Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Thursday, June 30, 2022
ಪಾ ವೆಂ ಆಚಾರ್ಯ - ಬತ್ತಲೆ- ಮಂತ್ರದಲ್ಲಿ , ಮಾಟದಲ್ಲಿ , ಭಕ್ತಿಯಲ್ಲಿ -
<ಪಾ ವೆಂ ಅಚಾರ್ಯರ ಈ ಲೇಖನ - ಬತ್ತಲೆ , ಮಂತ್ರದಲ್ಲಿ , ಮಾಟದಲ್ಲಿ , ಭಕ್ತಿಯಲ್ಲಿ " -- ಕಸ್ತೂರಿ ಮಾಸಪತ್ರಿಕೆ ಯ ಮೇ 1986 ರ ಸಂಚಿಕೆಯಲ್ಲಿ ಪ್ರಕಟವಾಗಿದೆ . ಪುನರ್ಮುದ್ರಣ - ಕಸ್ತೂರಿ - ಜುಲೈ 2022
Wednesday, June 29, 2022
ಪ್ರಭಾಕರ ಕಾರಂತ - ಬಾಲವನದಲ್ಲಿ ಕಾರಂತರು / Shivarama karanth
ಆಪ್ತ ಬರಹಗಳ ಬಾಲವನದಲ್ಲಿ ಭಾರ್ಗವ
ಡಾ.ಶಿವರಾಮ ಕಾರಂತರ ಕುರಿತು ಅನೇಕ ಆಪ್ತ ಬರಹಗಳನ್ನೊಳಗೊಂಡ "ಬಾಲವನದಲ್ಲಿ ಭಾರ್ಗವ" ಒಂದು ಅಪರೂಪದ ಪುಸ್ತಕ. ಕಾರಂತರ ಬದುಕು ಬರಹದ ಕುರಿತು ಆಗಲೇ ಅನೇಕಾನೇಕ ಪುಸ್ತಕಗಳು ಬಂದಿದ್ದು ಹೊಸತಾಗಿ ಪ್ರಕಟಿಸುವವರಿಗೆ ಸವಾಲುಗಳು ಇದ್ದೇ ಇರುತ್ತದೆ. ಏನು ಬರೆದರೂ ಆಗಲೇ ಎಲ್ಲೋ ಪ್ರಕಟವಾಗಿರುವ ಸಂಗತಿ ಆಗಿರಬಹುದು. ಆದರೆ ಈ ಸವಾಲನ್ನು ಈ ನವ ಕೃತಿ ಮೀರಿ ನಿಂತಿದೆ. ಕಾರಂತರ ಜೀವನ ಸಮೃದ್ಧಿ ಒಂದು ಕಡಲಿದ್ದಂತೆ. ಅಲ್ಲಿ ಮೊಗೆದಷ್ಟೂ ಮುತ್ತು ರತ್ನಗಳಿವೆ. ಅದು ಈ ಕೃತಿಯ ಮೂಲಕ ಮಗದೊಮ್ಮೆ ಸ್ಪಷ್ಟವಾಗಿದೆ.
ಶಿಕ್ಷಕ ಅನಂತಕೃಷ್ಣ ಹೆಬ್ಬಾರ್ ಜ್ಞಾನಪೀಠ ಬಂದ ಕಾರಂತರನ್ನು ತಮ್ಮ ಶಾಲೆಗೆ ಕರೆಸಿ ಗೌರವಿಸಲೆಂದು ಅವರ ಸಾಲಿಗ್ರಾಮ ಮನೆಗೆ ಹೋಗುತ್ತಾರೆ. ಬಾಗಿಲು ತೆರೆದ ಕಾರಂತರು 'ಏನು ಬಂದಿರಿ ಎಂದು ಹೊರಗೆ ನಿಲ್ಲಿಸಿಯೇ ಪ್ರಶ್ನಿಸುತ್ತಾರೆ. ವಿವರ ಹೇಳುತ್ತಿದ್ದಂತೆ "ನಾನು ಬರುವುದಿಲ್ಲ" ಎಂದು ಹೇಳಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೆಬ್ಬಾರರಿಗೆ ಪೆಚ್ಚೆನಿಸಿ ಅವರು ಹಿರಿಯಡ್ಕ ಗೋಪಾಲರಾಯರ ಮನೆಗೆ ಹೋಗಿ ತಮಗಾದ ಅನುಭವ ಹಂಚಿಕೊಳ್ಳುತ್ತಾರೆ. ಕಡೆಗೆ ಗೋಪಾಲರಾಯರೂ ಹೆಬ್ಬಾರರನ್ನು ಕರೆದುಕೊಂಡು ಕಾರಂತರ ಮನೆಗೆ ಬರುತ್ತಾರೆ. ಮತ್ತೆ ಬಾಗಿಲು ತೆರೆದ ಕಾರಂತರು ಇಬ್ಬರನ್ನು ನೋಡಿ ಆಗಲೇ ಆಗೋಲ್ಲ ಅಂದಾಗಿದೆ. ಪುನಃ ಜೊತೆಗೂಡಿ ಬಂದಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ರಾಯರಾಗ ಏಕಾಗಿ ಬರಲ್ಲ ಎಂಬ ಉತ್ತರಕ್ಕಾಗಿ ಬಂದೆವು ಎನ್ನುತ್ತಾರೆ. "ನಾನು ಜ್ಞಾನಪೀಠದಲ್ಲಿ ಕೊಟ್ಟದ್ದನ್ನು ಪೆಟ್ರೋಲ್ ಸುಟ್ಟು ಖಾಲಿ ಮಾಡುವೆ ಎಂದು ಹರಕೆ ಹೊತ್ತಿಲ್ಲ" ಎಂದು ಗರಂ ಆಗಿಯೇ ಉತ್ತರಿಸುತ್ತಾರೆ. ಹಿಂದಿನ ದಿನ ಇದೇ ಉದ್ದೇಶದಿಂದ ಕರೆದಿದ್ದ ಯಾವುದೋ ಶಾಲೆಯವರು ಕಾರಿನ ಪೆಟ್ರೋಲ್ ಹಣವನ್ನೂ ಕೊಡದೇ ಕಳಿಸಿರುತ್ತಾರೆ. ಅಂತೂ ಹೆಬ್ಬಾರರು ಕಾರಂತರನ್ನು ಒಪ್ಪಿಸಿಯೇ ಹೊರಡುತ್ತಾರೆ.
