Powered By Blogger

Wednesday, September 30, 2020

ಬೊಳುವಾರು ಅವರ ಸಾಹಿತ್ಯ -ಡಾ / ಹರೀಶ್ ಕುಮಾರ್ { ಪಿಎಚ್. ಡಿ . ಪ್ರಬಂಧ } BOLUWAR MAHAMAD KUNHI by Dr HARISH KUMAR


 

ಎಲ್. ಸಿ . ಸುಮಿತ್ರಾ - ಎಮ್. ಆರ್ . ಕಮಲಾ ಅವರ " ಗದ್ಯ ಗಂಧಿ " { ಕವನ ಸಂಕಲನ 2020 }

 ಜೀವನದ ಪ್ರತಿಕ್ಷಣವೂ ಸಂಭ್ರಮ ಪಡುವಂತಿರಬೇಕು..ಆದರೆ ಸಧ್ಯದ ಈ ಸಾಂಕ್ರಾಮಿಕ ಉಸಿರುಕಟ್ಟಿಸುವಂತಿದೆ..ನಮ್ಮೊಳಗೆ ಇರುವ ನೆನಪಿನ ಲೋಕದ ಮೂಲಕ ಸಧ್ಯದ ಕಷ್ಟ ಕಾಲವನ್ನು ದಾಟುವ ಒಂದು ಬಗೆಯೇ ಎಂ ಆರ್ ಕಮಲಾ ಅವರ ಗಧ್ಯಗಂಧಿ ಕವಿತೆ ಗಳು.

