶಕ್ತಿಯಿಂದ ಏನು ಮಾಡಿದನೆಂದರೆ, ಚಂದಿರನ ದುಂಡಾದ ಆಕಾರ, ಬಳ್ಳಿಗಳ ಬಳಕುವ ಸಪೂರತೆ, ಆನೆಯ ಸೊಂಡಿಲಿನ ಲಾಲಿತ್ಯ, ಜಿಂಕೆಯ ಕಣ್ಣೋಟ, ಜೊಂಪೆಯಾದ ದುಂಪಿಗಳ ಸಾಲು, ಸೂರ್ಯನ ಕಿರಣಗಳ ಹೊಳಪು, ಮೋಡದ ತುಂತುರು, ಗಾಳಿಯ ಚಂಚಲತೆ, ಮೊಲದ ಪುಕ್ಕಲುತನ, ನವಿಲಿನ ಜಂಭ, ಗಿಣಿಯ ಮೃದುತ್ವ, ಬೆಂಕಿಯ ಬಿಸುಪು, ಮಂಜಿನ ತಂಪು, ಹಠಮಾರಿತನದ ಕಠೋರತೆ, ಮೂರ್ಖರ ಹರಟೆ, ಕೋಗಿಲೆಯ ಕಂಠ, ಬಕದ ಸಮಯ ಸಾಧಕತೆ, ಚಕ್ರವಾಕದ ನಿಷ್ಥೆ- ಈ ಎಲ್ಲವನ್ನೂ ಒಟ್ಟು ಸೇರಿಸಿ ಹೆಣ್ಣೆಂಬ ಜೀವವನ್ನು ಸೃಷ್ಟಿ ಮಾಡಿ ಗಂಡಿಗೆ ಕೊಟ್ಟನಂತೆ. ಅಗ ಗಂಡು "what is to be done? for, I cannot live either with or without her" ಎಂದು ಉದ್ಗಾರ ತೆಗೆದನಂತೆ.
ಪ್ರತಿಭಾ ಅವರ ಹೆಣ್ಣು - ಕಾಡು ಕವಿತೆಯಲ್ಲಿರುವ ಹೆಣ್ಣು ಕೂಡ F.W.Bain ಹೇಳಿದ ಹೆಣ್ಣೇ. ಇಂತಹ ವೈರುಧ್ಯಗಳ, ಸಂಕೀರ್ಣ ವ್ಯಕ್ತಿತ್ವದ ಹೆಣ್ಣು ಪಿತೃಪ್ರಧಾನತೆಯ ಸಪಾಟು ದೃಷ್ಟಿಕೋನಕ್ಕೆ (linear) ಹೇಗೆ ತಾನೇ ದಕ್ಕಿಯಾಳು?
ಪ್ರತಿಭಾ ಅವರ ಈ 'ಕಾಡು' ಹೆಣ್ಣಿನ ಭೌತಿಕ ಶರೀರವನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಇದು ಅವಳ ಅಂತರಂಗವನ್ನು, ಅವಳ ಮನೋವಲಯವನ್ನು ಪ್ರತಿನಿಧಿಸುತ್ತದೆ.
ಇಲ್ಲಿ, ಅವಳ ತಲೆಯೊಳಗೆ ಹುಲಿಯ ಗರ್ಜನೆ ಇದೆ. ಅವಳದು ಕರಡಿಯ ನಡಿಗೆ, ಹೊಟ್ಟೆಯೊಳಗೆ ಘೇಂಡಾಮೃಗ, ಎದೆಯೊಳಗೆ ಕುಣಿಯುವ ಹುಲ್ಲೆ, ಮಿಡಿಯುವ ಹೃದಯದಲ್ಲಿ ಮಿಂಗುಡುವ ಬೆಕ್ಕು, ಅರಳಿದರೆ ನೆಲ ನಡುಗುವ ಪಾರಿಜಾತ ಅವಳು. ಸುಟ್ಟರೂ ಈ ಕಾಡು ತನ್ನಿಂದ ತಾನೇ ಚಿಗುರನ್ನು ಚಿಮ್ಮಿಸುತ್ತದೆ. ಹೆಣ್ಣು ಹಾಗೇ ಫೀನಿಕ್ಸ್ ಹಕ್ಕಿಯಂತೆ ಬೂದಿಯಿಂದಲೇ ಎದ್ದು ಬರುತ್ತಾಳೆ. ಅವಳು ಸೃಷ್ಟಿಗೆ ಕಾರಣವಾಗುವ ಆಡೆಮ್ ಮತ್ತು ಈವ್ ಇವರು ತಿನ್ನುವ ಸೇಬು.
ಪುರುಷ ತೋಳು ಚಾಚಿದರೆ ಬರೀ ಗಾಳಿ. ಅದರೆ ಇವಳು ಎದೆತೆರೆದರೆ ಸಂಪೂರ್ಣ ಸಮ್ರಾಜ್ಯ.
ಹೀಗೆ ಪ್ರೀತಿಸಿದವರಿಗೆ ತನ್ನನ್ನೇ ಕೊಟ್ಟುಬಿಡುವ ಹೆಣ್ಣೆಂದರೆ ಪುರುಷನಿಗೆ ಸದಾ ಭಯ. ಬದುಕು ನಶ್ವರ ವಾಗಿರುವುದರಿಂದ ಅವನು ಸಾವಿನ ಬಗ್ಗೆ ಮತನಾಡುತ್ತಾನೆ. ಆನಂತರದ ಬಗ್ಗೆ ಮಾತನಾಡುತ್ತಾನೆ. ಹೆಣ್ಣು ಈ ನೆಲಕ್ಕಂಟಿದವಳು. ಆಕಾಶಗಾಮಿಯಾದ ಪುರುಷನಿಗೆ ನೆಲದ ( ಹೆಣ್ಣಿನ)ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಕ್ಕಿ ದೊಪ್ಪನೆ ನೆಲಕ್ಕೆ ಬೀಳುವ ಭಯ. ಆದುದರಿಂದಲೇ ಅವಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಓಡುತ್ತಾನೆ. "ಥೂ ಹೇಡಿ ದೇವರು ನೀನು" ಎನ್ನುತ್ತಾರೆ ಕವಿ. ಗಂಡನೂ ದೇವರೇ ತಾನೇ? 'ಎಷ್ಟು ಕುರಿ ಕೋಣಗಳನ್ನು' ನುಂಗಿ ನೀರುಕುಡಿದರೂ ಹೆಣ್ಣಂತೆ ಪ್ರೀತಿಸುವುದನ್ನು ಅರಿಯದ 'ದಡ್ಡ' ಅವನು.
'ಅವಳು ಅತ್ತರೆ ಮೊಲೆ ಕೊಡುವ ತಾಯಿ/ ಅಳದಿದ್ದರೂ ಚುಕ್ಕು ತಟ್ಟುವ ಧಾರಾಳಿ' ಈ ಸಹನೆ, ಪ್ರೀತಿ ಗಂಡಿಗೆಲ್ಲಿ ಬರಬೇಕು? ಅವಳ ಪ್ರೀತಿ ಅನಿಯಂತ್ರಿತವಾದುದು (unconditional).
ಅವಳಂತೆ ಪ್ರೀತಿಸುವುದನ್ನು ಕಲಿತು ಬಿಟ್ಟರೆ ಅವನೂ ಹೆಣ್ಣಾಗಿಬಿಡುತ್ತಾನೆ. ಅವನಿಗೆ ಸದಾ ಹೆಣ್ಣಾಗುವ ಭಯ. 'ಬಳೆ ತೊಡುವ ಅಪಮಾನದ ಸಿಂಹ ಸ್ವಪ್ನ' ಅವನು ದಡ್ಡ ಯಾಕೆಂದರೆ ಆತ್ಯಂತಿಕವಾದ ಸತ್ಯವನ್ನು ಹಿಡಿಯಲು (absolute) ಹೆಣ್ಣಾಗಬೇಕಾದುದು ಆವಶ್ಯಕ ಎಂದು ಅವನಿಗೆ ಗೊತ್ತಿಲ್ಲ. ಕೃಷ್ಣನೊಬ್ಬನೇ ಗಂಡಸು ಉಳಿದೆಲ್ಲಾ ಭಕ್ತರು ಗೋಪಿಯರು. ಶಿವನೊಬ್ಬನೇ ಗಂಡಸು ಲಿಂಗಪತಿ, ಉಳಿದ ಶರಣರೆಲ್ಲಾ ಸತಿಯರು -ಶರಣ ಸತಿ. ಇದನ್ನು ಅರಿಯದ ದಡ್ಡ ಅವನು.
ಪ್ರತಿಭಾ ಇಲ್ಲಿ ಹೆಣ್ಣು =ದೇವಿ= ಪ್ರಕೃತಿ ಎನ್ನುವ ಒಂದು ಸೂತ್ರವನ್ನು ಹರಿಯಬಿಟ್ಟಿದ್ದಾರೆ. ದುರಂತವೆಂದರೆ ಇಂತಹ ಶಕ್ತಿಶಾಲಿಯಾದ ಹೆಣ್ಣಿನ ಸ್ವರೂಪದ ಬಗ್ಗೆ ಅವನಿಗೆ ವಿಸ್ಮೃತಿ ಬಂದುಬಿಟ್ಟಿದೆ. ಆದುದರಿಂದಲೇ ಅವನಿಗೆ ಅವಳು ಉಪಭೋಗದ ವಸ್ತುವಾಗಿ, ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣಿಸುತ್ತಾಳೆ. ಅವನ ಕಾಲೊರೆಸು ಆಗಿದ್ದಾಳೆ.
ಆದುದರಿಂದಲೇ ಅವಳು ಅವನ ಮುಂದೆ ದೇಹಿ ಎಂದು ಮೈ ಕುಗ್ಗಿಸಿ, ಹಿಡಿಯಾಗಿಸಿ ಬೇಡಬೇಕಾಗಿದೆ. ಅವನಿಗೋ ಇವಳ ದೈಹಿಕ ಆಕಾರ (ಸೀರೆಯ ಬಣ್ಣದ ಹೊರತು) ಬಿಟ್ಟರೆ ಬೇರೇನೂ ಕಾಣದು. ಯಾಕೆಂದರೆ ಅವನಿಗೆ ದೃಷ್ಟಿಮಂದವಾಗಿಬಿಟ್ಟಿದೆ.
ಹೀಗೆ ಹೆಣ್ಣು ಇರುವ ಮತ್ತು ಅವಳನ್ನು ಸಮಾಜ ಕಾಣಿಸುವ ನಡುವಿನ ವೈರುಧ್ಯಗಳನ್ನು ಪ್ರತಿಭಾ ಸೊಗಸಾಗಿ ಪರಿಣಾಮಕಾರಿಯಾಗಿ ಬಿಚ್ಚಿಟ್ಟಿದ್ದಾರೆ.

