ಜೀವನದ ಪ್ರತಿಕ್ಷಣವೂ ಸಂಭ್ರಮ ಪಡುವಂತಿರಬೇಕು..ಆದರೆ ಸಧ್ಯದ ಈ ಸಾಂಕ್ರಾಮಿಕ ಉಸಿರುಕಟ್ಟಿಸುವಂತಿದೆ..ನಮ್ಮೊಳಗೆ ಇರುವ ನೆನಪಿನ ಲೋಕದ ಮೂಲಕ ಸಧ್ಯದ ಕಷ್ಟ ಕಾಲವನ್ನು ದಾಟುವ ಒಂದು ಬಗೆಯೇ ಎಂ ಆರ್ ಕಮಲಾ ಅವರ ಗಧ್ಯಗಂಧಿ ಕವಿತೆ ಗಳು.
ನೆನಪಿನ ಖಜಾನೆಯಿಂದ ಆಯ್ದ ಈ ಹನಿಗಳು ವರ್ತಮಾನ ದ ಬದುಕನ್ನು ಸಹ್ಯವಾಗಿಸುತ್ತವೆ. ಸಂದು ಹೋದ ಕಾಲದ ಜೀವಂತಿಕೆಯನ್ನು ವರ್ತಮಾನ ಕ್ಕೆ ಎಳೆದುತರುವಲ್ಲಿ ಕಮಲಾ ಯಶಸ್ವಿ ಯಾಗಿದ್ದಾರೆ.
ಇದ್ದಕ್ಕಿದ್ದಂತೆ ನೆನಪಿನ ಲೋಕದಿಂದ ಮನೆಯೊಳಗೆ ಬರುವ ತೆಂಗಿನ ಗರಿ, ಕವಿಯ ಕಲ್ಪನೆ ಯಲ್ಲಿ ಹಕ್ಕಿಗಳಾಗಿ ಕೊನೆಗೆ ಪೊರಕೆಯಾಗಿ ಕನಸಿನ ಹಿಡಿಕೆಯಲ್ಲಿ ಬಂಧಿಯಾಗುತ್ತದೆ. ಇಲ್ಲಿ" ಬಾಲ್ಯದ ಓಣಿಯಲ್ಲಿ ಕುಳಿತು ಮಣ್ಣು ಕೆರೆದು ಬಳೆ ಚೂರುಗಳನ್ನು ಆರಿಸಿ ಲಂಗಕ್ಕೆ ತುಂಬಿಕೊಳ್ಳಬಹುದು." ಬೀದಿಗೆ ಮುಖಮಾಡಿಟ್ಟ ಕನ್ನಡಿಯಲ್ಲಿ ಹಾದು ಹೋಗುವ ಪ್ರತಿ ಜೀವಿಯ ನೋವು ನಲಿವು ನಮ್ಮ ಎದೆಯಲ್ಲಿ ಪ್ರತಿಫಲಿಸುತ್ತದೆ. ಕಡಿಮೆ ಬೆಳಕಿನ ಹಳ್ಳಿಯ ಮನೆಯಿಂದ ಝಗಮಗಿಸುವ ಬೆಳಕಿನ ಕಡೆ ಹೋದವರು "ತಡೆಯಲಾರದಷ್ಟು ಬೆಳಕು ಕಣ್ಣು ಕುಕ್ಕಿದಾಗ ವಾತಾವರಣ ಕ್ಕೆ ಉಸಿರುಗಟ್ಟಿ ಎಲ್ಲರೂ ಮನೆಗೆ ಮರಳುತ್ತಿದ್ದಾರೆ". ಬದುಕಿನ 'ಛಂದವೇ' ಬದಲಾಗಿದೆ. "ಇಡೀ ಬದುಕು ಸಿಕ್ಕು ಬಿಡಿಸುವುದೇ ಹೆಣ್ಣುಮಕ್ಕಳ ಕೆಲಸ " ಎಂಬ ಸತ್ಯ ದರ್ಶನವಾಗಿತ್ತದೆ.