ನೆನಪಿನ ಖಜಾನೆಯಿಂದ ಆಯ್ದ ಈ ಹನಿಗಳು ವರ್ತಮಾನ ದ ಬದುಕನ್ನು ಸಹ್ಯವಾಗಿಸುತ್ತವೆ. ಸಂದು ಹೋದ ಕಾಲದ ಜೀವಂತಿಕೆಯನ್ನು ವರ್ತಮಾನ ಕ್ಕೆ ಎಳೆದುತರುವಲ್ಲಿ ಕಮಲಾ ಯಶಸ್ವಿ ಯಾಗಿದ್ದಾರೆ.
ಇದ್ದಕ್ಕಿದ್ದಂತೆ ನೆನಪಿನ ಲೋಕದಿಂದ ಮನೆಯೊಳಗೆ ಬರುವ ತೆಂಗಿನ ಗರಿ, ಕವಿಯ ಕಲ್ಪನೆ ಯಲ್ಲಿ ಹಕ್ಕಿಗಳಾಗಿ ಕೊನೆಗೆ ಪೊರಕೆಯಾಗಿ ಕನಸಿನ ಹಿಡಿಕೆಯಲ್ಲಿ ಬಂಧಿಯಾಗುತ್ತದೆ. ಇಲ್ಲಿ" ಬಾಲ್ಯದ ಓಣಿಯಲ್ಲಿ ಕುಳಿತು ಮಣ್ಣು ಕೆರೆದು ಬಳೆ ಚೂರುಗಳನ್ನು ಆರಿಸಿ ಲಂಗಕ್ಕೆ ತುಂಬಿಕೊಳ್ಳಬಹುದು." ಬೀದಿಗೆ ಮುಖಮಾಡಿಟ್ಟ ಕನ್ನಡಿಯಲ್ಲಿ ಹಾದು ಹೋಗುವ ಪ್ರತಿ ಜೀವಿಯ ನೋವು ನಲಿವು ನಮ್ಮ ಎದೆಯಲ್ಲಿ ಪ್ರತಿಫಲಿಸುತ್ತದೆ. ಕಡಿಮೆ ಬೆಳಕಿನ ಹಳ್ಳಿಯ ಮನೆಯಿಂದ ಝಗಮಗಿಸುವ ಬೆಳಕಿನ ಕಡೆ ಹೋದವರು "ತಡೆಯಲಾರದಷ್ಟು ಬೆಳಕು ಕಣ್ಣು ಕುಕ್ಕಿದಾಗ ವಾತಾವರಣ ಕ್ಕೆ ಉಸಿರುಗಟ್ಟಿ ಎಲ್ಲರೂ ಮನೆಗೆ ಮರಳುತ್ತಿದ್ದಾರೆ". ಬದುಕಿನ 'ಛಂದವೇ' ಬದಲಾಗಿದೆ. "ಇಡೀ ಬದುಕು ಸಿಕ್ಕು ಬಿಡಿಸುವುದೇ ಹೆಣ್ಣುಮಕ್ಕಳ ಕೆಲಸ " ಎಂಬ ಸತ್ಯ ದರ್ಶನವಾಗಿತ್ತದೆ.
ಮನದೊಳಗಿನ ಲೋಕದಲ್ಲಿ ತಂದೆಯ ಪತ್ರಗಳು ಬರುತ್ತಲೇ ಇರುತ್ತವೆ. ಫಲ್ಗುಣಿ ಕರು ಹಾಕಿದ್ದು, ಊರಿಗೆ ನಲ್ಲಿ ಬಂದಿದ್ದು, ತೋಟ ಕ್ಕೆ ಮಣ್ಣು ಹಾಕಿದ್ದು...ನನಗೆ ನನ್ನದೇ ನೆನಪುಗಳನ್ನು ಹೊಳೆಯಿಸಿತು.ನನಗೆ ಫಸ್ಟ್ ಪಿ ಯು ನಲ್ಲಿ ಕರಾವಳಿಯ ಒಂದು ಹಾಸ್ಟೆಲ್ ನಲ್ಲಿ ದ್ದಾಗ ಮತ್ತೆ ಮೈಸೂರಿನ ಲ್ಲಿ ಓದುತ್ತಿದ್ದಾಗ ತಮ್ಮ ಬರೆಯುತ್ತಿದ್ದ ಕಾಗದದ ಸಾಲುಗಳು ನೆನಪಾದವು. " ಅರಿಸಿನ ದಾಸವಾಳ ತುಂಬಾ ಹೂ ಬಿಡುತ್ತಿದೆ, ಜೂಲುನಾಯಿ ಮರಿ ಹಾಕಿದೆ ಎರಡು ಬಿಳಿ ಒಂದು ಕಪ್ಪು, ...ಊರಿನ ....ಮನೆ ಬಿಟ್ಟು ಓಡಿ ಹೋಗಿ ದ್ದಾನೆ .ಅಲ್ಲೇನಾದರೂ ಕಂಡರೆ ಹೇಳು.." ಮತ್ತೆ ಆ ಕಾಲಕ್ಕೆ ಹೋದೆ. ವರ್ತಮಾನ ಕ್ಕೆ‌ಬಂದರೆ ಇಸ್ತ್ರಿ ಮಾಡುವ ಮುದುಕನ ಗಾಡಿ ಪ್ಲಾಸ್ಟಿಕ್ ಹೊಂದಿಸಿಕೊಂಡು ರಸ್ತೆಯ ಪಕ್ಕ ನಿಂತಿದೆ..ಅವನ ಸುಳಿವಿಲ್ಲ.
ದೈನಂದಿನ ಚಿಕ್ಕ ಪುಟ್ಟ ಸಂತೋಷ ಗಳಿಂದ ಬದುಕಿನ ದೊಡ್ಡ ಕಷ್ಟ ಗಳನ್ನು ಸಹಿಸಿಕೊಳ್ಳುವ ಒಂದು ಮನಸ್ಸು ಈ ಗದ್ಯಗಂಧೀ ಕವಿತೆಗಳಲ್ಲಿದೆ...ಲಂಗದ ಜೇಬಿಗೆ ಆಟಕ್ಕಾಗಿ ಕಲ್ಲು ತುಂಬಿಕೊಳ್ಳುವ ಆ ಪುಟ್ಟ ಹುಡುಗಿ ನನಗೆ ಕುವೆಂಪು ಅವರ
" ಚೇತನ ಮೂರ್ತಿ ಯು ಆ ಕಲ್ಲು;
ತೆಗೆ ಜಡವೆಂಬುದು ಬರೀ ಸುಳ್ಳು " ಎಂಬ ಸಾಲುಗಳನ್ನು ನೆನಪಿಸಿತು.. ಇದೊಂದು ಹೊಸಬಗೆಯ ಬರೆಹ. ಇದರಲ್ಲಿ ನೀವು ಯಶಸ್ವಿಯಾಗಿದೀರಿ. ಅಭಿನಂದನೆಗಳು ಕಮಲಾ ಇಷ್ಟು ಚೆಂದ ದ ಪುಸ್ತಕ ಕಳಿಸಿದ್ದಕ್ಕೆ.Metikurke Ramaswamy Kamala
Thank you
Sumithra Lc
You, Sumithra Lc, Sukanya Kalasa and 95 others
14 Comments
Like
Comment
Share

Comments


ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ Day 1 - Part 5 ಜಿ. ಎಸ್ ಆಮೂರ್ ಸಂದರ್ಶನ Part 5 G. S. AMUR

Sunday, September 27, 2020

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ - Day 1 - Part 3 ಜಿ.ಎಸ್. ಅಮೂರ್ -G. S. AMUR PART 3

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ - Day 1 - Part 2 ಜಿ. ಎಸ್. ಅಮೂರ್ -G. S . AMUR Part 2

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ - Day 1 - Part 1 ಜಿ. ಎಸ್. ಅಮೂರ್ -G. S. AMUR PART !