ಅದು 1970. ಕಾರಂತರಿನ್ನೂ ಪುತ್ತೂರಲ್ಲಿ ಇದ್ದ ಕಾಲ. ಗಿರಿಜ ಎಂಬ ಶಿಕ್ಷಕಿ ಆಗ ಕಾರಂತರ ಲಿಪಿಕಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಆಕೆ ಕೊಂಚ ತಡವಾಗಿ ಕಾರಂತರ ಬಳಿ ಬಂದಿರುತ್ತಾರೆ. ಕಾರಣ ಕೇಳಿದಾಗ ಹೊಸ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಅಂದು ಗಿರಿಜಾ ಸಹೋದ್ಯೋಗಿ ಭವಾನಿಯ ಮದುವೆ ಕಟೀಲಿನಲ್ಲಿ . ಅವಳನ್ನು ಕಳಿಸಿ ಬರುವುದು ತಡವಾಯಿತು ಎಂದು ಗಿರಿಜಳ ವಿವರಣೆ. "ಅರೇ ನೀನು ಮದುವೆಗೆ ಹೋಗಿಲ್ಲ. ಇನ್ನು ಕಳಿಸುವುದೇನು. ದಿಬ್ಬಣ ಅದೇ ಹೋಗುತ್ತಿತ್ತು" ಅನ್ನುತ್ತಾರೆ ಕಾರಂತರು. "ದಿಬ್ಬಣ ಗಿಬ್ಬಣ ಇಲ್ಲ. ಅವಳೊಬ್ಬಳೇ ನಮ್ಮ ಮನೆಯಲ್ಲಿ ಉಳಿದು ಬಸ್ ಹತ್ತಿದ್ದು. ಅವರ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲ. ಆಕೆ ಹವ್ಯಕರ ಹುಡುಗಿ. ಬ್ರಾಹ್ಮಣರಲ್ಲೇ ಹವ್ಯಕೇತರನನ್ನು ಪ್ರೀತಿಸಿದಳು. ಮನೆಯವರು ವಿರೋಧಿಸಿ ಕಡೆಗೆ ಆಕೆಯನ್ನು ನಿನ್ನೆ ರಾತ್ರಿ ಮನೆಯಿಂದ ಹೊರಹಾಕಿದರು. ನಮ್ಮ ಮನೆಯಲ್ಲಿದ್ದು ಬೆಳಿಗ್ಗೆ ಬಸ್ ಹತ್ತಿದ್ದಾಳೆ. ಇಲ್ಲಿಗೆ ಬರೋದಿಲ್ಲದಿದ್ದರೆ ನಾನಾದರೂ ಜೊತೆಗಿರುತ್ತಿದ್ದೆ" ಎಂಬ ಗಿರಿಜಳ ಮಾತು ಕಾರಂತರನ್ನು ಕುಳಿತಲ್ಲಿಂದ ಎದ್ದು ನಿಲ್ಲಿಸುತ್ತದೆ. ಏಳು ಎಂದು ಅವಳನ್ನೂ ಎಬ್ಬಿಸಿ ಹೊರಬಂದು ಡ್ರೈವರ್ ಕರೆದು ಕಾರು ಹೊರಡಿಸುತ್ತಾರೆ. ಸೀದಾ ಸಂಜೀವ ಶೆಟ್ಟರ ಜವಳಿ ಅಂಗಡಿ ತಲುಪಿ ಒಂದು ರೇಷ್ಮೆ ಸೀರೆ ಕಟ್ಟಿಸಿ ಕಾರು ಕಟೀಲಿಗೆ ಹೋಗಲಿ ಎನ್ನುತ್ತಾರೆ. ಗಿರಿಜೆ ಜೊತೆ ಕಟೀಲು ದೇವಸ್ಥಾನ ತಲುಪಿ ಮಂಟಪದಲ್ಲಿ ಭವಾನಿ ದಂಪತಿಗಳಿಗೆ ಉಡುಗರೆ ಕೊಟ್ಟು ಅಮ್ಮ ಅಪ್ಪ ಬರಲಿಲ್ಲ ಎಂದು ಯೋಚಿಸಬೇಡ. ಎಲ್ಲಾ ಸರಿಯಾಗುತ್ತೆ ಎಂದು ಹಾರೈಸಿ ಧೈರ್ಯ ತುಂಬುತ್ತಾರೆ. ಕಡೆಗೆ ಮದುವೆ ಊಟ ಉಂಟು ವಾಪಸ್ಸು ಬರುತ್ತಾರೆ. ಅನಿಸಿದ್ದನ್ನ ಆ ಕ್ಷಣ ಜಾರಿ ತರುವ ಕರುಣಾಮಯಿ ಕಾರಂತರವರು.
ಕೊಡಗು ಜಿಲ್ಲೆಯ ಚಟ್ಟಳ್ಳಿ ಶಾಲೆಯಲ್ಲಿ ಪಿ.ಜಿ.ಅಂಬೇಕಲ್ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಕಾರಂತರನ್ನು ಕರೆಸಲು ಶಾಲೆಯವರ ಮನ ಒಲಿಸಿ ಕೇಳಲು ಕಾರಂತರ ಮನೆಗೆ ಬರುತ್ತಾರೆ. " ಶಾಲಾ ವಾರ್ಷಿಕೋತ್ಸವಕ್ಕೆ ಬಾಷಣ ಕೇಳಲು ಯಾರು ಬರುತ್ತಾರೆ. ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಿಸಲು ಬಂದವರಿಗೆ ಮಾತು ಬೇಡದ ಹಿಂಸೆ ನಾನು ಬರುವುದಿಲ್ಲ" ಎಂದು ಖಂಡಿತವಾಗಿ ಹೇಳಿದ ಕಾರಂತರಿಗೆ ಏನು ಉತ್ತರಿಸುವುದು ಎಂದು ತಿಳಿಯದ ಅಂಬೇಕಲ್ ಪೆಚ್ಚು ಮುಖ ಮಾಡಿಕೊಳ್ಳುತ್ತಾರೆ. "ಆಗಲಿ ನಿಮ್ಮ ಶಾಲೆಗೆ ಯಾವಾಗಲಾದರೂ ಬಂದರಾಯಿತಲ್ಲ. ನಾನೇ ತಿಳಿಸಿ ಬರುವೆ" ಎಂಬ ಕಾರಂತರ ಮಾತು ತಮ್ಮನ್ನು ಸಮಾಧಾನಿಸಲು ಹೇಳಿದ್ದು ಅಂದುಕೊಂಡ ಅಂಬೇಕಲ್ ಅಲ್ಲಿಂದ ನಿರ್ಗಮಿಸುತ್ತಾರೆ. "ನಾನು ಮಾರ್ಚ್ 1ರಂದು ಕುಶಾಲನಗರಕ್ಕೆ ಬರುತ್ತಿರುವೆ. ನಿಮ್ಮ ಶಾಲೆಗೆ ಬೆಳಿಗ್ಗೆ 9.30ಕ್ಕೆ ಬರುವೆ. ನನಗಾಗಿ ನೀವು ಯಾವ ಏರ್ಪಾಟನ್ನೂ ಮಾಡಬೇಕಿಲ್ಲ "ಎಂಬ ಕಾರಂತರ ಕಾರ್ಡು ವಾರದ ಮೊದಲೇ ಅಂಬೇಕಲ್ ಗೆ ಬಂದೇ ಬರುತ್ತದೆ. ಹೇಳಿದ ದಿನ ಐದು ನಿಮಿಷ ಮೊದಲೇ ಕಾರಂತರ ಕಾರು ಶಾಲೆಗೆ ಬಂದಿರುತ್ತದೆ. ತಮ್ಮ ಅಮೆರಿಕ ಪ್ರವಾಸ ಅನುಭವವನ್ನ ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಿ ಸಂಭ್ರಮದಿಂದ ಮಕ್ಕಳೊಂದಿಗೆ ನಲಿದು ಕಾರಂತರು ನಿರ್ಗಮಿಸುವಾಗ "ನಿಮ್ಮ ಹರಕೆ ತೀರಿಸಿ ಆಯಿತಲ್ಲ" ಎಂದು ಚಟಾಕಿ ಹಾರಿಸುತ್ತಾರೆ.
ಕಾರಂತರು ನೂರಾರು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿ ಅದನ್ನು ನಿರ್ದೇಶನ ಮಾಡಿ ಮಕ್ಕಳಿಂದ ಮತ್ತು ಶಿಕ್ಷಕರಿಂದ ಶಾಲಾ ರಂಗಮಂದಿರದಲ್ಲಿ ಪ್ರದರ್ಶಿಸಿದವರು. ಕಡಬ ಶಾಲೆಯಲ್ಲಿ ಅವರ ಚೋಮನದುಡಿಯ ಪೂರ್ವ ನಾಟಕ ರೂಪ ಡೋಮಿಂಗೋ ಹೀಗೇ ಪ್ರದರ್ಶಿತವಾಗುತ್ತದೆ. ಮುಖ್ಯೋಪಾಧ್ಯಾಯ ಮುಂಕಡೆಯವರದ್ದು ಮತಾಂತರ ಮಾಡುವ ಪಾದ್ರಿಯೊಬ್ಬರ ಪಾತ್ರ. ದಲಿತ ಮಕ್ಕಳ ಮತಾಂತರದ ಹುನ್ನಾರ ಈ ನಾಟಕದಲ್ಲಿ ಅನಾವರಣ ಆಗಿರುತ್ತದೆ. ಚರ್ಚ್ ಗೆ ಅದು ಮುಜುಗರ ತರುತ್ತದೆ. ಅವರು ಪ್ರಭಾವ ಬೀರಿ ಮುಂಕಡೆಯವರನ್ನು ಬೆಳ್ತಂಗಡಿಗೆ ವರ್ಗಾಯಿಸುತ್ತಾರೆ. ಕಾರಂತರ ಗಮನಕ್ಕೆ ಅದು ಬಂದಕೂಡಲೇ ಅವರು ಹಠ ಹಿಡಿದು ವರ್ಗಾವಣೆ ರದ್ದು ಮಾಡಿಸುತ್ತಾರೆ. ಚರ್ಚ್ ಈ ಮನುಷ್ಯನ ಸಹವಾಸ ಬೇಡ ಎಂದು ತಣ್ಣಗಾಗುತ್ತದೆ.