Saturday, August 29, 2020

ಮುರಳೀಧರ ಉಪಾಧ್ಯ ಹಿರಿಯಡಕ -ಕನ್ನಡಕ್ಕೆ ಬಾಸೆಲ್ ಮಿಷನರಿಗಳ ಕೊಡುಗೆ { ಪುಸ್ತಕ ವಿಮರ್ಶೆ } BASEL MISSION and KANNADA

ಧಾರವಾಡದ  ಕಿಟ್ಟೆಲ್ ವಿಜ್ಜಾನ  ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಿಕೆಯಾಗಿರುವ ಡಾ| ಗೀತಾ ಎಸ್. ನಂದಿಹಾಳ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ  ಪದವಿಗಾಗಿ ಬರೆದ ಸಂಪ್ರಂಧ ’ ಕನ್ನಡಕ್ಕೆ ಬಾಸೆಲ್ ಮಿಶನರಿಗಳ ಕೊಡ್ದುಗೆ. ಶುಸ್ಸೆರ್ ಎ. ಅವರು ’ಬಾಸೆಲ್ ಮಿಶನ್ ಸಂಘದ ನೂರು  ವರ್ಷಗಳ ಚರಿತ್ರೆಯು’ ಎಂಬ ಗ್ರಂಥ ೧೯೧೫ರಲ್ಲಿ ಮಂಗಳೂರಿನಲ್ಲಿ ಪ್ರಕಟವಾಯಿತು. ಡಾ| ಶ್ರೀನಿವಾಸ ಹಾವನೂರ್ ಅವರ್ ’ ಹೊಸ ಗನ್ನಡ ಅರುಣೋದ’ (೧೯೭೪) ಐ.ಮಾ. ಮುತ್ತಣ್ಣ ಅವರ್ ೧೯ನೆಯ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ’ (೧೯೭೩) ಡಾ| ಪೀಟರ್ ವಿಲ್ಸನ್ ಪ್ರಭಾಕರ ಅವರ ’ ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಶನ್, (೧೯೮೯), ಮ್ಯಾಥ್ಯೂ ಕೆ.ಎಂ. ಅವರ್ ರೆ| ಎಫ್. ಕೆಟೆಲ್ ಒಂದು ಸಮಗ್ರ ಅಧ್ಯಯನ್ (೧೯೯೪೭), ಜಿ.ಎಂ. ಹೆಗಡೆ  ಅವರ್ ರೆ| ಫರ್ಡಿನಾಂಡ್ ಕಿಟ್ಟೆಲ್ ಜೀವನ ಹಾಗೂ ಕೃತಿ ಸಮೀಕ್ಷೆ, (೧೯೯೪), ಡಾ| ಎಡ್ವರ್ಡ್ ನೊರೋನಾ ಅವರ ’ ಕನ್ನಡ ಧಾರ್ಮಿಕ ಸಾಹಿತ್ಯಕ್ಕೆ ಮಿಶನರಿಗಳ ಕೊಡುಗೆ(೧೯೯೬) ಇಂಥ ಅಧ್ಯಯನಗಳ ಮುಂದು ವರಿಕೆಯಾಗಿ ಡಾ| ಗೀತಾ ನಂದಿಹಾಳರ ಸಂಪ್ರಬಂಧ ಪ್ರಕಟವಾಗಿದೆ.