ವಿಮರ್ಶಕ ಡಾ. ಜಿ.ಎಸ್‌. ಆಮೂರ ನಿಧನ 28- -9 -2020 -G. S. AMUR

ವಿಮರ್ಶಕ ಡಾ. ಜಿ.ಎಸ್‌. ಆಮೂರ ನಿಧನ | Prajavani: ಹಿರಿಯ ವಿಮರ್ಶಕ ಡಾ. ಜಿ.ಎಸ್.ಆಮೂರ (96) ಸೋಮವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.Tenkabail Thirumaleshvara Shastry -ತೆಂಕಬೈಲ್ - ಮಾತಾಡಬಾರದೇನೇ

B V KARANTH -ರಂಗಗೀತೆಗಳಿಗೆ ಪೀಠಿಕೆ

Thursday, September 24, 2020

ಡಾ. ಸರಜೂ ಕಾಟ್ಕರ್ - ಅಕ್ಷತಾ ಕೃಷ್ಣಮೂರ್ತಿ ಅವರ " ನಾನು ದೀಪ ಹಚ್ಚಬೇಕೆಂದಿದ್ದೆ "{ ಕವನ ಸಂಕಲನ -2020 } AKSHATHA KRISHNAMOORTHY

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಡಾ. ಸರಜೂ ಕಾಟ್ಕರ್ ಬರೆದ ಮಾತುಗಳು | ಕೆಂಡಸಂಪಿಗೆ
G. S. UBARADKA KANNADA POET -- ಸೂರಪ್ಪಯ್ಯನ ವೃತ್ತಾಂತವು {ಕಥನ ಕವನ } G. S. UBARADKA

ಕಾರಂತರ ಕಾದಂಬರಿ “ಜಾರುವ ದಾರಿಯಲ್ಲಿ” ಕುರಿತು ಕೆ. ಸತ್ಯನಾರಾಯಣ ಬರಹ - SHIVARAMA KARANTH - K SATYANARAYANA

ಕಾರಂತರ ಕಾದಂಬರಿ “ಜಾರುವ ದಾರಿಯಲ್ಲಿ” ಕುರಿತು ಕೆ. ಸತ್ಯನಾರಾಯಣ ಬರಹ – ಋತುಮಾನಎಂ.ಎಸ್‌.ಶ್ರೀರಾಮ್‌ ವಿಶ್ಲೇಷಣೆ: ಸಂಘಟಿತ ಕ್ಷೇತ್ರಕ್ಕೆ ಪಕೋಡಾವಾಲಾ | M S SREERAM

ಎಂ.ಎಸ್‌.ಶ್ರೀರಾಮ್‌ ವಿಶ್ಲೇಷಣೆ: ಸಂಘಟಿತ ಕ್ಷೇತ್ರಕ್ಕೆ ಪಕೋಡಾವಾಲಾ | Prajavani

Tuesday, September 22, 2020

ರಾಜ್ಯಸಭೆ | ಮೂರೂವರೆ ತಾಸಿನಲ್ಲಿ  ಅಂಗೀಕಾರಗೊಂಡ 7 ಮಸೂದೆಗಳ ಸಂಕ್ಷಿಪ್ತ ಪರಿಚಯ

ರಾಜ್ಯಸಭೆ | ಮೂರೂವರೆ ತಾಸಿನಲ್ಲಿ  ಅಂಗೀಕಾರಗೊಂಡ 7 ಮಸೂದೆಗಳ ಸಂಕ್ಷಿಪ್ತ ಪರಿಚಯ | Prajavani: ಎಂಟು ಸದಸ್ಯರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ ಬಳಿಕ ಈ ಮಸೂದೆಗಳಿಗೆ ಒಪ್ಪಿಗೆ ದೊರೆತಿದೆ. ಒಪ್ಪಿಗೆ ದೊರೆತವುಗಳಲ್ಲಿ ಎರಡು ವಿವಾದಾತ್ಮಕ ಮಸೂದೆಗಳೂ ಸೇರಿವೆ.