ಮುಂಕಾಡೆಯವರಿಗೆ ಮಾಸಿಕ ಹದಿನೈದು ರೂ ಸಂಬಳ ಇದ್ದಾಗಲೇ ಕಾರಂತರ ಬಾಲವನಕ್ಕವರು ಇಪ್ಪತ್ತೈದು ರೂ ದೇಣಿಗೆ ನೀಡಿರುತ್ತಾರೆ. ಇಷ್ಟು ದೊಡ್ಡ ಮೊತ್ತ ಬಡ ಶಾಲಾ ಶಿಕ್ಷಕರಿಂದ ಬಂದಿದ್ದು ಕಾರಂತರ ಉತ್ಸಾಹ ಹೆಚ್ಚಿಸಿದ್ದು ಆಗಿನಿಂದಲೂ ಕಾರಂತರಿಗೆ ಮುಂಕಾಡೆ ಮೇಲೆ ಅಭಿಮಾನ ಮೂಡಿರುತ್ತದೆ.
ಮುಂದೆ ಮುಂಕಾಡೆಯವರ ಮಗ ರಘುನಾಥ ರಾವ್ ಪುತ್ತೂರಿನಲ್ಲಿ ಮುದ್ರಣ ಯಂತ್ರ ಸ್ಥಾಪಿಸಿದಾಗ ಆಗಲೂ ಅದರ ಅನುಭವವಿದ್ದ ಕಾರಂತರು "ಇದು ಕಬ್ಬಿಣ ಒಟ್ಟು ಮಾಡುವ ಕೆಲಸ" ಎಂದಿರುತ್ತಾರೆ.
ಪುತ್ತೂರು ಕರ್ನಾಟಕ ಸಂಘ ಕಾರಂತರ ಪುಸ್ತಕ ಒಂದನ್ನು ರಘುನಾಥ ರಾಯರ ಮುದ್ರಣಾಲಯದಲ್ಲೇ ಅಚ್ಚು ಮಾಡಿಸಿದಾಗ ಕಾರಂತರು ಮುದ್ರಣ ಮೆಚ್ಚಿ ಕಾರ್ಡು ಬರೆದೆರುತ್ತಾರೆ. ಅದು ತಮ್ಮ ಪಾಲಿನ ಅತಿ ದೊಡ್ಡ ಪ್ರಶಸ್ತಿ ಎಂದು ರಘುನಾಥ ರಾಯರು ನಂಬಿದ್ದಾರೆ.
ಅದು 1984. ಚೋಮನದುಡಿಯನ್ನು ನಾಟಕ ಮಾಡಲು ಮೋಹನ್ ಸೋನ ನಿರ್ಧರಿಸಿ ಸಾಕಷ್ಟು ಪೂರ್ವ ತಯಾರಿ ಮಾಡಿ ರಿಹರ್ಸಲ್ ಸಹ ಆರಂಭಿಸಿ ಅನುಮತಿಗಾಗಿ ಕಾರಂತರಿಗೆ ಪತ್ರ ಹಾಕುತ್ತಾರೆ. "ಇಲ್ಲ, ನನ್ನ ಅನುಮತಿ" ಎಂಬ ಕಾರ್ಡ್ ಮರು ಟಪಾಲಿನಲ್ಲೇ ಬರುತ್ತದೆ. ಕಂಗಾಲಾದ ತಂಡ ಕಾರಂತರನ್ನು ಕಾಣಲು ಸಾಲಿಗ್ರಾಮಕ್ಕೆ ಬರುತ್ತದೆ. "ನೋಡಿ ಬಿ.ವಿ.ಕಾರಂತರು ಮಾಡಿದರು, ಕೆ.ವಿ.ಸುಬ್ಬಣ್ಣ ಮಾಡಿದರು. ಮತ್ತೂ ಯಾರು ಯಾರೋ ಮಾಡಿದರು. ಒಂದೂ ತೃಪ್ತಿಕರವಾಗಲಿಲ್ಲ. ನೀವು ಬೇರೆ ಯಾರದ್ದಾದರೂ ನಾಟಕ ಮಾಡಿಕೊಳ್ಳಿ" ಎನ್ನುತ್ತಾರೆ. ಸಾಕಷ್ಟು ಸಿದ್ಧತೆ ಮಾಡಿದ್ದ ತಂಡ ನಿರಾಶರಾಗಿ ಪೆಚ್ಚು ಮೋರೆ ಮಾಡಿಕೊಂಡಾಗ "ಆಗಲಿ ನೀವೂ ಹುಗಿದು ಬಿಡಿ ಚೋಮನನ್ನ" ಎಂದು ಅಂತೂ ಸಮ್ಮತಿ ನೀಡುತ್ತಾರೆ.
ಆಮೇಲೆ ರಿಹರ್ಸಲ್ ನೋಡಿ ಬರಲು ಕೃತಿಯ ತುಳು ಭಾಷಾಂತರಕಾರ ಜತ್ತಪ್ಪ ರೈರವರಿಗೆ ಪತ್ರ ಬರೆಯುತ್ತಾರೆ. ರೈಯವರು ರಿಹರ್ಸಲ್ ನೋಡಿ ಮುಂದೆ ನಾಟಕವನ್ನೂ ನೋಡಿ ತುಂಬಾ ಸಂಭ್ರಮ ಪಡುತ್ತಾರೆ. ದೊಡ್ಡ ಬಯಲಿನಲ್ಲಿ ಗುಡಿಸಲು ಸೇರಿದಂತೆ ವಿವಿಧ ರಂಗ ಚಮತ್ಕಾರ ತುಂಬಿದ್ದ ನಾಟಕ ದಿವ್ಯವಾಗಿ ನಿಮಗೆ ತೃಪ್ತಿ ತರುವಂತೆ ನಡೆಯಿತು ಎಂಬ ಪತ್ರ ಕಾರಂತರಿಗೆ ರೈಯವರು ಬರೆಯುತ್ತಾರೆ. ಮೂರ್ತಿ ದೇರಾಜೆ ಇದನ್ನು ದಾಖಲಿಸುತ್ತಲೇ ಕಾರಂತರ ತಾಳಮದ್ದಲೆಯ ಸ್ವಾರಸ್ಯಕರ ಪ್ರಸಂಗ ಹೇಳಿದ್ದಾರೆ. "ತಾಳಮದ್ದಲೆ ಕೇಳುವುದಕ್ಕಿಂತ ಕೋರ್ಟಿನಲ್ಲಿ ವಕೀಲರ ವಾದ ಕೇಳುವುದು ಒಳ್ಳೆಯದು " ಎಂದವರು ಕಾರಂತರು. ಒಮ್ಮೆ ಅವರೇ ಮದ್ರಾಸಿನ ಆಕಾಶವಾಣಿಗೆ ತಾಳಮದ್ದಲೆಯ ಕಾರ್ಯಕ್ರಮ ನೀಡಲು ತಮ್ಮ ತಂಡ ಕರೆದೊಯ್ಯುತ್ತಾರೆ. ಆದರೆ ಇವರ ಬಳಿ ಇದ್ದ ದೊಡ್ಡ ಹಾರ್ಮೋನಿಯಂ ಪೆಟ್ಟಿಗೆ ಒಳಗೊಯ್ಯಲು ಸೆಕ್ಯುರಿಟಿ ಒಪ್ಪುವುದಿಲ್ಲ. "ನಿಮ್ಮ ಅಧಿಕಾರಿಯನ್ನು ಕರೆ" ಎಂದ ಕಾರಂತರು ಅಧಿಕಾರಿ ಕರೆಸಿದಾಗಲೂ ಅವರೂ ದೊಡ್ಡ ಪೆಟ್ಟಿಗೆ ಒಳಗೆ ತರಲಾಗದು ಎಂದೇ ಹೇಳುತ್ತಾರೆ. "ನಮ್ಮ ಪ್ರಯಾಣ ವೆಚ್ಚ ಮತ್ತು ಭತ್ಯೆ ಕೊಡಿ, ನಾವೆಲ್ಲಾ ಇಲ್ಲಿಂದಲೇ ನಿರ್ಗಮಿಸುತ್ತೇವೆ " ಎಂದು ಪಟ್ಟು ಹಿಡಿದ ಕಾರಂತರು ಪ್ರವೇಶ ಗಿಟ್ಟಿಸುತ್ತಾರೆ!. ಒಳಗೆ ನಿಂತೇ ರಿಕಾರ್ಡಿಂಗ್ ಮಾಡಲು ಹೇಳಿದಾಗಲೂ ಕಾರಂತರು ಪ್ರತಿಭಟಿಸುತ್ತಾರೆ. ಅನುಮತಿ ಗಿಟ್ಟಿಸುತ್ತಾರೆ. ಇಂತಹವರೊಬ್ಬರು ಜೊತೆಗಿದ್ದರೆ ಕಲಾವಿದರಿಗೆ ಗೌರವ ದೊರಕುತ್ತದೆ ಎಂಬ ದೇರಾಜೆ ಮಾತು ಸತ್ಯ.