ಬಾಸೆಲ್ ಮಿಶನ್ (ಇವ್ಯಾಂಜಲಿಕರ್ ಮಿಶನರಿ ಸೊಸೈಟಿ   ಆಫ್ ಬಾಸೆಲ್) ೧೮೧೫ ರಲ್ಲಿ  ಜರ್ಮನಿಯ ಬಾಸೆಲ್ ಪಟ್ಟಣದಲ್ಲಿ ಆರಂಭಗೊಂಡಿತು. ನೂರ ಐವತ್ತಕ್ಕಿಂತ ಹೆಚ್ಚು ಮಂದಿ ಬಾಸೆಲ್ ಮಿಶನರಿಗಳು ಕರ್ನಾಟಕಕ್ಕೆ ಬಂದರು. ಈ ನಾಡು-ನುಡಿಗಳಿಗೆ ವಿಶಿಷ್ಟ ಕೊಡುಗೆ ನೀಡಿದರು.  ಹೆರ್ಮನ್ ಮೊಗ್ಮಿಂಗ್, ಜಾನ್ ಲೆಯರ್, ಯೋಹಾನ್ಸನ್ ಮುಲ್ಲರ್ ಗಾಡ್ ಫ್ರಿ ಎಚ್. ವೈಗಲ್, ಜಾರ್ಜ್ ವುರ್ಢ್, ಗಸ್ತಾವ್ ಕೀನ್, ಫೆಡ್ರಿಕ್ ಝಿಗ್ಲಿರ್, ಫರ್ಡಿನಾಂಡ್ ಕಿಟೆಲ್, ಬೆನಿಗಸ್ ಬಿ. ಕ್ರೇಟರ್,  ಕೌಫ್ ಮನ್, ಜೆ. ಮ್ಯಾಕ್, ಹೆರ್ಮನ್ ರಿಷ ಇವರೆಲ್ಲ ಧಾರ್ಮಿಕ ಸಾಹಿತ್ಯ, ಪಠ್ಯ ಪುಸ್ತಕ, ನಿಘುಂಟು ರಚನೆ ಹಾಗೂ ಗ್ರಂಥ ಸಂಪಾದನೆಯ  ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಗೀತಾ ನಂದಿಹಾಳರು ಈ ಸಂಪ್ರಬಂಧದಲ್ಲಿ ಬಾಸೆಲ್ ಮಿಶನ್ ಸ್ಥಾಪನೆ, ಪರಂಪರೆ, ಭಾರತಕ್ಕೆ ಮಿಶನರಿಗಳ ಆಗಮನ, ಕರ್ನಾಟಕಕ್ಕೆ ಬಾಸೆಲ್ ಮಿಶನ್, ಮಿಶನರಿಗಳ ಜೀವನ   ಸಾಧನೆ, ಅವರ ಸಾಹಿತ್ಯ ಸೇವೆಯ  ವಿವಿಧ ಮುಖಗಳು,  ವಿದೇಶೀ ಭಾಷೆಗಳಲ್ಲಿ ಕನ್ನಡ ಸಂಶೋಧನೆ ಈ ವಿಷಯಗಳನ್ನು ಸಮೀಕ್ಷಿಸಿದ್ದಾರೆ.
ಬಾಸೆಲ್ ಮಿಶನ್ ಭಾರತೀಯ  ಧರ್ಮ ಶಾಸ್ತ್ರ ಪ್ರಾಚೀನ ಸಾಹಿತ್ಯ ಹಾಗೂ ಸಂಸ್ಕೃತಿಯ ಅಧ್ಯಯನಗಳಿಗೆ ಮುಕ್ತ ಅವಕಾಶ ನೀಡಿತು. ಯೇಸುಕ್ರಿಸ್ತನನ್ನು ಕಥಾನಾಯಕ ನನ್ನಾಗಿ ಮಾಡಿಕೊಂಡು ಕಿಟ್ಟೆಲ್ಲರು ಕನ್ನಡದಲ್ಲಿ ಬರೆದ ’ ಕಥಾಮಾಲೆ’ಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಐತಿಹಾಸಿಕ ಮಹತ್ವವಿದೆ. ಕಿಟ್ಟೆಲ್ ರ ಕ್ರೈಸ್ತ ಸಭಾ ಚರಿತ್ರೆ’ ೭೮೮ ಪುಟಗಳ ದೊಡ್ಡ ಪುಸ್ತಕ. ಇದರಲ್ಲಿ ಹೊಸಗನ್ನಡ   ಗದ್ಯ   ವಿಕಾಸದ ಹೆಜ್ಜೆ ಗುರುತುಗಳಿವೆ. ಕನ್ನಡ ಗ್ರಂಥ ಸಂಪಾದನೆಗೆ ಬುನಾದಿ ಹಾಕಿದ ವರು ಬಾಸೆಲ್ ಮಿಶನರಿಗಳು.ಬಾಸೆಲ್ ಮಿಶನ್ ಪ್ರಕಟಿಸಿದ ಜೈಮಿನಿ ಭಾರತ (೧೮೪೮), ’ಬಸವ ಪುರಾಣ’ (೧೮೫೦), ’ದಾಸರ ಪದಗಳು’
(೧೮೫೦) ಇಂಥಗಳಿಂದ ಕನ್ನಡ ಸಾಹಿತ್ಯ, ಹಸ್ತಪ್ರತಿ ಪರಂಪರೆಯಿಂದ ಮುದ್ರಣ ಪರಂಪರೆಯತ್ತ ಚಲಿಸಿತು. ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು ’ನಾನೇರು ವೆತ್ತರಕೆ ನೀನೇರಬಲ್ಲೆಯಾ’ ಎಂದು ಸವಾಲು ಹಾಕುವ ಅಸಾಧಾರಣ ನಿಘಂಟು, ಯಕ್ಷಗಾನ  ಜನಪದ  ಸಾಹಿತ್ಯದ ಅಧ್ಯಯನದಲ್ಲಿ ಮಿಶನರಿಗಳು ಮೊದಲಿಗರಾಗಿದ್ದಾರೆ.

 ತಾನು ಆಯ್ಕೆ ಮಾಡಿಕೊಂಡ ವಿಷಯದ ತಲಸ್ಪರ್ಶಿ ಅಧ್ಯಯನ ನಡೆಸಿ, ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಂಪ್ರಬಂಧವೊಂದನ್ನು ನೀಡಿದ ಡಾ| ಗೀತಾ ನಂಡಿಹಾಳಾರು ಅಭಿನಂದನಾರ್ಹರು. ಇದು ’ಎತ್ತಣ ಬಾಸೆಲ್, ಎತ್ತಣ ಕರ್ನಾಟಕ, ಎತ್ತಣೆಂದೆತ್ತ ಸಂಬಂಧವಯ್ಯಾ ಎಂದು ಬೆರಗುಗೊಳಿಸುವ ಸಂಪ್ರಬಂಧ.
ಮುರಳೀಧರ ಉಪಾಧ್ಯ ಹಿರಿಯಡಕ

ಕನ್ನಡಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ
ಲೇ:ಡಾ| ಗೀತಾ ಎಸ್. ನಂದಿಹಾಳ ಪ್ರ: ಕಿಟ್ಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ-೫೮೦೦೦೧
ಮೊದಲ ಮುದ್ರಣ:೨೦೦೩ ಬೆಲೆ ರೂ.೨೦೦.

Friday, August 28, 2020

ರೂಪಾ ಹಾಸನ - ಲೈಂಗಿಕ THE HEINOUS STORY OF FORCED PROSTITUTION AND AFTERMATH

RAGHUPATHI THAMANKAR ---ಮುಂಡಾಜೆ ರಾಮಚಂದ್ರ ಭಟ್ ಅವರ " - " ಚೌತಿಯ ಪದ "