ನಡು ಬಾಗದ 'ಪತ್ರಕರ್ತನ' ನಡುರಾತ್ರಿಯ ಸ್ವಗತ - ನಾಗೇಶ್ ಹೆಗ್ಡೆ - NAGESH HEGDE

ನಡು ಬಾಗದ 'ಪತ್ರಕರ್ತನ' ನಡುರಾತ್ರಿಯ ಸ್ವಗತ | Vartha Bharati- ವಾರ್ತಾ ಭಾರತಿ
P Sainath Exclusive: Are The Farm Bills Pro-Farmers? | News Unlocked Wit...

: ಸುಶ್ರುತ ದೊಡ್ಡೇರಿ -- ಅಕ್ಷಯ ಕಾವ್ಯದ ಅಕ್ಷಯ ಓದು - { ಕೆ. ವಿ. ತಿರುಮಲೇಶ್ -K. V. TIRUMALESH }

:ಮೌನಗಾಳ:: ಅಕ್ಷಯ ಕಾವ್ಯದ ಅಕ್ಷಯ ಓದು

ಬುಸುಗುಟ್ಟುವ ಹಾವು  - ಎಚ್. ಎಸ್. ರಾಘವೇಂದ್ರ ರಾವ್ H. S. RAGHAVENDRA RAO

ಬುಸುಗುಟ್ಟುವ ಹಾವು  - News | BookBrahma
‘ಬೆಳದಿಂಗಳಾತು ಬನದಾಗ….’ ಎಚ್. ಎಸ್. ರಾಘವೇಂದ್ರ ರಾವ್ H. S. RAGHAVENDRA RAO

‘ಬೆಳದಿಂಗಳಾತು ಬನದಾಗ….’ - News | BookBrahma
ಸತ್ಯಹರಿಶ್ಚಂದ್ರ ಪ್ರಸಂಗ । ಬೊಂಬೆಯಾಟ SATYA HARISHCHANDRA PUPPET SHOW

ಈ ದುಶ್ಕಾಲದಲ್ಲಿ ನನಗಂತೂ ಕಾವ್ಯ ನೆರವಾಗಿದೆ.. ಎಮ್ ಎಸ್. ಆಶಾದೇವಿ

ಈ ದುಶ್ಕಾಲದಲ್ಲಿ ನನಗಂತೂ ಕಾವ್ಯ ನೆರವಾಗಿದೆ.. | | ಅವಧಿ । AVADHI
Sunday, September 20, 2020

ರಂಗಾಯಣ ಮೈಸೂರು ಪ್ರಸ್ತುತಪಡಿಸುವ ಬಿ. ವಿ ಕಾರಂತ ರಂಗಸಂಗೀತ - ಸಂಚಿಕೆ 02 B. V. KARANTH

ರಂಗಾಯಣ ಮೈಸೂರು ಪ್ರಸ್ತುತಪಡಿಸುವ ಬಿ. ವಿ ಕಾರಂತ ರಂಗಸಂಗೀತ - ಸಂಚಿಕೆ 01 B. V . KARANTH

ಕನ್ನಡ ವಿಶ್ವಕೋಶ: ಗತಕಾಲದ ಸಿಹಿ; ವರ್ತಮಾನದ ಕಹಿ -ಎಸ್. ಎಲ್. ಶ್ರೀನಿವಾಸಮೂರ್ತಿ -KANNADA ENCYCLOPAEDIA

ಕನ್ನಡ ವಿಶ್ವಕೋಶ: ಗತಕಾಲದ ಸಿಹಿ; ವರ್ತಮಾನದ ಕಹಿ | Prajavani
ಕಪಿಲಾ: ಭಾರತೀಯ ಕಲಾ ಲೋಕದ ಧೀಮಂತೆ -ಪುರುಷೋತ್ತಮ ಬಿಳಿಮಲೆ -KAPILA VATSAYANA by Dr Purushottama Bilimale

ಕಪಿಲಾ: ಭಾರತೀಯ ಕಲಾ ಲೋಕದ ಧೀಮಂತೆ | Prajavani
Saturday, September 19, 2020

Sunday, September 13, 2020

kavi muddanna documentary on the occasion of 150th birth anniversary...(..ಕವಿ ಮುದ್ದಣ

ಪಾಬ್ಲೊ ನೆರೂಡರ "ಕಾವ್ಯ" ಅನುವಾದ: ತೇಜಸ್ವಿನೀ ನಿರಂಜನ, ವಾಚನ:ಕಿರಣ್ ಭಟ್, ವಿಶ್ಲೇಷ...PABLO NERUDA / TEJASVINI NIRANJANA/KIRAN BHAT

K. V. Tirumalesh - ಕೆ. ವಿ. ತಿರುಮಲೇಶ್ ಸಮಗ್ರ ಕೃತಿಗಳು

Manasi Sudhir - K V Tirumalesh "yellige hogona" ಕೆ ವಿ ತಿರುಮಲೇಶ್ ಎಲ್ಲಿ...