ಚಿತ್ರಕಲಾ ಶಿಕ್ಷಕರ ರಾಜ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಗೋಪಾಡ್ಕರ್ ನೇತೃತ್ವದ ತಂಡ ಕಾರಂತರ ಭೇಟಿಗೆ ಸಾಲಿಗ್ರಾಮ ಮನೆಗೆ ಬರುತ್ತದೆ. ಕರೆಯುತ್ತಾ 600 ಶಿಕ್ಷಕರು ಸೇರುತ್ತಾರೆ ಎಂಬ ಮಾತು ಕಾರಂತರ ಕೋಪಕ್ಕೆ ಕಾರಣವಾಗುತ್ತದೆ. "ಅಲ್ಲಿ ಬಂದು ಸೃಜನಶೀಲತೆ ಕುರಿತು ಹೇಳಬೇಕಾ. ಧರ್ಮಸ್ಥಳದ ಊಟಕ್ಕೆ 25ಸಾವಿರ ಜನ ಸೇರುತ್ತಾರೆ. ಅಲ್ಲಿ ಭಾಷಣ ಮಾಡಿದರಾಗದೇ. ಶಿಕ್ಷಕರನ್ನು ಉದ್ದೇಶಿಸಿ ನಾನು ಏಕೆ ಮಾತನಾಡಬೇಕು. ಯಾರು ಬದಲಾದರೂ ಶಿಕ್ಷಕರು ಬದಲಾಗುವುದಿಲ್ಲ. ನಾನೂ 40ವರ್ಷದಿಂದ ಭಾಷಣ ಮಾಡಿ ನೋಡಿದ್ದೇನೆ. ಒಬ್ಬರನ್ನು ಬಿಟ್ಟು ಯಾರೂ ಬದಲಾಗಿಲ್ಲ" ಎನ್ನುತ್ತಾರೆ ಕಾರಂತರು. ಬಂದವರಿಗೆ ಕಾರಂತರಲ್ಲಿ ಸಾಲಿಗೆ ಇತ್ತಾಗಿ ಅದ್ಯಾರು ಬದಲಾದವರು ಎಂದು ಕೇಳುತ್ತಾರೆ. "ನಾನೇ ಬದಲಾದವ, ಶಿಕ್ಷಕರಿಗೆ ಭಾಷಣ ಮಾಡಿ ಪ್ರಯೋಜನವಿಲ್ಲ ಎಂದು ಕಂಡುಕೊಂಡು ಬದಲಾದವ ನಾನು, ಶಿಕ್ಷಕರು ಕಲಿಸುವವರು, ಕಲಿಯುವವರಲ್ಲ. ದುರಹಂಕಾರ ಅವರಿಗೆ ತಾವು ತಿದ್ದುವವರೆಂದು" ಎಂದು ಸೇರಿಸುತ್ತಾರೆ. ಬಾಯಿ ಬಿಡದೇ ತಣ್ಣಗಾಗಿದ್ದ ತಂಡ ನೋಡಿ ಆಯ್ತು ಬರಬೇಕಲ್ವಾ -ಅದೂ ಆಗಲಿ ಎಂಬ ಸಮ್ಮತಿ ನೀಡುತ್ತಾರೆ ಕಾರಂತರು.
ಕಾರಂತರ ಆತ್ಮೀಯ ಬಳಗದಲ್ಲಿದ್ದವರು ಡಾ.ವಿವೇಕ ರೈಯವರ ತಂದೆ. ಅವರಿಗೆ ಗಂಡುಮಗು ಹುಟ್ಟಿದಾಗ ಕಾರಂತರ ಬಳಿ ಅವನಿಗೊಂದು ಹೆಸರು ಸೂಚಿಸಲು ಕೋರುತ್ತಾರೆ. ಎತ್ತಿದ ಬಾಯಿಗೆ ಕಾರಂತರು ವಿವೇಕ ಅನ್ನುತ್ತಾರೆ. ಆಗ ವಿವೇಕಾನಂದ ತುಂಬಾ ಚಾಲ್ತಿಯ ಹೆಸರು. ವಿವೇಕಾನಂದ ಎಂದಾ ಎಂದು ರೈ ಪ್ರಶ್ನಿಸುತ್ತಾರೆ. "ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಬರುತ್ತದೆ. ವಿವೇಕ ಅಷ್ಟೆ ಸಾಕು" ಎಂಬ ಕಾರಂತರ ಮಾತಿನಂತೆ ರೈಗಳು ಮಗನ ನಾಮಕರಣ ಮಾಡುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಕಾರಂತರ ಪೀಠ ರಚನೆಯಾದಾಗ ವಿವೇಕ ರೈ ಅದನ್ನು ಮಾದರಿಯಾಗಿ ರೂಪಿಸುತ್ತಾರೆ. ಅವರಲ್ಲಿ ಅತೀವ ಪ್ರೀತಿ ಇಟ್ಟಿದ್ದ ಕಾರಂತರು ಕರೆದಾಗಲೆಲ್ಲಾ ವಿಶ್ವವಿದ್ಯಾಲಯದಲ್ಲಿ ಹೋಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಹೀಗೇ ಅನೇಕ ಅಪೂರ್ವ ಸಂಗತಿಗಳನ್ನು ನಾಡಿನ ಪ್ರಮುಖ ಸಾಹಿತಿಗಳು ಒಡನಾಡಿಗಳು ಬಿಚ್ಚಿಟ್ಟ ಕೃತಿ ಈ ಬಾಲವನದಲ್ಲಿ ಭಾರ್ಗವ.
ಸುಬ್ರಾಯ ಚೊಕ್ಕಾಡಿ, ಜಯಂತ್ ಕಾಯ್ಕಿಣಿ, ಮಾವಿನಕುಳಿ, ತೋಳ್ಪಾಡಿ, ವೈದೇಹಿ, ಬಿಳಿಮಲೆ, ಬೊಳುವಾರು ಮೊಹಮ್ಮದ್ ಕುಂಞಿ, ಚಿನ್ನಪ್ಪ ಗೌಡ, ಕಾರಂತರ ಮಕ್ಕಳು, ಅವರ ಜೊತೆ ಕೆಲಸ ನಿರ್ವಹಿಸಿದವರು, ಕಲಾವಿದರು, ಜನಪ್ರತಿನಿದಿಗಳು, ಅಧಿಕಾರಿಗಳು ಮುಂತಾದ ಮಹನೀಯರ ಬರಹಗಳಿಂದ 'ಬಾಲವನದಲ್ಲಿ ಭಾರ್ಗವ 'ಮಿಂಚಿನ ಪ್ರಕಾಶ ಮೂಡಿಸುತ್ತಿದೆ. ಸಂಪಾದಿಸಿದ ಡಾ.ಸುಂದರ ಕೇನಾಜೆಯವರ ಶ್ರಮ ಸಾರ್ಥಕ ಎನ್ನುವುದರಲ್ಲಿ ಎರಡು ಮಾತಿಲ್ಲ.
*ಪ್ರಭಾಕರ ಕಾರಂತ್*
ಹೊಸಕೊಪ್ಪ
577126.ಕೊಪ್ಪ ತಾಲ್ಲೂಕು.
Tuesday, June 28, 2022
Wednesday, June 22, 2022
Tuesday, June 21, 2022
Monday, June 20, 2022
Thursday, June 16, 2022
Wednesday, June 15, 2022
Monday, June 13, 2022
Sunday, June 12, 2022
Monday, June 6, 2022
ಎಸ್. ಜಿ. ಕುರ್ಯ ಉಡುಪಿ - ಪುಸ್ತಕ ಸಂಸ್ಕೃತಿಯ ಸಂತ ಕು. ಗೋ / H. GOPALA BHAT
vk udupi
20:00 (2 hours ago)
to me
ಪುಸ್ತಕ ಸಂಸ್ಕøತಿಯ ಸಂತ: ಕು. ಗೋ. 85ನೇ ನವ ವಸಂತ
...........