ಏನೀ ಅದ್ಭುತವೇ ಗೆಳತೀ..
ಮುಂಡಾಜೆಯ ಕವಿ ದಿ.ಬಿ .ರಾಮಚಂದ್ರ ಭಟ್ಟರು ಬರೆದ ' ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು..' .
ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಅಃ ಬಳಸಿ ಈ ಹಾಡನ್ನು ಬರೆದವರ ಬಗ್ಗೆ ಹಾಗೂ ಅವರ ಹಾಡುಗಳ ಬಗ್ಗೆ ಇನ್ನಷ್ಟು.( ಅವರು ನನ್ನ ಚಿಕ್ಕಪ್ಪ. ಅವರನ್ನು ಸ್ಮರಿಸುತ್ತ ಮುಂದಿನ ಲೇಖನ ಬರೆಯುತ್ತಿರುವೆ .ಅವರಿಗೆ ಈ ಲೇಖನ ಅರ್ಪಣೆ)
ನಾಲ್ಕು ದಿನಗಳಿಂದ ಗಣಪತಿ ಯನ್ನು ಕುರಿತ ಈ ಮೇಲಿನ ಹಾಡು ಮೊಬೈಲ್ ನಲ್ಲಿ ಭರತ ನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಮಾನಸಿ ಸುಧೀರ್ ರವರ ಭಾವಾಭಿನಯದ ಮೂಲಕ ರಿಂಗಣಿಸುತ್ತಿದೆ. ಅದನ್ನು ಬರೆದವರು ಯಾರು ಎಂದೆಲ್ಲ ಪೇಪರುಗಳಲ್ಲಿ ಬರುತ್ತಿದೆ ಪ್ರಜಾವಾಣಿಯಲ್ಲಿಯ ವಿವರವಾದ ಲೇಖನ ಓದಿರಿ .ಹಾಡನ್ನು ಕೇಳಲು ಅದರ ಕೊಂಡಿಯನ್ನು ಕೊನೆಗೆ ಕೊಟ್ಟಿರುವೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಹತ್ತಿರದ ಮುಂಡಾಜೆ ಎಂಬ ಹಳ್ಳಿಯ ದಿ . ಬಿ ರಾಮಚಂದ್ರ ಭಟ್ಟರು ಸುಮಾರು ಏಳು ದಶಕಗಳ ಹಿಂದೆ ಬರೆದ ಈ ಹಾಡು , ಲಾಕ್ ಡೌನ್ ಸ್ಥಿತಿಯಲ್ಲಿನ ಈ ಅವಧಿಯಲ್ಲಿ ಭರತ ನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಮಾನಸಿ ಸುಧೀರ್ ರವರ ಜೀವತುಂಬಿದ ಅಭಿನಯ ಮೂಲಕ ವೀಡಿಯೋ ರೂಪದಲ್ಲಿ ಯೂಟ್ಯೂಬ್ ಮುಖಾಂತರ ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ಬಹುತೇಕ ಎಲ್ಲರ ಮನೆ ತಲುಪಿದೆ . ಸರಿ ಸುಮಾರು ಇಪ್ಪತ್ತು ಲಕ್ಷಜನರು ವೀಕ್ಷಿಸಿರ ಬೇಕು ಎಂದು ಒಂದು ಅಂದಾಜು ತಿಳಿಸುತ್ತದೆ .ಒಂದು ಒಳ್ಳೆಯ ಗೀತೆ ಭಾವತುಂಬಿ ಹಾಡಿ ನೃತ್ಯ ರೂಪದಲ್ಲಿರಲು ಮಾತ್ರ ಈ ಥರ ಜನಮಾನಸದಲ್ಲಿ ಉಳಿದು ಪಸರಿಸುತ್ತದೆ ಅಲ್ಲವೇ ? ನನ್ನ ವಾಟ್ಸಾಪ್ ಗೇನೇ ಸುಮಾರು ಎಪ್ಪತ್ತಕ್ಕೂ ಜನರು ಇದನ್ನು ಹಂಚಿದರು.
ಅದನ್ನು ಬರೆದ ಕವಿ ಈ ಹಾಡನ್ನು ಆ ಕಾಲದಲ್ಲಿ ಸುಮಾರು ೫೦೦೦ ಜನರನ್ನು ತಲುಪಿಸಲು ಅಂದರೆ ಐವತ್ತರ ದಶಕದಲ್ಲಿ ನೂರಾರು ಮೈಲಿಗಳನ್ನು ಸೈಕಲ್ಲಿನಲ್ಲೇ ಹೋಗಿ ಹಾಡಿ ಹಂಚಿದರು. ಅವರು ಬರೆದ ಕವನ ಸಂಕಲನಗಳನ್ನು ಮಾರಲು ಅವರು ಮನೆಮನೆಗೆ ಹೋದರು .ಅದರಲ್ಲೇ ಆನಂದವನ್ನು ಕಂಡುಕೊಂಡು ತೃಪ್ತಿಪಟ್ಟರು . ಅವರು ಬರೆದುದು ಒಟ್ಟು ಎಂಟು ಪುಸ್ತಕಗಳನ್ನು .ಆವಾಗ ಪುಸ್ತಕಗಳ ರೇಟು ಎಷ್ಟು ಗೊತ್ತಾ ನಾಲ್ಕಾಣೆ ಯಿಂದ ಐವತ್ತು ಪೈಸೆ . ಹೆಚ್ಚೆಂದರೆ ಒಂದುರೂಪಾಯಿ . ಪುಸ್ತಕದ ದರ ಹೆಚ್ಚುಮಾಡುವಾಗ ತಮ್ಮ ನಿವೇದನೆಯಲ್ಲಿ ಅವರು ಈ ಸಲ ಪುಸ್ತಕಕ್ಕೆ ದರ ಹೆಚ್ಚುಮಾಡುತ್ತಿದ್ದೇನೆ ಸಹಕರಿಸಿ ಎಂದು ಹೇಳಿಕೊಂಡದ್ದುಂಟು .ಅಂತಹುದರಲ್ಲಿಯೇ ಅವರ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡವು.ಅವರ ಒಂದು ಪುಸ್ತಕ ರಾಮಣ್ಣನ ರಗಳೆಗಳು ಅವರ ಮರಣಾನಂತರ ಪ್ರಕಟವಾಯ್ತು. ( ಸಂಪಾದಕರು .ಪ್ರೊ.ಎನ್ ಜಿ.ಪಟವರ್ಧನ್ ಉಜಿರೆ. )
ಈ ಹಾಡು ಬರೆದ ದಿ . ಬಿ ರಾಮಚಂದ್ರ ಭಟ್ ತಾಮ್ಹ ನ್ ಕರ್ ಇವರು ನನ್ನ ಖಾಸಾ ಚಿಕ್ಕಪ್ಪ.
ಬಿ ರಾಮಚಂದ್ರ ಭಟ್ಟರು ಮುಂಡಾಜೆಯ ಬತ್ರಬೈಲ್ ಎಂಬ ಮನೆಯಲ್ಲಿ ೧೪-೫-೧೯೧೪ ರಂದು ಜನಿಸಿದರು . ಇವರಿಗೆ ಐವರು ಸಹೋದರಿಯರು ಹಾಗೂ ಇನ್ನಿಬ್ಬರು ಅಣ್ಣಂದಿರು ದೊಡ್ಡಣ್ಣ ವಯಲಿನ್ ವಾದಕರು ಮಹಾದೇವ ತಾಮ್ಹನ್ ಕರ್ (ನನ್ನ ತಂದೆಯವರು ) ಹಾಗೂ ಇನ್ನೊಬ್ಬ ಅಣ್ಣ ನಾರಾಯಣ ತಾಮ್ಹನ್ ಕರ್ ಹಾರ್ಮೋನಿಯಂ ವಾದಕರು (ಇವರು ಸಂತ ಅಚ್ಚುತದಾಸರಿ ಗೆ ಸುಮಾರು ಮೂವತ್ತು ವರ್ಷಗಳ ಕಾಲ ಸಾಥ್ ಕೊಟ್ಟವರು ).