K. V. Tirumalesh --ಕೆ. ವಿ. ತಿರುಮಲೇಶರೊಂದಿಗೆ ಸಂವಾದ K. V. TIRUMALESH

ಎಚ್ .ಡುಂಡಿರಾಜ್ -- ಕೆ. ವಿ. ತಿರುಮಲೇಶ್ 80 -K. V TIRUMALESH


 

ಸುಬ್ರಾಯ ಚೊಕ್ಕಾಡಿ ---ತಿರುಮಲೇಶ್ 80

 ತಿರುಮಲೇಶ್ 80

ಹೊರಟುಬಿಟ್ಟರು ಇವರು ಮೂಲ ನೆಲೆಯಿಂದ
ಒಸರಾಗಿ,ಹೊಳೆಯಾಗಿ,ನದಿಯಾಗಿ ಹರಿವಂತೆ ಮುಖವಾಡಗಳ ಕಳಚುತ್ತ,ತನ್ನ ವಠಾರ ದಾಟಿ
ಗಡಿನಾಡ ದಾಟಿ,ಕಲ್ಲು ಮುಳ್ಳುಗಳ ಕೊರಕಲು ಹಾದಿ ದಾಟಿ
ಜೋಡಿಸುತ ಕಿರುದಾರಿ ಹೆದ್ದಾರಿಗೆ.ಹಾಗೆ
ಹೆದ್ದಾರಿಯಲಿ ನಡೆದರೂ
ಅಕ್ಕ ಪಕ್ಕದ ಅನಾಮಿಕ ಮರ,ಸ್ವರ,ನೀರವವ ಧ್ಯಾನಿಸುತ
ಮುನ್ನಡೆದರು ಈ ಜ್ಞಾನದಾಹಿ
ಮಹಾ ಪಥಿಕನಾಗಿ.ನಡೆದು ಹೋದರು
ಒಂಟಿ ಸಲಗವಾಗಿ.
ಪರಮ ಕುತೂಹಲಿ ಇವರು
ಸ್ವೀಕರಿಸುತ್ತಾ ಹೋದರೆಲ್ಲವನ್ನೂ
ಹೋದ ಜಾಗವನೆಲ್ಲ ತನ್ನದೇ ನೆಲೆಯಾಗಿಸುತ
ಕಂಡದ್ದು,ಕೇಳಿದ್ದು,ಓದಿದ್ದು,ಅನುಭವಿಸಿದ್ದು..
ಮುಖಾಮುಖಿಯಾಗಿ ಎಲ್ಲದಕ್ಕೂ
ತನ್ನದೇ ಭಾಷೆಗೆ ರೂಪಾಂತರಿಸುತ್ತ ಎಲ್ಲವನ್ನೂ.
ಬದಲಾದ ಈ ಎಲ್ಲ ಅಸಂಖ್ಯ ರೂಪಗಳು
ಒಳರೂಪ,ಹೊರರೂಪಗಳ ಸಮನ್ವಯದ ಸಖ್ಯದಲಿ
ಚಲಿಸುತ್ತ,ತನ್ನ ಸೀಮೆಯ ತಾನೆ ಮೀರುತ್ತ
ಹೊಸ ಸೀಮೆಯನ್ನೆಲ್ಲ ಆವರಿಸಿಕೊಳ್ಳುತ್ತ
ಹೆಕ್ಕಿಕೊಂಡರು
ಧೂಳೊಳಡಗಿದ ಪುಟ್ಟ ಮಣಿ,ಇದ್ದಿಲ ಚೂರು
ಹೆಸರಿರದ,ಉಸಿರಿರದ,ವಸ್ತುಗಳನೆತ್ತಿ
ಉಜ್ಜಿ,ಉಸಿರೂಡಿ,ಹೊಳಪಾಗಿಸುತ ,ಹೆಣೆದು ಮಾಡಿದರು ಸೊಬಗಿನಕ್ಷಯ ಹಾರ.
ಸುದೀರ್ಘ ಪಯಣದ ಕೊನೆಗೆ
ಹಿಂದಿರುಗಿ ನೋಡಿದರೆ
ಇವರದೇ ಹೆಜ್ಜೆಗುರುತು.
ತೃಪ್ತಿ,ಅತೃಪ್ತಿಯ ನಡುವೆ ಜೋಕಾಲಿಯಾಡುವ ಇವರು
ಕೆಲವೊಮ್ಮೆ ಸಿಡಿವ ಜ್ವಾಲಾಮುಖಿ
ಮತ್ತೊಮ್ಮೆ ತಣ್ಣಗಿನ ಮಂಜುಗಡ್ಡೆ.
ಅಶಾಂತ ಚಿತ್ತದ ತಹತಹದ ನಡುವೆಯೂ
ಕೊನೆಗೂ ಉಳಿದಿರುವ ನಿರ್ಮಲ ಚಿತ್ತ.
ಎಲ್ಲ ಇದ್ದೂ ಇವರು ಅನಿಕೇತನ
ಆಗಿಸುತ ನಿಂತ ನೆಲೆಯೇ ಕೇತನ.
--ಸುಬ್ರಾಯ ಚೊಕ್ಕಾಡಿ.
You, Alaka Jithendra, Purushottama Bilimale and 163 others
30 Comments
5 Shares
Like
Comment
Share