ತಾನು ಪುಸ್ತಕ ಅಚ್ಚು ಹಾಕಿ ಮಾರಿದ್ದಕ್ಕಿಂತಲೂ ಅನ್ಯ ಲೇಖಕರ, ಸಾಹಿತಿಗಳ ಸಾವಿರಾರು ಪುಸ್ತಕಗಳನ್ನು ಮಕ್ಕಳು, ಮಹಿಳೆಯರು ಸಹಿತ ಸಾಹಿತ್ಯ ಪ್ರೇಮಿಗಳಿಗೆ ಉಚಿತವಾಗಿ ಹಂಚಿದ, ಓದುವ ಹುಚ್ಚು/ಅಭಿರುಚಿ ಹಚ್ಚಿಸಿದ, ಹೆಚ್ಚಿಸಿದ ಕು. ಗೋ.(ಹೆರ್ಗ ಗೋಪಾಲ ಭಟ್ಟ)1938ರಲ್ಲಿ ಜನಿಸಿ, ಜೂ. 6ಕ್ಕೆ 84ಸಾರ್ಥಕ ವಸಂತ ಕಂಡು 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ.
...............................................
ಹೆರ್ಗದ ಮಾಣಿ, ಮೌನ ದಾನಿ, ಲಕ್ಷ್ಮಿಗಿಂತ ಸರಸ್ವತಿ ಪ್ರೇಮಿ!
*ಎಸ್. ಜಿ. ಕುರ್ಯ, ಉಡುಪಿ
ಆರಡಿಯ ದೇಹ ಒಂದಿಷ್ಟು ಬಾಗಿದೆ, ಮಾಗಿದೆ. ಸಾಹಿತ್ಯ ಪ್ರಪಂಚ ನೋಡಲು ಮೂಗಿನ ಮೇಲೆ ದಪ್ಪ ಕನ್ನಡಕವಿದೆ, ಅಷ್ಟಿಷ್ಟು ಉಳಿದ ಹಲ್ಲುಗಳಿರುವ ಬಾಯಲ್ಲಿ ನಿಷ್ಕಲ್ಮಶ ನಗುವಿದೆ, ಮಾತಿಗೆ ಕೂತರೆ/ ನಿಂತರೆ ದ್ವೇಷ ಮರೆತು ಪ್ರೀತಿ ಹಂಚುವ ಇವರ ಹೃದಯ ಸಾಮ್ರಾಜ್ಯದಲ್ಲಿ ವ್ಯಕ್ತ, ಅವ್ಯಕ್ತವಾಗಿ ಜಾಗ ಪಡೆದಿರುವವರ ಸಂಖ್ಯೆ ಅನಂತ....
ಇದು ನಮ್ಮ ಕು. ಗೋ.ಅರ್ಥಾತ್ ಹೆರ್ಗದ ಮಾಣಿ ಗೋಪಾಲ ಭಟ್ಟರ ಪ್ರವರ. ಬದುಕಿನ ಏಳುಬೀಳಿನ ನಡುವೆ ಸಾರ್ಥಕ 84ವಸಂತಗಳನ್ನು ಪೂರೈಸಿ 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ. ವಿಜಯ ಕರ್ನಾಟಕದೊಂದಿಗೆ ಬಾಲ್ಯದಿಂದ ಈವರೆಗಿನ ಆಗುಹೋಗುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಮುಕ್ತವಾಗಿ ಹಂಚಿಕೊಂಡಿದ್ದು ಹೀಗೆ.
ಕನಸಿಗೆ ಬಡತನ ಅಡ್ಡಿ: ಹೆರ್ಗದ ಸರಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ, ಮಣಿಪಾಲದ ಬಳಿಕ ಪಿರಿಯಾಪಟ್ಟಣದಲ್ಲಿ 7ರಿಂದ ಎಸ್ಸೆಸ್ಸೆಲ್ಸಿ ಓದಿನ ನಡುವೆ ಕನಸು ಕಾಣಲು ಬಡತನ ಅಡ್ಡಿಯಾಗಿತ್ತು. ಹುಣಸೂರಲ್ಲಿದ್ದ ಮಾವನ ಹೋಟೆಲಲ್ಲಿ ಕೆಲಸ ಮಾಡುತ್ತಾ ಶಾಲಾ ಓದಿನ ವೇಳೆ ಹೈಸ್ಕೂಲಲ್ಲಿದ್ದಾಗ ಅದು ಹೇಗೋ ಸಾಹಿತ್ಯ ಬೆಲ್ಲದ ರುಚಿ ಹತ್ತಿತು.
ಹೋಟೆಲ್ ಸಹವಾಸ: ಹೋಟೆಲಿಗೆ ಬಂದು ಹೋಗುವ ಗಿರಾಕಿಗಳ ಮಾತು, ಹಾವಭಾವವೆಲ್ಲವೂ ಹಾಸ್ಯ ಲೇಖನಕ್ಕೆ ವಸ್ತುವಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 37ನೇ ರ್ಯಾಂಕ್ ಪಡೆದಿದ್ದರೂ ಹೋಟೆಲ್ ಕೆಲಸವನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಬಯಕೆಗೆ ಮೇಸ್ಟ್ರು, ಡಾಕ್ಟ್ರೆಲ್ಲಾ ಬಂದು ಕಾಲೇಜಿಗೆ ನಡಿ ಕಂದಾ...ಎನ್ನುವ ಒತ್ತಾಯ ಮಾಡಿದರು.
ವಾರಕ್ಕೆ 4ಸಿನಿಮಾ: ಮೈಸೂರಿನ ಅಣ್ಣನ ಹೋಟೆಲಲ್ಲಿದ್ದು ಕಾಲೇಜಿಗೆ ಹೋಗತೊಡಗಿದೆ. ಇದ್ದಕ್ಕಿದ್ದಂತೆ ಒಂದು ದಿನ ಹೇಳದೆ ಕೇಳದೆ ಬೆಂಗಳೂರಿಗೆ ಕಾಲ್ಕಿತ್ತು 20ರೂ. ಸಂಬಳಕ್ಕೆ ಹೋಟೆಲೊಂದನ್ನು ಸೇರಿ ಎರಡು ತಿಂಗಳು ಕೆಲಸ ಮಾಡಿದೆ. ನನ್ನನ್ನು ಪತ್ತೆ ಹಚ್ಚಿದ ಅಣ್ಣ ಮೈಸೂರಿಗೆ ವಾಪಸ್ ಕರೆತಂದ, ವಾರಕ್ಕೆ ಮೂರ್ನಾಲ್ಕು ಸಿನಿಮಾ ನೋಡುವ ಹವ್ಯಾಸ ಚಟವಾಯಿತು.
ಕೈಹಿಡಿದ ಎಲ್ಲೈಸಿ: ಮೈಸೂರು ಯುವರಾಜ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಯಾಗಿದ್ದರೂ ಇಂಟರ್‍ಮೀಡಿಯೇಟ್‍ನಲ್ಲಿ ಎಡವಿ ಮೇಲೆದ್ದೆ. ಬಿಎಸ್ಸಿಯಲ್ಲಿ ಡುಮ್ಕಿ ಹೊಡೆದು ಊರಿಗೆ ಬಂದ ಬಳಿಕ ಎಸ್ಸೆಸ್ಸೆಲ್ಸಿ ಅಂಕದ ಆಧಾರದಲ್ಲಿ ಭಾರತೀಯ ಜೀವ ವಿಮಾ ನಿಗಮ(ಎಲ್ಲೈಸಿ)ವನ್ನು 130ರೂ. ಸಂಬಳಕ್ಕೆ ಸೇರಿದೆ.
ಮೊದಲ ಕೃತಿ ಹೆರಿಗೆ: ಚಿಕ್ಕಮಗಳೂರಿನಲ್ಲಿ ನಾಲ್ಕು ವರ್ಷವಿದ್ದೆ, ಸಾಹಿತ್ಯ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಂದೆ ನೀಡಿದ ಪೆÇ್ರೀತ್ಸಾಹದಿಂದ ನನ್ನ ಚೊಚ್ಚಲ ಕೃತಿ ಸವ್ಯಸಾಚಿಯ ಹೆರಿಗೆಯಾಯಿತು. ಎಲ್ಲಾ ಪತ್ರಿಕೆ, ವಾರಪತ್ರಿಕೆ, ಸಾಪ್ತಾಹಿಕ, ಪಾಕ್ಷಿಗಳಲ್ಲೂ ಕಥೆ, ಲೇಖನ, ಹಾಸ್ಯ ಬರಹ ಪ್ರಕಟವಾಗತೊಡಗಿತು, ಆಕಾಶವಾಣಿಯಲ್ಲೂ ಬಿತ್ತರವಾಯಿತು.