ನನ್ನ ಚಿಕ್ಕಪ್ಪನಿಗೆ ಹಾಡುಗಳನ್ನು ಬರೆಯುವ ಹುಚ್ಚು ಬಾಲ್ಯದಿಂದಲೇ ಇತ್ತು ಹಾಗೂ ಹಾಡುಗಳಿಗೆ ಸಂಗೀತ ವನ್ನು ಅಣ್ಣಂದಿರೂ ಕೊಡುತ್ತಿದ್ದುದು ಇದೆ . ಸ್ವತಃ ಹಾಡಿಕೊಂಡು ರಾಮಚಂದ್ರ ಭಟ್ಟರು ಹಾರ್ಮೋನಿಯಂ ನುಡಿಸುವುದರಲ್ಲಿಯೂ ಎತ್ತಿದ ಕೈ. ನಮ್ಮ ಮೂಲ ಮನೆಯನ್ನು ಪ್ರವೇಶಿಸಿದ ತಕ್ಷಣ ಎಡಗಡೆಯ ದೊಡ್ಡ ಕೋಣೆಯಲ್ಲಿಯೇ ಅವರು ಹಾಡುಗಳನ್ನು ಬರೆಯುತ್ತಿದು ಎಂದು ನನ್ನಲ್ಲಿ ಆಗಾಗ್ಗೆ ಹೇಳಿಕೊಂಡಿದ್ದುಂಟು. ಆವಾಗ ಈಗಿನಂತೆ ಬಾಲ್ ಪೆನ್ನು ಗಳು ಇರಲಿಲ್ಲ . ಆವಾಗ ನಿಬ್ ಇರುವ ಪೆನ್ನುಗಳ ಮೂತಿಯನ್ನು ಆಗಾಗ್ಗೆ ಶಾಯಿಯಲ್ಲಿ ಮುಳುಗಿಸುತ್ತಿರಬೇಕಿತ್ತು . ಒಮ್ಮೆ ಬರೆದರೆ ತಕ್ಷಣ ಅಳಿಸುವಂತಿಲ್ಲ . ಮೇಜಿನ ಮೇಲೆ ಶಾಯಿಯ ಬಾಟ್ಲಿ ಇಡಲು ಗುಂಡಗೆ ಕೊರೆದ ಜಾಗ ಇರುತ್ತಿತ್ತು . ಅದಕ್ಕೆ ಶಾಯಿ ದೌತಿ ಅಥವಾ ದೌತಿ ಪೀಠ ಎನ್ನುತ್ತಿದ್ದರು.
ಅವರು ಬರೆದ ಪುಸ್ತಕಗಳ ಪ್ರಕಾಶನವೂ ಮುಂಡಾಜೆಯದ್ದೇ .' ತಮ್ಮನ ಸಾಹಿತ್ಯ ಮಾಲೆ ' ಅಂದರೆ ನಮ್ಮ ಸರ್ ನೇಮ್ ತಾಮ್ಹನ್ ಕರ್ ನ ಹೃಸ್ವ ರೂಪ ಎಂಬಂತೆಯೋ ಅಥವಾ ನನ್ನ ಅಜ್ಜನವರ ಚಿಕ್ಕ ಮಗ ಅಂತಲೋ ಇಬ್ಬರು ಅಣ್ಣಂದಿರ ಪ್ರಭಾವವೋ ಏನೋ ? ಅಂತೂ 'ತಮ್ಮನ ಸಾಹಿತ್ಯಮಾಲೆ ' ಎಂಬ ಅಂದದ ಹೆಸರು ಸಾಹಿತ್ಯಕ್ಕೆ ಸೇರ್ಪಡೆ .. ಅಂದಹಾಗೆ ಮೈಸೂರಿಗೂ ಈ ಕವಿವರ್ಯರ ನಂಟು ಇದೆ.ಅವರ ಧರ್ಮಪತ್ನಿ ಅಂದರೆ ನನ್ನ ಚಿಕ್ಕಮ್ಮ ಮೈಸೂರಿನ ಅಭ್ಯಂಕರ್ ಮನೆತನದವರು. ಈಗಲೂ ಅಭ್ಯಂಕರ್ ರವರ ದೊಡ್ಡ ಮನೆ ಇದೆ .
ತಾನು ಬರೆದ ಪುಸ್ತಕಗಳ ದೊಡ್ಡ ಚೀಲವನ್ನು ಹೆಗಲಲ್ಲಿ ಹಾಕಿ ಕೊಂಡು ಅಥವಾ ಸೈಕಲ್ಲಿನಲ್ಲಿ ದಕ್ಷಿಣಕನ್ನಡದ ಹಲರು ಊರುಗಳಿಗೆ ಸೈಕಲ್ಲಿನಲ್ಲಿ ಪೆಡಲ್ ತುಳಿಯುತ್ತಾ ಪ್ರಕೃತಿಯೊಂದಿಗೆ ಚಲಿಸುತ್ತುತ್ತಿದ್ದರು .ಈ ಸಮಯದಲ್ಲಿ ನನಗೆ ಗಳಗನಾಥರು ನೆನಪಾಗುತ್ತಾರೆ .ಕನ್ನಡದ ಪುಸ್ತಕಗಳನ್ನು ಹೊತ್ತುಕೊಂಡೇ ಅಡ್ಡಾಡಿ ಪುಸ್ತಕಗಳನ್ನು ಮಾರಾಟ ಮಾಡಿ ಕನ್ನಡವನ್ನು ಬೆಳೆಸಿ ಉಳಿಸಿದ ಪುಣ್ಯಾತ್ಮರವರು.ದಿ.ರಾಮಚಂದ್ರ ಭಟ್ಟರು ಕೂಡಾ ಊರೂರುಗಳ ಶಾಲೆಗೆ ಹೋಗಿ ಒಂದೆರಡು ಹಾಡುಗಳನ್ನು ಹಾಡಿ ಅಭಿನಯಿಸಿ ಶಾಲೆಗಳಲ್ಲಿ ತಮ್ಮ ಕವನ ಪುಸ್ತಕಗಳನ್ನು ಮಾರಾಟವನ್ನು ಮಾಡುತ್ತಿದ್ದರು . ಇನ್ನೊಂದು ಮುಖ್ಯ ವಿಷಯ ಅವರು ರಿಟೈರ್ ಆದಮೇಲೆ ಕಟ್ಟಿಸಿದ ' ನವನಿಕೇತನ' ತನ್ನ ಮನೆಯಲ್ಲಿ ೧೯೭೫--೭೬ ರ ಎಮರ್ಜನ್ಸಿಯ ಆ ಹತ್ತೊಂಭತ್ತು ತಿಂಗಳಲ್ಲಿ ಅವರು ರಚಿಸಿದ್ದು ಮಕ್ಕಳ ಗೀತ ರಾಮಾಯಣ ವನ್ನು ಅವರ ಮನೆಗೆ ಹೋದಾಗ ಅವರು ಕೈ ಬರಹದಲ್ಲಿ ಬರೆದ ಪುಸ್ತಕವ ನ್ನು ನನಗೆ ತೋರಿಸಿದ್ದಾರೆ . .
ದಿ .ರಾಮಚಂದ್ರ ಭಟ್ಟರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಆಗಾಗ್ಗೆ .ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದವರು ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳು ಮತ್ತು ಉಜಿರೆಯ ಆಗಿನ ಸರಕಾರೀ ಬೇಸಿಕ್ ಟ್ರೇನಿಂಗ ಸ್ಕೂಲ್ ನ ಹೆಡ್ ಮಾಸ್ಟರ್ ಎಂ ಶಿವರಾಮೇ ಗೌಡರು .
ಇನ್ನು ದಿ. ಕೆ ಎನ್ ಭಟ್ ಶಿರಾಡಿಪಾಲ್ , ಶಂಪಾ ದೈತೋಟ ,ದಿ.ಎಸ್ ಎ ಗೋಖಲೆ ,ಶ್ರೀ ಬಾಲಕೃಷ್ಣ ಆಠ ವಲೆ ಮುಂತಾದ ಹೆಸರಾಂತ ಲೇಖಕರು ತಮ್ಮ ಅನಿಸಿಕೆಗಳನ್ನು ಮುನ್ನುಡಿಗಳಲ್ಲಿ ಬರೆದಿದ್ದಾರೆ . ನನ್ನ ಗುರುಗಳಾದ ಶ್ರೀಯುತ ಕೇಶವ ಹೊಳ್ಳರು ಸ್ವತಃ ರಾಮಚಂದ್ರ ಭಟ್ಟರಿಂದಲೇ ಈ ಹಾಡನ್ನು ಅಭಿನಯ ಮೂಲಕ ಕಲಿತದ್ದುಂಟು ,ಕಲಿಸಿದ್ದುಂಟು . ರಾಮಚಂದ್ರ ಭಟ್ಟರು ಶಿಕ್ಷಕರಾಗಿದ್ದ ಶಾಲೆ 2021 ಕ್ಕೆ ಶತಮಾನೋತ್ಸವನ್ನು ಆಚರಿಸುತ್ತದೆ .ರಾಮಚಂದ್ರ ಭಟ್ಟರು ಬರೆದ ಸುಮಾರು ಮುನ್ನೂರು ಗೀತೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ಅಭಿನಯದ ಮೂಲಕ ಮಕ್ಕಳಿಗೆ ಕಲಿಸಬಹುದು . ಇದರ ಕೆಲಸ ಆಗಬೇಕಾಗಿದೆ . ಮಕ್ಕಳ ಮನೋಭಾವವನ್ನು ಸೂಕ್ಮವಾಗಿ ಅರಿತು ಅವರ ರುಚಿಗೆ ತಕ್ಕಂತಹ ಹಾಡುಗಳನ್ನು ಬರೆದು ಮಕ್ಕಳಿಗೆ ಹೇಳಿಕೊಡುತ್ತಿದ್ದುದು ಅವರ ಅಂದುಸಾಹಸವೇ ಸೈ .