ಸಂದರ್ಶನ: ಜಿ ರಾಜಶೇಖರ್ ಹಾಗೂ ಕೆ ಫಣಿರಾಜ್ ಸಂವಾದ | | ಅವಧಿ । AVADHI G. RAJASHEKHAR -PHANIRAJ


ಸಂಡೇ ಸಂದರ್ಶನ: ಜಿ ರಾಜಶೇಖರ್ ಹಾಗೂ ಕೆ ಫಣಿರಾಜ್ ಸಂವಾದ | | ಅವಧಿ । AVADHI: ಪರಂಪರೆಯ ನಂಟು ಕಳೆದುಹೋದ ಈ ಹೊತ್ತಿನಲ್ಲಿ ಪ್ರಖರ ಚಿಂತಕರಾದ ಜಿ.ರಾಜಶೇಖರ್ ಅವರು ಮಾತನಾಡುವುದೆಂದರೆ ಅದು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂಗತಿಗಳ ಮೇಲೆ ಬೀಳುವ ಹೊಸ ಬೆಳಕು; ಹೊಸ ದಿಕ್ಕಿನಲ್ಲಿ, ಹೊಸ ನೋಟದಲ್ಲಿ ನೋಡಬೇಕೆಂದು ಒತ್ತಾಯಿಸುವ ಬೌ

Saturday, September 12, 2020

ಕೃಷ್ಣಮೂರ್ತಿ ಹನೂರು ಬರಹ | ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’  Krishnamoorthy Hanuru

ಕೃಷ್ಣಮೂರ್ತಿ ಹನೂರು ಬರಹ | ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’  | Prajavani

ಜಲ್ಲಿಕಟ್ಟು-ಮನುಷ್ಯನ ಕೊಳಕಿಗೆ ಹಿಡಿದ ಕನ್ನಡಿ -ಕೆ . ಪುಟ್ಟಸ್ವಾಮಿ -K. PUTTASWAMI

ಜಲ್ಲಿಕಟ್ಟು-ಮನುಷ್ಯನ ಕೊಳಕಿಗೆ ಹಿಡಿದ ಕನ್ನಡಿ | Vartha Bharati- ವಾರ್ತಾ ಭಾರತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ | ಇ-ಉಪನ್ಯಾಸ-3 | ಕನ್ನಡ ಸಾಹಿತ್ಯದಲ್ಲಿ ಸಮನ್ವಯ ಸೂತ್ರ -ಮಲ್ಲೇಪುರಂ ವೆಂಕಟೇಶ್ -MALLEPURAM G. VENKATESH

Saturday, September 5, 2020

ದತ್ತಾತ್ರಿ ಎಮ್. ರಾಮಣ್ಣ - ಕೆಂಪು ಮುಡಿಯ ಹೆಣ್ಣು { ಒರ್ಹಾನ್ ಪಮುಕ್ /ಒ. ಎಲ್. ನಾಗಭೂಷಣ ಸ್ವಾಮಿ } O. L. NAGABHUSHANA SWAMI