ಸ್ವಯಂ ನಿವೃತ್ತಿ: ಗುಮಾಸ್ತನಾಗಿ ಮಡಿಕೇರಿ, ಕುಂದಾಪುರ, ಉಡುಪಿಯಲ್ಲಿ ಸೇವೆ ಸಲ್ಲಿಸಿ ಆಡಳಿತಾಧಿಕಾರಿಯಾಗಿದ್ದ ವೇಳೆ ದಿನಕ್ಕೆ ಕೇವಲ 6.15ಗಂಟೆ ಕರ್ತವ್ಯ ಮಾಡಬೇಕಿದ್ದರೂ 10ರಿಂದ 12ಗಂಟೆ ಗ್ರಾಹಕರ ಸೇವೆಯಲ್ಲಿ ನಿರತನಾಗಿದ್ದೆ. ಪತ್ನಿಯ ವಿಯೋಗದಿಂದಾಗಿ ನಿವೃತ್ತಿಗೆ ಒಂದು ವರ್ಷ ಮೊದಲೇ ಆರ್ಥಿಕ ತೊಂದರೆಗೆ ಸಿಲುಕಿ ಸ್ವಯಂನಿವೃತ್ತಿ ಪಡೆದು ಮನೆ ಸೇರಿದೆ.
ಓದುಗರಿಗಾಗಿ ಪ್ರಕಟಣೆ: ಸಾಹಿತ್ಯ ಕೃತಿಗಳ ಓದು, ಪ್ರಕಟಣೆ, ವಿತರಣೆಯಲ್ಲಿ ತೊಡಗಿದೆ. ನಾನು ಬರೆದದ್ದು ಆರು ಕೃತಿ ಮುದ್ರಣ, ಮರುಮುದ್ರಣವಾಗಿದೆ. ನನ್ನ ಕೈಯಿಂದ ದುಡ್ಡು ಹಾಕಿ ನನ್ನ ಕೃತಿಗಳನ್ನು ಹಂಚಿದೆ, ಆದರೆ ತೃಪ್ತಿ ಸಿಗಲಿಲ್ಲ. 500 ಪುಸ್ತಕ ಉಳಿದಾಗ ಓದುಗರು ಬೇಕೆಂದು 2,000 ರೂ. ಖರ್ಚು ಮಾಡಿ ಪ್ರಕಟಣೆ ಕೊಟ್ಟಿದ್ದು ಆ ಕಾಲಕ್ಕೆ ಗಮನ ಸೆಳೆಯಿತು.
ಕಾಯಂ ಓದುಗರು: ಪುಸ್ತಕ ಸಂಸ್ಕøತಿ ಪಸರಿಸುವ ನೆಲೆಯಲ್ಲಿ ಅಜ್ಞಾತರೊಬ್ಬರು 11ಲಕ್ಷ ರೂ. ನೆರವು ನೀಡಿ ಕಂತಿನಲ್ಲಿ ಹಿಂತಿರುಗಿಸಿದರೂ ಬಾಕಿಗಾಗಿ ಮನೆಗೆ ಪೆÇೀಸ್ಟ್ ಕಾರ್ಡ್ ಬರೆವ ಚಳವಳಿಯನ್ನೇ ಆರಂಭಿಸಿದ್ದರು. 200ಮಂದಿ ಕಾಯಂ ಪುಸ್ತಕ ಪ್ರೇಮಿಗಳ ಮನೆಗೆ ತನ್ನ ಹಾಗೂ ಅನ್ಯರ ಹೊಸ ಪುಸ್ತಕ ಬಿಡುಗಡೆಯಾದ ಕೂಡಲೇ ಕಳುಹಿಸುತ್ತಾರೆ.
ತಪ್ಪಿದ ಪೆಟ್ಟು: ಕೃತಿ ದುಡ್ಡು ಕೊಡೋರು ಎಲ್ಲೋ ಕೆಲ ಮಂದಿ, ಉಳಿದವರು ಓದಿ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾರೆ. ನನ್ನ ಜೀವನಾನುಭವ, ಸಮಾಜದ ಜನರಿಂದ ಕೇಳಿದ್ದು, ನೋಡಿದ್ದೆಲ್ಲಾ ಕಥೆ, ಹಾಸ್ಯ ಲೇಖನವಾಗಿದೆ, ಪೆಟ್ಟು ಕೊಡಲು ಬಂದವರಿದ್ದಾರೆ. ನನ್ನನ್ನು ನೋಡಲೆಂದೇ ಬೆಂಗಳೂರಿನಿಂದ ಬಂದು ಪುಸ್ತಕದ ದುಡ್ಡು ಕೊಟ್ಟು ಹೋದ ಅಭಿಮಾನಿಗಳಿದ್ದಾರೆ.
ಬೆಲೆ ಕಟ್ಟಲಾಗದು: ಶಾಲಾ, ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ಹೋಗಿ ಪುಸ್ತಕ ಮಾರಿದ್ದು 10ಪರ್ಸೆಂಟಾದರೆ ಉಚಿತವಾಗಿ ನೀಡಿದ್ದು 90ಪರ್ಸೆಂಟಾದರೂ ಅದರಲ್ಲಿರುವ ಆತ್ಮ ತೃಪ್ತಿ, ಖುಷಿ, ಸಂತೋಷ, ನೆಮ್ಮದಿಗೆ ಬೆಲೆ ಕಟ್ಟಲಾಗದು. ಗಂಡು ಮಕ್ಕಳಿಗಿಂತಲೂ ವಿದ್ಯಾರ್ಥಿನಿಯರು, ಹೆಣ್ಮಕ್ಕಳು ಹೆಚ್ಚಿನ ಪುಸ್ತಕ ಪ್ರೇಮಿಗಳಾಗಿದ್ದಾರೆ, ನನ್ನ ಮೇಲೂ ಅಭಿಮಾನ ಹೊಂದಿದ್ದಾರೆ.
ಪುಸ್ತಕ ಹಂಚಿಕೆ: ಓದಿ ನನಗೆ ಇಷ್ಟವಾದ ಪುಸ್ತಕವನ್ನು ಹಂಚುತ್ತೇನೆಯೇ ಹೊರತು ಅನ್ಯರ ಓದಿನ ಸ್ವಾತಂತ್ರ್ಯದ ಹರಣ ಮಾಡೋದಿಲ್ಲ. ಹಾಸ್ಯ ಭಾಷಣವನ್ನೂ ಹತ್ತಾರು ಕಡೆ ಮಾಡಿದ್ದೇನೆ, ರೇಡಿಯೋ ಭಾಷಣ ಕೇಳಿದ ನೂರಾರು ಮಂದಿ ಅಭಿಮಾನಿಗಳಿದ್ದಾರೆ. ಪರಿಚಿತರ 83ಕೃತಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದೇನೆ.
ಪುಸ್ತಕಕ್ಕಾಗಿ ಪತ್ರ: ಕೆಲ ಮಕ್ಕಳಂತೂ ಇಂತಹ ಪುಸ್ತಕ ಬೇಕೆಂದು ಪತ್ರ ಬರೆದು ನನ್ನಿಂದ ಧರ್ಮಕ್ಕೆ ತರಿಸಿಕೊಳ್ಳುತ್ತಾರೆ(ಹಣಕ್ಕಿಂತ ಅವರು ಓದುತ್ತಾರೆನ್ನೋದೇ ಮುಖ್ಯ) ಉಗ್ರಾಣ, ಅಸಾಮಾನ್ಯ ಕನ್ನಡಿಗ, ಗೊರೂರು, ಶಿವರಾಮ ಕಾರಂತ ಸಹಿತ 50ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಶ್ರೀರಾಮ ವಿಠಲ ಸಹಿತ ಅನ್ಯ ಗೌರವಗಳಿಗೂ ಪಾತ್ರನಾಗಿದ್ದೇನೆ.
ಸದ್ದಿಲ್ಲದ ದಾನಿ: ನನ್ನ ಸಾಲವನ್ನೆಲ್ಲಾ ಮಕ್ಕಳೇ ತೀರಿಸಿದ್ದಾರೆ. ಪಿಂಚಣಿ ಮನೆ ಖರ್ಚಿಗೆ, ಪುಸ್ತಕ ಹಂಚಿಕೆಗೆ ಬಳಕೆಯಾಗುತ್ತಿದೆ. ಬಜಗೋಳಿಯ ಬಡಕುಟುಂಬವೊಂದರ ಕಷ್ಟಕ್ಕೆ ಸದ್ದಿಲ್ಲದೆ ಒಂದು ಲಕ್ಷ ರೂ. ಸಾಲ ಮಾಡಿ ನೆರವು ಒದಗಿಸಿದ್ದು ಕಂತಿನಲ್ಲಿ ತೀರಿಸುತ್ತಿದ್ದೇನೆ. ಬಾಗಲೋಡಿ ದೇವರಾಯರು, ಶಾಂತಾರಾಮ ಸೋಮಯಾಜಿ, ಗೊರೂರು ನನ್ನಿಷ್ಟದ ಸಾಹಿತಿಗಳಾಗಿದ್ದಾರೆ.