ಮನದೊಳಗಿನ ಲೋಕದಲ್ಲಿ ತಂದೆಯ ಪತ್ರಗಳು ಬರುತ್ತಲೇ ಇರುತ್ತವೆ. ಫಲ್ಗುಣಿ ಕರು ಹಾಕಿದ್ದು, ಊರಿಗೆ ನಲ್ಲಿ ಬಂದಿದ್ದು, ತೋಟ ಕ್ಕೆ ಮಣ್ಣು ಹಾಕಿದ್ದು...ನನಗೆ ನನ್ನದೇ ನೆನಪುಗಳನ್ನು ಹೊಳೆಯಿಸಿತು.ನನಗೆ ಫಸ್ಟ್ ಪಿ ಯು ನಲ್ಲಿ ಕರಾವಳಿಯ ಒಂದು ಹಾಸ್ಟೆಲ್ ನಲ್ಲಿ ದ್ದಾಗ ಮತ್ತೆ ಮೈಸೂರಿನ ಲ್ಲಿ ಓದುತ್ತಿದ್ದಾಗ ತಮ್ಮ ಬರೆಯುತ್ತಿದ್ದ ಕಾಗದದ ಸಾಲುಗಳು ನೆನಪಾದವು. " ಅರಿಸಿನ ದಾಸವಾಳ ತುಂಬಾ ಹೂ ಬಿಡುತ್ತಿದೆ, ಜೂಲುನಾಯಿ ಮರಿ ಹಾಕಿದೆ ಎರಡು ಬಿಳಿ ಒಂದು ಕಪ್ಪು, ...ಊರಿನ ....ಮನೆ ಬಿಟ್ಟು ಓಡಿ ಹೋಗಿ ದ್ದಾನೆ .ಅಲ್ಲೇನಾದರೂ ಕಂಡರೆ ಹೇಳು.." ಮತ್ತೆ ಆ ಕಾಲಕ್ಕೆ ಹೋದೆ. ವರ್ತಮಾನ ಕ್ಕೆಬಂದರೆ ಇಸ್ತ್ರಿ ಮಾಡುವ ಮುದುಕನ ಗಾಡಿ ಪ್ಲಾಸ್ಟಿಕ್ ಹೊಂದಿಸಿಕೊಂಡು ರಸ್ತೆಯ ಪಕ್ಕ ನಿಂತಿದೆ..ಅವನ ಸುಳಿವಿಲ್ಲ.
ದೈನಂದಿನ ಚಿಕ್ಕ ಪುಟ್ಟ ಸಂತೋಷ ಗಳಿಂದ ಬದುಕಿನ ದೊಡ್ಡ ಕಷ್ಟ ಗಳನ್ನು ಸಹಿಸಿಕೊಳ್ಳುವ ಒಂದು ಮನಸ್ಸು ಈ ಗದ್ಯಗಂಧೀ ಕವಿತೆಗಳಲ್ಲಿದೆ...ಲಂಗದ ಜೇಬಿಗೆ ಆಟಕ್ಕಾಗಿ ಕಲ್ಲು ತುಂಬಿಕೊಳ್ಳುವ ಆ ಪುಟ್ಟ ಹುಡುಗಿ ನನಗೆ ಕುವೆಂಪು ಅವರ
" ಚೇತನ ಮೂರ್ತಿ ಯು ಆ ಕಲ್ಲು;
ತೆಗೆ ಜಡವೆಂಬುದು ಬರೀ ಸುಳ್ಳು " ಎಂಬ ಸಾಲುಗಳನ್ನು ನೆನಪಿಸಿತು.. ಇದೊಂದು ಹೊಸಬಗೆಯ ಬರೆಹ. ಇದರಲ್ಲಿ ನೀವು ಯಶಸ್ವಿಯಾಗಿದೀರಿ. ಅಭಿನಂದನೆಗಳು ಕಮಲಾ ಇಷ್ಟು ಚೆಂದ ದ ಪುಸ್ತಕ ಕಳಿಸಿದ್ದಕ್ಕೆ.Metikurke Ramaswamy Kamala
Thank you
Sumithra Lc
No comments:
Post a Comment