ಕೆಂಪು ಮುಡಿಯ ಹೆಣ್ಣು
ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಒರ್ಹಾನ್ ಪಮುಕ್‌ರ ‘ದ ರೆಡ್ ಹೇರ್ಡ್ ವುಮನ್’ ಕಾದಂಬರಿಯನ್ನು ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಉತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ. ರವಿಕುಮಾರರ ಅಭಿನವ ಪ್ರಕಾಶನವು ಪುಸ್ತಕವನ್ನು ಅಚ್ಚುಕಟ್ಟಾಗಿ ಪ್ರಕಟಿಸಿದೆ. ಪಮುಕ್‌ರಂತಹ ಬರಹಗಾರರ ಇತ್ತೀಚಿನ ಕೃತಿ ಕನ್ನಡಕ್ಕೆ ಬರುತ್ತಿರುವುದು ಹೆಮ್ಮೆಯ ವಿಚಾರ. ಪಮುಕ್ ಟರ್ಕಿಷ್ ಭಾಷೆಯಲ್ಲಿ ಬರೆಯುವುದರಿಂದ ಅವರ ಕೃತಿಗಳು ನಮಗೆ ಲಭ್ಯವಾಗುವುದು ಇಂಗ್ಲಿಷಿನಲ್ಲಿ. ಇದೊಂದು ಕಾದಂಬರಿಯನ್ನು ಬಿಟ್ಟು ಅವರ ಹಿಂದಿನ ಕಾದಂಬರಿಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಸೋಮಾರಿತನವೂ ಒಮ್ಮೊಮ್ಮೆ ಅನಿರೀಕ್ಷಿತ ಫಲ ಕೊಡುತ್ತದೆ. ಆಗ ಇಂಗ್ಲಿಷಿನಲ್ಲಿ ಓದದ್ದಿದ್ದಕ್ಕೆ ಈಗ ಅದೇ ಪುಸ್ತಕವನ್ನು ಕನ್ನಡದಲ್ಲಿ ಓದುವ ಅದೃಷ್ಟ ಕೂಡಿಬಂತು.
ಪಮುಕ್ ಒಬ್ಬ ಅದ್ಭುತ ಕತೆಗಾರ. ಪುರಾಣ, ಇತಿಹಾಸ, ರಾಜಕೀಯ, ಮತ್ತು ಆಧುನಿಕತೆಯನ್ನು ಅವರು ಬೆರೆಸುವ ರೀತಿ ಅನನ್ಯ. ಅವರು ತಮ್ಮ ಪ್ರಾದೇಶಿಕ ಹಿನ್ನೆಲೆಯನ್ನು ಕತೆಯಲ್ಲಿ ತರುವ ರೀತಿ ಮತ್ತು ಆ ಹಿನ್ನೆಲೆ ಇರದ ನನ್ನಂತಹ ಓದುಗರನ್ನು ತಲುಪುವಲ್ಲಿಯೇ ಅವರ ಕುಶಲಮತಿ ಅಡಗಿದೆ. ನಮ್ಮ ಭರತ ಖಂಡದಂತೆಯೇ ಟರ್ಕಿ ಕೂಡ ಅನೇಕ ವಿಪ್ಲವಗಳ ದೇಶ. ಟರ್ಕಿಯ ವಿಶೇಷವೆಂದರೆ ಅದು ಪೂರ್ವಕ್ಕೂ ಮತ್ತು ಪಶ್ಚಿಮಕ್ಕೂ ನಡುವೆ ಸೇತುವೆಯಂತಿರುವ ಭೂಭಾಗ. ಒಂದು ಕೈಯಲ್ಲಿ ಅದು ಯುರೋಪನ್ನು ಹಿಡಿದಿದ್ದರೆ ಇನ್ನೊಂದು ಕೈಯಲ್ಲಿ ಅರಬ್-ಏಷ್ಯಾವನ್ನು ಹಿಡಿದಿದೆ. ಪಶ್ಚಿಮದ ಆಧುನಿಕತೆ ಮತ್ತು ಪೂರ್ವದ ಸಾಂಪ್ರದಾಯಕತೆ ಟರ್ಕಿಯಲ್ಲಿ ಒಂದಕ್ಕೊಂದು ಬೆರೆತು, ಘರ್ಷಿಸಿ, ಪ್ರೀತಿಸಿ, ದ್ವೇಷಿಸಿ ಅನೇಕ ಬಣ್ಣಗಳನ್ನು ಹುಟ್ಟುಹಾಕುತ್ತವೆ. ಆ ಬಣ್ಣಗಳೇ ಪಮುಕ್‌ರ ವಸ್ತು (ಬಣ್ಣಗಳು ಎಂದು ವಿಶೇಷವಾಗಿ ಹೇಳುತ್ತಿದ್ದೇನೆ, ಏಕೆಂದರೆ ಪಮುಕ್‌ರು ಸಾಹಿತ್ಯಕ್ಕೂ ಮೊದಲು ಚಿತ್ರಕಲಾವಿದನಾಗಲು ಹೊರಟವರು).