ಸುಹಾಸಂ 25: ಸಮಾನ ಮನಸ್ಕರ ಜತೆ ಸೇರಿ ಸ್ಥಾಪಿಸಿದ ಸುಹಾಸಂ(ಸುಹಾಸ ಹಾಸ್ಯ ಪ್ರಿಯರ ಸಂಘ) ಬೆಳ್ಳಿ ಹಬ್ಬ ಕಂಡಿದೆ. 10ರಿಂದ 15ಕ್ಕೆ ಸೀಮಿತವಾಗಿದ್ದ ಸುಹಾಸಂ ಕಾರ್ಯಕ್ರಮಕ್ಕೆ ಕಿದಿಯೂರು ಹೋಟೆಲ್ ನೆಲೆಯಾಗಿದೆ. 25ವರ್ಷದಿಂದ ತಿಂಡಿ ಖರ್ಚು ಹೊರತು ಬಾಡಿಗೆಯಿಲ್ಲದೆ ಸಾಹಿತ್ಯ ಸೇವೆಗೆ ನೀಡುತ್ತಿರುವ ಸಹಕಾರವಂತೂ ಸ್ಮರಣೀಯ. ಸುಹಾಸಂ ಮೂಲಕ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತಿಗಳನ್ನು ಕರೆಸಿ ಉಪನ್ಯಾಸ, ಪುಸ್ತಕ ಬಿಡುಗಡೆ ಮಾಡಲಾಗಿದೆ.
ದ್ವೇಷ ಬಿಟ್ಟು ಪ್ರೀತಿಸಿ: ದೇವರು ಪ್ರತ್ಯಕ್ಷರಾದರೆ ಬದುಕಿನ ನೋವೆಲ್ಲಾ ಮಾಯ ಮಾಡು ಎನ್ನುವುದೇ ಮೊದಲ ಬೇಡಿಕೆ. ನನಗೆ ಕೋಪ ಬರೋದು ಕಡಿಮೆ, ಬಂದರೂ ನಾನಾ ಸಮಾಧಾನ ಮಾಡಿಕೊಳ್ತೇನೆ(ಕೋಪ ಮಾಡಿ ಪ್ರಯೋಜನವಿಲ್ಲ!), ಯಾರನ್ನೂ ದ್ವೇಷಿಸಬಾರದು, ಎಲ್ಲರನ್ನೂ ಪ್ರೀತಿಸಬೇಕೆನ್ನುವುದು ನನ್ನ ಬದುಕಿನ ತತ್ವ, ಸಿದ್ಧಾಂತವಾಗಿದೆ. ನೂರಾರು ಜನರ ಸ್ನೇಹ, ಅನ್ಯರಿಗೆ ಸಹಾಯ ಮಾಡುವುದರಿಂದ ನಮ್ಮ ಬದುಕಿನ ಉದ್ಧಾರ ಸಾಧ್ಯ.
ಸೃಷ್ಟಿ ಆಸ್ವಾದಿಸಿ: ಮಕ್ಕಳು, ವಿದ್ಯಾರ್ಥಿಗಳು, ಯುವಜನತೆ ಉತ್ತಮ ಯೋಚನೆ, ಯೋಜನೆಗಳಲ್ಲಿ ನಿರತರಾಗಬೇಕೇ ಹೊರತು ಕೆಟ್ಟ ಚಿಂತನೆ ಸಲ್ಲದು. ತೃಪ್ತಿ ಸಿಗುವ ಕೆಲಸ ಮಾಡಿ, ನಿಮ್ಮದೇ ಇಸಂ ಇರಲಿ, ಸೋಮಾರಿಗಳಾಗಬೇಡಿ, ಪ್ರಗತಿಪ್ರಿಯರಾಗಿ. ಗಿಡ, ಮರ, ಪ್ರಕೃತಿ ಸಹಿತ ಸೃಷ್ಟಿಯ ಸೌಂದರ್ಯ ಆಸ್ವಾದಿಸಿ, ಬೇಸರವಾದರೆ ಆಕಾ, ಪಶು, ಪಕ್ಷಿಯನ್ನಾದರೂ ನೋಡಿ.
ಕಷ್ಟಗಳಿಗೆ ಸ್ಪಂದಿಸಿ: ಜನರು ಸ್ವಾರ್ಥ ತೊರೆದು ಅನ್ಯರ ಕಷ್ಟಗಳಿಗೆ ಸ್ಪಂದಿಸುವುದೇ ಮಾನವೀಯ ಬದುಕಿನ ಗುಟ್ಟು. ಸಾಹಿತ್ಯ ಓದಬೇಕು, ಬದುಕಿನಲ್ಲಿ ಕೈ ಬಾಯಿ ಸ್ವಚ್ಛವಾಗಿಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಸರ್ವತೋಮುಖ ಸಂತೋಷ, ಶಾಂತಿ, ನೆಮ್ಮದಿ ಕೊಡುವ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು.
...................................
ಸಾಹಿತ್ಯ ಸರಸ್ವತಿಯ ವಿಶಿಷ್ಟ ಪರಿಚಾರಕ
ಕು. ಗೋ.
ಚಲಿಸುವ ಪುಸ್ತಕ ಸಂಸ್ಕøತಿಯ ಪರಿವ್ರಾಜಕ
ನಾನೊಬ್ಬ ಸಾಹಿತಿಯೆನ್ನುವ ಯಾವುದೇ ಹಮ್ಮಿಲ್ಲ, ಬಿಮ್ಮಿಲ್ಲ, ಕೊಂಬಿಲ್ಲ, ಕೋಳಿ ಜಂಬವೂ ಇಲ್ಲದ ಕು. ಗೋ. ಪುಸ್ತಕಗಳನ್ನು ಕೊಂಡು ಓದಬಲ್ಲವರಿಗೆ ಒಳ್ಳೆಯ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಮನೆಬಾಗಿಲಿಗೆ ಮಾರಿದ್ದಾರೆ.
ಪುಸ್ತಕಗಳನ್ನು ಕೊಳ್ಳಲಾಗದವರಿಗೆ, ಓದುವ ಅಭಿರುಚಿ ಉಳ್ಳವರಿಗೆ ಉಚಿತವಾಗಿ ಪುಸ್ತಕಗಳನ್ನು ಕೊಟ್ಟು ಓದಿ ನೋಡಿ ಎಂದಿದ್ದಾರೆ, ಬೇಕೆಂದರೆ ಮತ್ತಷ್ಟು ಪುಸ್ತಕಗಳ ದಾನ ಮಾಡಿದ್ದಾರೆ.
ಹೀಗೆ ಪುಸ್ತಕ ಹಂಚಿ, ಮಾರಿ, ಕು. ಗೋ. ಎಷ್ಟೊಂದು ಸಂಪಾದಿಸಿರಬಹುದಪ್ಪಾ ಎಂದು ಲೆಕ್ಕ ಹಾಕಿದರೆ ಅದು ಜನರ ಪ್ರೀತಿ, ವಿಶ್ವಾಸದ ಅಪಾರ ಸಂಪತ್ತಿನ ಹೊರತು ಬೇರೇನೂ ಇಲ್ಲ. ಸಾಹಿತಿಗಳು ಅನ್ಯರ ಪುಸ್ತಕಗಳ ಕುರಿತು ನಾಲ್ಕು ಒಳ್ಳೆಯ ಮಾತನ್ನಾಡೋದು ಬಲು ಕಡಿಮೆ, ಆದರೆ ಕು. ಗೋ. ಮಾತ್ರ ಇದಕ್ಕೆ ಅಪವಾದ.
ತಾನು ಬರೆದದ್ದೇ ಮನೆಯಲ್ಲಿ ಓದುವವರಿಲ್ಲದೆ, ಮಾರಾಟವಾಗದೆ ರಾಶಿ ಬಿದ್ದಿರುವಾಗ ಅನ್ಯರ ಪುಸ್ತಕಗಳ ಪ್ರಕಟಣೆಗೆ ಮುಂದಾಗುವ ಮಾತೆಲ್ಲಿದೆ? ಪುಸ್ತಕ ಮಾರುವವರು ಒಳ್ಳೆಯ ಪುಸ್ತಕಗಳನ್ನು ಒಳ್ಳೆಯ ಓದುಗರಿಗೆ ಪುಕ್ಕಟೆಯಾಗಗಿ ಹಂಚುವುದಂತೂ ಈ ಕಲಿಯುಗದಲ್ಲಿ ವಿರಳಾತಿವಿರಳ.