ಈಗಿನ ಆನ್ ಲೈನ್ ಶಿಕ್ಷಣದಿಂದಾಗಿ ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ಇವತ್ತು ಓದಿದ್ದೇನೆ . ಕಣ್ಣಿನ ತೊಂದರೆ ಎದುರಿಸುತ್ತಿರುವ ಮಕ್ಕಳು ಶೇಕಡಾ ೩೦ ರಷ್ಟು ಹೆಚ್ಚಾಗಿದ್ದಾರಂತೆ . ಮಕ್ಕಳಿಗೆ ಗಿಡ ಮರಗಳನ್ನು ತೋರಿಸುತ್ತ ಹಸಿರು ಪರಿಸರದಲ್ಲಿ ಕಲಿತರೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದಂತೆ . ಈ ನಿಟ್ಟಿನಲ್ಲಿ ಕಾರಂತರು ಮತ್ತು ಶ್ರೀ ಚಂದ್ರ ಶೇಖರ ದಾಮ್ಲೆಯವರ ಪ್ರಯೋಗಗಳು ನೆನಪಾಗುತ್ತವೆ . . ದಿ.ರಾಮಚಂದ್ರ ಭಟ್ಟರ ಹಾಡುಗಳನ್ನು ಓದುತ್ತ ಹಾಡುತ್ತ ಕುಣಿಯುತ್ತ ಕಲಿಸಿದರೆ ಈಗಿನ ' ನಲಿ ಕಲಿ ' ಪ್ರಯೋಗಕ್ಕೆ ನೂರಾರು ಹಾಡುಗಳನ್ನು ಅಳವಡಿಸಬಹುದು . ಯಾರಾದರೂ ಮುಂದೆ ಬಂದು ಇದನ್ನು ಮಾಡ ಬೇಕಷ್ಟೆ . ರಾಮಚಂದ್ರ ಭಟ್ಟರ ಹಾಡಿನ ಪುಸ್ತಕಗಳಲ್ಲಿ ಇದಕ್ಕೆ ಬೇಕಾದ ಸರಕುಗಳು ಇವೆ . ಐದನೆಯ ತರಗತಿಯ ವರೆಗೆಗೆ ಬೇಕಾದ ಎಲ್ಲ ನಮೂನೆಯ ಪಾಠ ಗಳಿಗೆ ಬೇಕಾಗುವಂತಹ ಹಾಡುಗಳು ಇಲ್ಲಿವೆ .ಮಕ್ಕಳಿಗೆ ಪಾಠ ಮಾಡಬೇಕಾಗಿರುವುದು ಗುರುಕುಲಗಳಲ್ಲಿ .ಎದುರು ಬದುರು ಕುಳಿತೇ ಅಲ್ಲವೇ.
ಮೈಸೂರು ಆಕಾಶವಾಣಿಯಲ್ಲಿ ಇವರು ಬರೆದ ಮಕ್ಕಳಿಗೆ ಕಲಿಸಿದಹಾಡು " ದುಡಿಯೋಣ ಬಾರಣ್ಣ ದುಡಿಯೋಣ ಬಾ ಬಾ ಎತ್ತನು ಪಡೆದು ನೇಗಿಲ ಪಿಡಿದು " ಹಾಡು ೧೯೫೫ ನೇ ಇಸವಿಯ ಅಗೋಸ್ತು ಹದಿನೈದು ಸ್ವತಂತ್ರ ದಿನಾಚರಣೆಯ ದಿನದಂದು ಬಿತ್ತರಗೊಂಡಿತು. ಇಡೀ ರಾಜ್ಯದ ಮಕ್ಕಳು ಮತ್ತು ಶ್ರೋತೃಗಳು ಇದನ್ನು ಆಹ್ಲಾದಿಸಿದರು. ಈ ಹಾಡು ಈಗ ತುಂಬಾ ಪ್ರಸ್ತುತ . ಭಾರತವು ಕೃಷಿ ಪ್ರಧಾನ ವಾದ ದೇಶ . ಕೃಷಿಯನ್ನು ಅಲಕ್ಷಿಸಬಾರದು ಎಂದು ಅಂದೇ ಮಕ್ಕಳಿಗೆ ಹೇಳಿದ ಮಹಾನುಭಾವರು ಅವರು .
ಅವರ ಹಾಡುಗಳನ್ನು ಜನರಿಗೆ ತಲುಪಿಸುವಲ್ಲಿ ಅಂದಿನ ಶಿಕ್ಷಣ ವೃಂದ ದಷ್ಟೆಯೇ ಈಗಿನ ಪ್ರಸಿದ್ಧ ಅಂಕಣಕಾರರಾದ .ಶ್ರೀ ಶ್ರೀವತ್ಸ ಜೋಶಿ ಯವರು ( ಅಮೆರಿಕಾ ನಿವಾಸಿ ) ತಮ್ಮ ಹಲವಾರು ಅಂಕಣಗಳನ್ನು ಈ ಕವಿಗಾಗಿಯೇ ಮೀಸಲು ಆಗಾಗ್ಗೆ ಇಡುತ್ತಿದ್ದಾರೆ , ಶ್ರೀ ಚಿದಂಬರ ಕಾಕತ್ ಕರ್ ರವರು (ಈಗ ಮಂಗಳೂರು ನಿವಾಸಿ ) ಭಟ್ಟರ ಹಾಡುಗಳು ಚಂದಮಾಮ ಮಾಸ ಪತ್ರಿಕೆ ಬೆಳಕು ಕಂಡದ್ದನ್ನು ತಿಳಿಸಿದ್ದುಂಟು , ನಾನು ಎರಡು ವರ್ಷ ಗಳಹಿಂದೆ ಪ್ರಜಾವಾಣಿ ಪತ್ರಿಕೆಗೆ ಈ ಕವಿಯು ಬರೆದ ' ಗೆಳೆಯನೆ ಪೇಳುವೆ ಕೇಳಣ್ಣ ರೈಲು ಪ್ರವಾಸದ ಕನಸನ್ನ ' ಹಾಡನ್ನು ಕಳಿಸಿ ಪ್ರಚುರ ಗೊಳ್ಳಲು ಕಾರಣನಾದೆ .ಡಾ.ಗೋಪಾಲ್ ಮರಾಠೆ ಎಂಬವರು ತಮ್ಮ ವೇದ ಶಿಬಿರಗಳಿಗೆ ಪ್ರಾರ್ಥನಾ ಗೀತೆಯಾಗಿ 'ವಿಶ್ವ ಕರ್ತನೆ ವಿಶ್ವ ಪಾಲನೆ ವಿಶ್ವ ವಂದ್ಯನೆ ' ಹಾಡನ್ನು ಕಲಿಸುತ್ತಾರೆ. ( ಮರಾಠೇ ಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಯೋ ಕೆಮೆಸ್ಟ್ರಿ ಮತ್ತು ಜೀವರಸಾಯನ ಶಾಸ್ತ್ರ ವಿಭಾಗಗಳ ಮುಖ್ಯಸ್ಥರು ) ಶ್ರೀಯುತ ಬೊಳುವಾರರ ತಟ್ಟು ಚಪ್ಪಾಳೆ ಪುಟ್ಟ ಮಗು ಕವನ ಸಂಕಲನದಲ್ಲಿ ಭಟ್ಟರ ಒಂದು ಗೀತೆ ಇದೆ .ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರೊ. ಎನ್ ಜಿ ಪಟವರ್ಧನ್ ರವರು ತನ್ನ ಗುರುಗಳ ಎಲ್ಲ ಹಾಡುಗಳನ್ನು ಒಂದುಗಡೆ ಕೂಡಿಸಿ ಸಂಪಾದಿಸಿದರು .
ಹಾಡಿನ ಕೊಂಡಿ ಈ ಕೆಳಗೆ ಇದೆ .
https://youtu.be/czdRtNOCPHw ಲೇಖನದ ಜೊತೆ ಅಕ್ಷರಮಾಲೆಯ ಗಣಪತಿಯ ಹಾಡು ಮೂಲ ಪುಸ್ತಕದ ಪುಠ ದಲ್ಲಿ ಇದ್ದದ್ದನ್ನು ಓದಿರಿ. ( ತಮ್ಮನ ಕವಿತೆಗಳು ಪುಸ್ತಕದ 25 ನೇ ಪುಟ ) ಮತ್ತು ರಾಮಚಂದ್ರ ಭಟ್ಟರ ಇಳಿ ವಯಸ್ಸಿನಲ್ಲಿಯ ಅಕ್ಷರ ಗಳನ್ನು ನೋಡಿ ಓದಿ, ರಾಮಣ್ಣನ ರಗಳೆಗಳಿಂದ ಆಯ್ದದ್ದು ಓದಿರಿ.ದಿ ರಾಮಚಂದ್ರ ಭಟ್ಟರ ಸಮಗ್ರ ಕೃತಿಗಳು ಪುಸ್ತಕದ ಬೆನ್ನುಡಿ ಇದು.
ಇಂತು ನಿಮ್ಮ : ರಘುಪತಿ ತಾಮ್ಹನ್ ಕರ್ ಮೈಸೂರು.
.....
Ramesh Bhat Belagodu, Indira Hegde and 525 others
341 Comments
165 Shares
Like
Comment
Share

