Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Monday, March 1, 2021
ಕಡಮೆ ಪ್ರಕಾಶ್ -ಕತೆಗಾರ್ತಿ ಬಿ. ಟಿ. ಜಾಹ್ನವಿ /B. T. JAHNAVI / Kadame Prakash
ಬಿ.ಟಿ.ಜಾನ್ಹವಿಯವರಿಗೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ರ
" ಸಾಹಿತ್ಯ ಶ್ರೀ " ಪ್ರಶಸ್ತಿ .
ಬಿ.ಟಿ. ಜಾನ್ಹವಿ ನಮ್ಮ ನಡುವಿನ ಪ್ರಮುಖ
ಸೃಜನಶೀಲ ಕಥೆಗಾರ್ತಿ. 1987 ರಿಂದ ಬರವಣಿಗೆಯಲ್ಲಿ
ತೊಡಗಿಸಿಕೊಂಡ ಇವರು ಲಂಕೇಶ್ ಪತ್ರಿಕೆ ಯ
ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರು . ದಾವಣಗೇರಿಯಲ್ಲಿ ತಮ್ಮದೇ ತಂಡ ಕಟ್ಟಿಕೊಂಡು
ನಾಟಕಾಭಿನಯನದಲ್ಲೂ ಇವರದು ಎತ್ತಿದ ಕೈ.
ಯಾವುದೇ ಇಸಂ ಇಲ್ಲಾ ಗುಂಪುಗಾರಿಕೆ ಯಲ್ಲಿ
ಕಾಣಿಸಿಕೊಳ್ಳದೇ ತಮ್ಮನ್ನು ತಾವೇ ಹೋರಾಟ,
ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವರು ಇವರು .
2014 ರಲ್ಲಿ ತಮ್ಮ 25 ಕಥೆಗಳ ಸಂಕಲನ
" ಕಳ್ಳು ಬಳ್ಳಿ " ಯನ್ನು ಪ್ರಕಟಿಸಿರುವರು .
ಪಿ.ಲಂಕೇಶ್ ಇವರ ಕತೆಗಳ ಕುರಿತು ಬರೆಯುತ್ತಾ.......
ಜಾನ್ಹವಿಗೆ ತಾನು ಕಂಡದ್ದನ್ನು ಮಾತ್ರ ಜೀವಂತ ಭಾಷೆಯಲ್ಲಿ ಹೇಳುವ ಕಾತರವಿದೆ. ಮಧ್ಯಮ ವರ್ಗದ
ತೆಳುವಾದ ವಸ್ತುವನ್ನು ಆರಿಸಿಕೊಂಡಾಗಲೂ ,
ದಲಿತರ ಅನುಭವಗಳನ್ನು ನಿರೂಪಿಸುವಾಗಲೂ
ಜಾನ್ಹವಿ ದಟ್ಟವಾಗಿ , ತೀವ್ರವಾಗಿ ಬರೆಯುತ್ತಾರೆ. ಬದುಕಿನ ವಿಚಿತ್ರಗಳನ್ನು ಕಂಡು ಎದುರಿಸುವ ಜೊತೆಗೇ
ಕಂಡದ್ದನ್ನು ಅದರೆಲ್ಲಾ ಸೊಗಡು ಮತ್ತು ಮುಗ್ಧತೆಯೊಂದಿಗೆ ಹೇಳುವ ಪ್ರತಿಭೆಯನ್ನು ಈ ಹೆಣ್ಣುಮಗಳಲ್ಲಿ ಕಾಣುತ್ತೇವೆ . ಸಾಹಿತಿಗೆ ಬೇಕಾದ
ವಸ್ತುನಿಷ್ಠೆ ಮತ್ತು ಮಮತೆ ಇವರಲ್ಲಿ ಉದ್ದಕ್ಕೂ ಕಾಣುವ ವಿಶಿಷ್ಟ ಗುಣ...... ಎಂದಿರುವುದು.