ಈ ಕಾದಂಬರಿಯಲ್ಲಿ ಎರಡು ಪುರಾಣಗಳು ಒಂದಕ್ಕೊಂದು ಘರ್ಷಿಸುತ್ತವೆ. ಗ್ರೀಕ್ ಪುರಾಣದ ಈಡಿಪಸ್ ತನಗರಿವಿಲ್ಲದಂತೆ ತನ್ನ ತಂದೆಯನ್ನೇ ಕೊಂದು ರಾಜನಾಗಿ ತಾಯಿಯನ್ನು ವಿವಾಹವಾಗಿರುತ್ತಾನೆ. ಪರ್ಶಿಯಾದ (ಈಗಿನ ಇರಾನ್‌ನ) ಸೊಹ್ರಾಬ್ ರುಸ್ತುಂ ಕತೆಯಲ್ಲಿ ಸುಲ್ತಾನ ರುಸ್ತುಂ ತನಗರಿವಿಲ್ಲದೆ ತನ್ನ ಮಗ ಸೊಹ್ರಾಬನನ್ನು ಕೊಲ್ಲುತ್ತಾನೆ. ಪಶ್ಚಿಮದ್ದು ‘ಪಿತೃಹತ್ಯೆ’, ಪೂರ್ವದ್ದು ‘ಪುತ್ರಹತ್ಯೆ’. ಎರಡು ಪುರಾತನ ಪ್ರತಿಮೆಗಳು ಎರಡು ಹಿರಿಯ ನಾಗರೀಕತೆಗಳಿಂದ ಬಂದು ಟರ್ಕಿಯಲ್ಲಿ ಸಂಧಿಸುತ್ತವೆ. ಪಿತೃ-ಪುತ್ರರಲ್ಲಿ ಸತ್ತವರು ಯಾರೇ ಆದರೂ ರೋದಿಸುವವಳು ಒಬ್ಬಳೇ, ಪತ್ನಿ ಮತ್ತು ತಾಯಿ ಎನ್ನಿಸಿಕೊಂಡವಳು. ಹಾಗೆಂದು ಈ ಕಾದಂಬರಿ ಪೌರಾಣಿಕ ಕತೆಯಲ್ಲ, ಪಕ್ಕಾ ಆಧುನಿಕ ಬದುಕಿನ ಕತೆ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿಯವರ ಅನುವಾದ ಕಾದಂಬರಿಯನ್ನು ಕನ್ನಡದ ಕತೆಯನ್ನಾಗಿಸಿದೆ. ನಿರೂಪಣೆಯಲ್ಲಾಗಲಿ ಅಥವಾ ಸಂಭಾಷಣೆಯಲ್ಲಾಗಲಿ ಸಾಮಾನ್ಯವಾಗಿ ಅನುವಾದಗಳಲ್ಲಿ ಕಾಣುವ ಕೃತ್ರಿಮತೆ ಇಲ್ಲಿ ಇಲ್ಲ. ಇಂಗ್ಲಿಷ್ ವಾಕ್ಯಗಳು ಕನ್ನಡಕ್ಕೆ ಅನುವಾದಗೊಂಡಿಲ್ಲ ಬದಲಿಗೆ ರೂಪಾಂತರಗೊಂಡಿವೆ. ಕನ್ನಡದ ಸಹಜತೆಯನ್ನು ಧರಿಸಿವೆ. ಇಸ್ತಾಂಬುಲ್ ಹೆಸರು ತೆಗೆದು ಬೆಂಗಳೂರು ಎಂದು ಮಾಡಿದರೆ ಇದು ಯಾವ ವ್ಯತ್ಯಾಸವೂ ಇಲ್ಲದೆ ಈ ಭೌಗೋಳಿಕ ಭಾಗದ ಕತೆಯೇ ಆಗಿಬಿಡುತ್ತದೆ. ಸಾಹಿತ್ಯಾಸಕ್ತರು ಖಂಡಿತಕ್ಕೂ ಓದಬೇಕಾದ ಪುಸ್ತಕವಿದು.
ದತ್ತಾತ್ರಿ ಎಂ ರಾಮಣ್ಣ
KV Subramanyam, Sadananda Bhat Vaijayanta and 35 others
2 Comments
Like
Comment
Share