ಗಣೇಶ್ ಪಂಜಿಮಾರ್ - - ||Pencil Sketch Of Manasi Sudhir��||Ganesh Panjimar Arts||

C. N. Ramachandran -ಸ್ತೋತ್ರ ಸಾಹಿತ್ಯ

Friday, August 21, 2020

ಅರ್ಧ ಕಥಾನಕ { ಮಗ ತೇಜಸ್ವಿಯ ನೆನಪಲ್ಲಿ ಎಮ್. ವ್ಯಾಸ } M. VYASA ನಿರೂಪಣೆ - ಅನುಪಮಾ ಪ್ರಸಾದ್ ,

 m  vyasa   ಎಮ್. ವ್ಯಾಸ ,

ಅಡಿಗ ಸಂದರ್ಶನ : ಸಂಚಯ ಸಾಹಿತ್ಯ ಪತ್ರಿಕೆ | Adiga Interview: Sanchaya Literary...{ 1992 }

ಪಿ. ಬಿ. ಪ್ರಸನ್ನ - ಉರಗವೇಣಿಯರೆಲ್ಲ ಕೇಳಿ { ಕಥಾ ಸಂಕಲನ -2020 } P. B. PRASANNA

P. B. Prasanna ಉರಗವೇಣಿಯರೆಲ್ಲ ಕೇಳಿ

ಉರಗವೇಣಿಯರೆಲ್ಲ ಕೇಳಿ { ಕಥಾ ಸಂಕಲನ }

--ಪಿ. ಬಿ. ಪ್ರಸನ್ನ

ಪ್ರಕಾಶಕರು

 ಸುಮಾ  ಪ್ರಕಾಶನ

 ನಂ -540 C , 42 ನೆ  Cross , 4 ನೆ Block ,

ರಾಜಾಜಿನಗರ , ಬೆಂಗಳೂರು -560010

EMAIL- sumalini.ramachari@gmail.com

First Impression - 2020

Pages 121 ,

 Price -125

Cover Page Design- Godavari. D. S

Cover Page Photo-Mantapa Prabhakara Upadhya

Copyright- AUTHOR

 " ನಾನು ಉಡುಪಿಯ ಜನ ಸಾಮಾನ್ಯರ ಕನ್ನಡ  ಶೈಲಿಯನ್ನು  ಉದ್ದೇಶಪೂರ್ವಕವಾಗಿ ತಂದಿದ್ದೇನೆ. ಕಾರಣ ಅದಕ್ಕೊಂದು ಸೊಗಸಿದೆ .ಅದಕ್ಕೊಂದು ಜೀವ ಇದೆ . ಹಿಂದಿನ ಸಂಕಲನಗಂತೆಯೇ ಇಲ್ಲಿನ ಕತೆಗಳ ಭಾಷೆ  ಅದೇ ಆಗಿದೆ. "

 ------ ಪಿ. ಬಿ . ಪ್ರಸನ್ನ

contact Dr . P. B. Prasanna -polyaprasanna@gmail.com

'ನನ್ನಜ್ಜನಿಗೊಂದಾನೆಯಿತ್ತು' ಈ ಪುಸ್ತಕ ಕುರಿತು ರೆಹಮತ್ ತರಿಕೆರೆ ಮಾತುಗಳು

ಮುರಳೀಧರ ಉಪಾಧ್ಯ ಹಿರಿಯಡಕ - -- ಮಂಟೇಸ್ವಾಮಿ { ಜನಪದ ಮಹಾಕಾವ್ಯ } ಸಂ- ಹಿ. ಚ .ಬೋರಲಿಂಗಯ್ಯ

 ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಮಹಾಕಾವ್ಯ ಮಾಲೆಯಲ್ಲಿ ’ ಮಂಟೇಸ್ವಾಮಿ’ ಜನಪದ ಮಹಾಕಾವ್ಯ ಪ್ರಕಟವಾಗಿದೆ. ಈ ಕಾವ್ಯ ಸಮಗ್ರ ರೂಪದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಎಂಟುನೂರ ಇಪ್ಪತ್ತೆರಡು ಪುಟಗಳಷ್ಟು ದೀರ್ಘವಾಗಿ ರುವ ಈ ಕಾವ್ಯದ ಏಕ ವ್ಯಕ್ತಿ ಪಾಠವನ್ನು ಹಿ.ಚಿ. ಬೋರಲಿಂಗಯ್ಯ ನವರು ಚೆನ್ನಾಗಿ ಸಂಪಾದಿಸಿದ್ದಾರೆ. ಅಲಿಖಿತ ಪರಂಪರೆಯ ಈ ಮಹಾಕಾವ್ಯವನ್ನು ಹಾಡಿರುವವರು ಮೈಸೂರು ಬಳಿಯ ಹಿನಕಲ್ಲಿನ ಶ್ರೀ ಮಹದೇವಯ್ಯ ನವರು. ಅವರ ಸಂದರ್ಶನ ಈ ಗ್ರಂಥದ ಕೊನೆಯಲ್ಲಿದೆ. ಲೌಕಿಕ ವೃತ್ತಿ ಗಾಯಕರಾದ ನೀಲ ಗಾರರು ಮಂಟೇಸ್ವಾಮಿಯ ಕಾವ್ಯವನ್ನು ಹಾಡುತ್ತಾರೆ. ಮಂಟೇಸ್ವಾಮಿಗೆ ’ ಧರೆಗೆ ದೊಡ್ಡವರು’, ಪ್ರಭುಸ್ವಾಮಿ;, ಪರಂಜ್ಯೋತಿ’ ಮುಂತಾದ ಹೆಸರುಗಳಿವೆ. ಈ ಕಾವ್ಯದ ಭಾಗಗಳನ್ನು ’ಸಾಲು’ ಎನ್ನುತ್ತಾರೆ. ಜಗತ್ತು ಸೃಷ್ಟಿ, ಕಲ್ಯಾಣ ಪಟ್ಟಣ, ರಾಚಪ್ಪಾಜಿ, ಬೊಪ್ಪಗೌಡ್, ಕೆಂಪಾಚಾರಿ, ಫಲಾರದಯ್ಯ, ಕಲಿಪುರುಷ, ಸಿದ್ದಪ್ಪಾಜಿ ಎಂಬ ಎಂಟು ’ಸಾಲುಗಳು’ ಈ ಕಾವ್ಯದಲ್ಲಿವೆ.
’ ಕಲ್ಯಾಣ ಪಟ್ಟಣದ ಸಾಲು’ ಮಂಟೇಸ್ವಾಮಿ ಕಾವ್ಯದ ಅತ್ಯುತ್ತಮ ಭಾಗ. ಮಂಟೇಸ್ವಾಮಿ  ಕುಷ್ಠ ರೋಗಿಯ ಅಸಹ್ಯ ವೇಷ ಹಾಕಿಕೊಂಡು ಕಲ್ಯಾಣಕ್ಕೆ ಹೋದಾಗ ಅವನಿಗೆ ಪ್ರವೇಶ ಸಿಗುವುದಿಲ್ಲ. ಅವನ ಪವಾಡಗಳನ್ನು ಕಂಡ ಬಸವಣ್ಣ, ನೀಲಮ್ಮ ದಂಪತಿಗಳು ಅವನಿಗೆ ಶರಣಾಗುತ್ತಾರೆ. ಮಾದಿಗರ ಚೆನ್ನಯ್ಯ, ಅಂಬಿಗರ  ಚೌಡಯ್ಯ, ಮಡಿವಾಳ ಮಾಚಪ್ಪರಂಥ  ಶರಣವೇ ನಿಜವಾದ ಶರಣರು ಎಂಬ ಅರಿವು  ಬಸವಣ್ಣನವರಲ್ಲಿ ಮೂಡುತ್ತದೆ. ಅಲ್ಲಮ ಪ್ರಭುವಿನಂಥ ಅವಧೂತನಾಗಿ ಕಾಣೆಸುವ ಮಂಟೇಸ್ವಾಮಿ, ರಾಚಪ್ಪಾಜಿ, ಫಲಾರದಯ್ಯ ಸಿದ್ಧಪ್ಪಾಜಿ ಮತ್ತಿತರ ಶಿಷ್ಯರ ಮೂಲಕ ತನ್ನ ಪವಾಡಗಳನ್ನು ಮೆರೆಯುತ್ತಾನೆ.
 ಸಂಪಾದಕ ಹಿ.ಚಿ. ಬೋರಲಿಂಗಯ್ಯ ನವರು  ಬರೆದಿರುವಂತೆ " ಶರಣರ ಜನಪದ ಚಳವಳಿಯ ಮೂಲಕ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಬೀದಿಗೆ ಬಂದ ಕೆಳ ವರ್ಗದ ಜನ್, ನಂತರದ ಅನಿರೀಕ್ಷಿ ಸೋಲಿನಿಂದಾಗಿ ಹತಾಶರಾಗಿ ತಮ್ಮ ತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಈ ಹಿನ್ನಲೆಯಲ್ಲಿ ಮಾದೇಶ್ವರ ಮತ್ತು ಮಂಟೇಸ್ವಾಮಿ ಯವರನ್ನು ನಾವು ನೋಡಬೇಕಾಗಿದೆ."
 ಮಂಟೇಸ್ವಾಮಿ.
ಕವಿ: ಪೋ| ಹಿ.ಚಿ. ಬೋರಲಿಂಗಯ್ಯ
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಿದ್ಯಾರಣ್ಯ-೫೮೩೨೨೧
-----ಮುರಳೀಧರ ಉಪಾಧ್ಯ
Manteswami -ಮಂಟೇಸ್ವಾಮಿ