ನಾಡಿನ ಸಾಕ್ಷಿಪ್ರಜ್ಞೆಯ ಬರಹಗಾರ
ಜಯಂತ್ ಕಾಯ್ಕಿಣಿ ಜಾನ್ಹವಿಯ ಕತೆಯ ಕುರಿತು......
ಮನುಷ್ಯನ ಅಂತಃಸತ್ವವನ್ನು ಒರೆಗೆ ಹಚ್ಚುವ ಕ್ಷಣಗಳಲ್ಲಿ ಇವರ ಕಥನ ಕುತೂಹಲವಿದೆ. ಜೀವನವೆಂಬ ದೈನಿಕ ಧಾರಾವಾಹಿಗಳಲ್ಲಿ ವಾಡಿಕೆಯಂತೆ ಪಾತ್ರ ನಿರ್ವಹಿಸುವ ವ್ಯಕ್ತಿಗಳ
ಪಾಡನ್ನು ತೀವ್ರವಾಗಿ ಪರೀಕ್ಷೆಗೆ ಒಡ್ಡುವಂತ ಪ್ರಸಂಗಗಳನ್ನು ಅಂತಃಕರಣದ ಕಣ್ಣುಗಳಿಂದ ನೋಡಲು ಯತ್ನಿಸಿದಾಗೆಲ್ಲಾ ಇವರ ಕಥನ
ಹಸಿಕಸುವಿನಿಂದ ಸ್ಪಂಧಿಸತೊಡಗುತ್ತದೆ........
ಎಂದಿರುತ್ತಾರೆ.
ಜಾನ್ಹವಿಯವರ ಕತೆಯಲ್ಲಿ
ಮನುಷ್ಯರ ಸಮಸ್ಯೆಗಳನ್ನು ಕಾಣುವ ಪ್ರಯತ್ನ,
ಹೆಣ್ಣಿನ ಬದುಕಿನ ತಳಮಳ, ಶೋಷಣೆ,
ಗುಂಡು ಹೆಣ್ಣಿನ ಸಂಬಂಧದ ಸೂಕ್ಷ್ಮತೆ,
ಮನುಷ್ಯನ ಬಡತನ, ಕೆಟ್ಟತನ ಮತ್ತು ಸ್ವಾರ್ಥಿತನ, ದುಃಖ.....ಇವುಗಳ ನಡುವೆಯೂ ಪುಟಿದೇಳುವ
ಮನುಷ್ಯತ್ವದ ಜೀವಸೆಲೆಯ ನಿರಂತರತೆ ಇದೆ .
ನಾಗಸುಧೆಯ ಜೀವದ ಗೆಳತಿ ಜಾನ್ಹವಿ,
ನಿಮ್ಮೆಲ್ಲಾ ಕನಸುಗಳು ನೆರವೇರಲಿ, ಮತ್ತೆ
ಕನ್ನಡ ಕಥಾಲೋಕವನ್ನು ಪ್ರವೇಶಿಸಿ ಹೊಸ ಹೊಸ
ಸಂಗತಿಗಳನ್ನು ಉಣಬಡಿಸಿರಿ , ಕಾಯುವೆವು
ಎನ್ನುತ್ತಾ ,
ಕರ್ನಾಟಕ ಸಾಹಿತ್ಯ ಅಕಾಡೆಮಿಯವರ 2020 ರ
" ಸಾಹಿತ್ಯ ಶ್ರೀ " ಪ್ರಶಸ್ತಿಗೆ ಶುಭಕೋರಿ ಅಭಿನಂದಿಸುವೆ.
ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ.
With
Sunanda Kadame
Jahnavi B Thippeswamy
Comments
Uma Mukund
ಹೃತ್ಪೂರ್ವಕ ಅಭಿನಂದನೆಗಳು ಜಾಹ್ನವಿಯವರಿಗೆ 💙💙
· Reply · 12h · Edited
Write a comment…
Kadame Prakash is with ಭಾಗ್ಯಜ್ಯೋ
Subscribe to:
Post Comments (Atom)
No comments:
Post a Comment