ಸೂರ್ಯಗಾಯತ್ರಿ - ವಾತಾಪಿ ಗಣಪತಿಮ್ ಭಜೇಹಂ Vathapi Ganapathim I Sooryagayathri I Muthuswami Dikshitar

Thursday, August 20, 2020

ಜೈಪುರದ ಮ್ಯೂಸಿಯನಲ್ಲಿ ಈಜಿಪ್ಟ್ ನ TUTU ಮಮ್ಮಿ- Egyptian mummy in Albert Hall Museum Jaipur || 'Tutu' The Mummy Jaipur |...

ಹರ್ಮನ್ನ್ ಬ್ರಾಖ್ ನ ‘ವರ್ಜಿಲನ ಮರಣ’: ಕೆ. ವಿ. ತಿರುಮಲೇಶ್ ಲೇಖನ

ಮಣ್ಣಿನ ವಾಸನೆ ಮತ್ತು ವಸ್ತುಪ್ರತಿರೂಪ ವಿಚಾರ: ಕೆ. ವಿ. ತಿರುಮಲೇಶ್ ಲೇಖನ

ಕರ್ನಾಟಕ ಸಾಹಿತ್ಯ ಅಕಾಡೆಮಿ: 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ

Boluwar I K --- B R Nagesh ನಾಟಕ ನಿರ್ದೇಶಕ ಬಿ. ಆರ್. ನಾಗೇಶ್

Saturday, August 15, 2020

B R Lakshman Rao "ಅದೇ ಹಾಡು" Hegiddiye twincle

# ಶ್ರೀ ಕೀರಿಕ್ಕಾಡು ವನಮಾಲ ಕೇಶವ ಭಟ್ಟ #ಸಾಹಿತ್ಯ ಪರಿಚಾರಕ# ಸಾಹಿತ್ಯ ಪ್ರಸಾರ#ಏಕ ವ್...

ಜಿ ಎನ್ . ವಾಸುದೇವಮೂರ್ತಿ --- ವಿಶ್ಲೇಷಣೆ | ವ್ಯಕ್ತಿಪೂಜೆ ಮತ್ತು ಸಾಹಿತ್ಯ ಪ್ರವರ್ಧನೆ

ಉಡುಪಿಯಲ್ಲಿ ಸಾಮರಸ್ಯದ ಹಣತೆ ಹಚ್ಚಿದ ಬಾಪು

Friday, August 14, 2020

ವಂದೇ ಮಾತರಮ್- VANDE MATARAM | LOPAMUDRA MITRA | DEBASIS SHOME | A Film By SAMIK ROY ...

K. V. Tirumalesh - ಕೆ. ವಿ. ತಿರುಮಲೇಶ್ ಸಮಗ್ರ ಕೃತಿಗಳು

Muraleedhara upadhya Hiriadka - ಸಖೀಗೀತ http://upadhyahiriadka.blogspot.com ನನ್ನ ಹೊಸ ಬ್ಲಾಗ್- 15- 8- 2020

ಮುರಳೀಧರ ಉಪಾಧ್ಯ ಹಿರಿಯಡಕ

2009ರ  ಡಿಸೆಂಬರ್ ನಲ್ಲಿ ನಾನು ಆರಂಭಿಸಿದ Muraleedhara Upadhya Hiriadka-http;//mupadhyahiri.blogspot. com  ಗೆ ನಿನ್ನೆಯ ವರೆಗೆ 1298721  ಮಂದಿ  ಸಾಹಿತ್ಯಪ್ರಿಯರು ಭೇಟಿ  ನೀಡಿದ್ದಾರೆ . ಆ ಬ್ಲಾಗ್ ತುಂಬಿರುವುದರಿಂದ  ಈ ಹೊಸ ಬ್ಲಾಗ್ ಆರಂಭಿಸುತ್ತಿದ್ದೇನೆ .Blogger ಗೆ ಧನ್ಯವಾದಗಳು

ಈ ಬ್ಲಾಗ್ ನಲ್ಲಿ ನನ್ನ   ಲೇಖನಗಳು , ನನ್ನ Vedio ಗಳು   , ನಮ್ಮ Hiriadka Samskruthi Siri Trust ನ vedio ಗಳು , ನನ್ನ ಮಗಳು ಮಾನಸಿ ಸುಧೀರ್  ಅವಳ  ಹಾಡಿನ Vedio ಗಳು , ನಾನು ಮೆಚ್ಚುವ  , ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕೆ ಸಂಬಂಧ ಪಟ್ಟ  Vedio , ಲೇಖನಗಳು ಪ್ರಕಟವಾಗುತ್ತವೆ . ನಿಮ್ಮ ಸಲಹೆ ,ಸೂಚನೆಗಳಿಗೆ  ಸ್ವಾಗತ  . ನಿಮ್ಮ ಕತೆ , ಕವನ vedio ಗಳನ್ನು  ಈ ಬ್ಲಾಗ್ ನಲ್ಲಿ  ಪ್ರಕಟಿಸಲು ದಯವಿಟ್ತು ಸಂಪರ್ಕಿಸಿ -

 Muraleedhara upadhya Hiriadka

 email-mhupadhya@gmail.com

whatsap- 9448215779

ಸಖೀಗೀತ ಕ್ಕೆ ಸ್ವಾಗತ

 ---- ಮುರಳೀಧರ ಉಪಾಧ್ಯ ಹಿರಿಯಡಕ

August 15 , 2020