ಆದರೆ ಕು. ಗೋ. ಒಳ್ಳೆಯ ಪುಸ್ತಕಗಳ ಬಗ್ಗೆ ಒಳ್ಳೆಯ ಮಾತು ಮಾತ್ರವಲ್ಲ ನಾಲ್ಕು ಜನರಿಂದ ಲೇಖಕರಿಗೆ ಶಹಭಾಸ್‍ಗಿರಿ ದೊರೆವಂತೆ ಮಾಡುವ ರಾಯಭಾರಿಯೂ ಆಗಿದ್ದಾರೆ. ತನ್ನ ಮನದಲ್ಲುಳಿದವರ ಬರಹ ಪತ್ರಿಕೆಗಳಲ್ಲಿ ಬಂದರೆ ತಪ್ಪದೇ ದೂರವಾಣಿ ಕರೆ ಮಾಡಿ ಇಂದಿಗೂ ಲಲ್ಲೆಗರೆವ ಕು.ಗೋ. ಇಂದ್ರಾಳಿ ಹಯಗ್ರೀವ ನಗರದ ವಾಗ್ದೇವಿ ನಿವಾಸಿ.
ಮನೆ ಮನೆಯಲ್ಲಿ ಸಾಹಿತ್ಯ ಚಟುವಟಿಕೆಯ ನಡುಮನೆಗೂ ಪ್ರೇರಕ ಶಕ್ತಿಯಾಗಿದ್ದ ಕು. ಗೋ. ಸಹೃದಯೀ ಓದುಗರ ಪರಂಪರೆ ಸೃಷ್ಟಿಯಲ್ಲಿ ನೀಡಿದ ಕೊಡುಗೆ ಅನನ್ಯ.ಜೂ. 5ರಂದು ಕಿದಿಯೂರು ಹೋಟೆಲಿನ ಶೇಷಶಯನ ಸಭಾಂಗಣದಲ್ಲಿ ನಡೆಯುವ 84ನೇ ವಸಂತ ಸಂಭ್ರಮದಲ್ಲಿ ಹಾಸ್ಯ ಬರಹಗಾರ ಶ್ರೀನಿವಾಸ ವೈದ್ಯರ ಕೃತಿ ಹಂಚಲಿದ್ದಾರೆ.
.......................
ಪುಸ್ತಕಕ್ಕೆ ಸಂಬಂಧಿಸಿ ಮಸ್ತಕದಲ್ಲಿಡಬೇಕಾದ ವಿಚಾರ...
*ಪಡೆದ ಪುಸ್ತಕವನ್ನು ಗೌರವ ಪ್ರತಿಯೆಂದು ಭ್ರಮಿಸಿ ಲೇಖಕರಿಗೆ, ಪ್ರಕಾಶಕರಿಗೆ ದುಡ್ಡು ಕೊಡದಿರುವುದು.
*ಧರ್ಮಕ್ಕೆ ಪುಸ್ತಕ ಕೊಟ್ಟರೂ ಅದನ್ನು ಓದದಿರುವುದು.
*ಪುಸ್ತಕ ಕೊಟ್ಟವರಿಗೆ ನಾಲ್ಕು ಸಾಲು ಹೊಗಳಿಯೋ ಬೈದೋ ಪತ್ರ/ಕಾರ್ಡು ಬರೆಯದಿರುವುದು
*ಪುಸ್ತಕ ಬರೆಯುವವರ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುವುದು
ದೋಷ ಪರಿಹಾರಕ್ಕಾಗಿ ನೀವೇನು ಮಾಡಬೇಕು?
*ಯಾರದರೂ ಪುಸ್ತಕ ಒಟ್ಟರೆ ಸುಮ್ಮನೆ ತೆಗೆದುಕೊಂಡು ಚೀಲಕ್ಕೆ ಸೇರಿಸದೆ(ಸೇರಿಸಿದರೂ!) ಎಷ್ಟು ಹಣ ಕೊಡಬೇಕೆಂದು ಕೇಳಿ ಪುಸ್ತಕದ ಮೌಲ್ಯ ಸಂದಾಯ ಮಾಡಬೇಕು.
*ಬೀಡಿ, ಸಿಗರೇಟು, ಚಾ, ಕಾಫಿ, ನಾಟಕ, ಸಿನಿಮಾ ಅಂತ ಖರ್ಚು ಮಾಡುವಂತೆ ಈ ಜನ್ಮದಲ್ಲಿ ಒಂದೆರಡಾದರೂ ಪುಸ್ತಕ ಹಣ ಕೊಟ್ಟು ಖರೀದಿಸುವುದು
*ಸಾಹಿತ್ಯ ಸಮ್ಮೇಳನ, ಸಭೆ, ಸಮಾರಂಭ, ಕವಿಗೋಷ್ಠಿ, ಹಾಸ್ಯ ಗೋಷ್ಠಿಗಳಿದ್ದರೆ ತಪ್ಪದೇ ಹೋಗಬೇಕು, ಮಕ್ಕಳನ್ನೂ ಕರೆದೊಯ್ದು ಸರಸ್ವತಿ ಸೇವೆಗೆ ಪೆÇ್ರೀತ್ಸಾಹಿಸಬೇಕು.
*ಪುಸ್ತಕ ಪ್ರೀತಿ ಬೆಳೆಸಿಕೊಂಡರೆ, ಸಂತೋಷ, ನೆಮ್ಮದಿ, ಆತ್ಮತೃಪ್ತಿ ನಮ್ಮದಾಗುತ್ತದೆ.
............................
*50,000 ಪುಸ್ತಕ ವಿತರಣೆ
ಲೇಖಕರು, ಓದುಗರು, ಪ್ರಕಾಶಕರ ಮಧ್ಯೆ ಕೊಂಡಿಯಾದ ಕು. ಗೋ.(ಹೆರ್ಗ ಗೋಪಾಲ ಭಟ್ಟ) ಯಾವುದೇ ಅಸೂಯೆಯಿಲ್ಲದೆ 50,000 ಪುಸ್ತಕ ವಿತರಿಸಿದ್ದಾರೆ!
*ಲೇಖಕರಿಗಿಂತ ಹೆಚ್ಚು ಸಂತೃಪ್ತಿ
15ಲಕ್ಷ ರೂ. ಮೌಲ್ಯದ 300ರಿಂದ 400 ಲೇಖಕರ(5-6 ಮಂದಿಯದ್ದು ಹೆಚ್ಚು ವಿತರಣೆ) ಪುಸ್ತಕಗಳನ್ನು ಆಸಕ್ತ ಓದುಗರ ಕೈಗೆ ನೀಡಿದ್ದಾರೆ.
*ಕನ್ನಡ ಪಂಡಿತರ ಪ್ರೇರಣೆ
ಮಾಧ್ಯಮಿಕ-ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರ ಕನ್ನಡ ಪಾಠದ ಕಂಪು, ಇಂಪು ಕು. ಗೋ. ಸಾಹಿತ್ಯಾಸಕ್ತಿಗೆ ಕಾರಣ. ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರ ಮುಗುಳು ಕೃಷಿಯಿಂದ ನವಚೇತನ ಪಡೆದಿದ್ದಾರೆ.
*ಅಂತರ್ಜಾಲ ಸಾಹಿತಿಗಳ ಸೃಷ್ಟಿ
ಸಾಹಿತ್ಯ ಓದಿನಿಂದ ಮಾಹಿತಿ ಗಳಿಕೆ, ಮನರಂಜನೆ, ಟೈಂಪಾಸ್ ಸಾಧ್ಯ. ಈಗ ಅಂತರ್ಜಾಲ, ವಾಟ್ಸ್ಯಾಪ್ ಸಾಹಿತಿಗಳ ಸೃಷ್ಟಿಯಾಗಿದೆ. ಗುಂಪುಗಾರಿಕೆಯಿಂದಾಗಿ ಕೆಲವರು ವಿಜೃಂಭಿಸುತ್ತಿದ್ದಾರೆ.
*ಸಾಹಿತ್ಯ ಓದು ಮುಖ್ಯ
ಹಳೆ ತಲೆಮಾರಿನ ಪುಸ್ತಕಗಳನ್ನು ಈಗಿನ ಲೇಖಕರು, ಓದುಗರು ಓದಲೇಬೇಕು. ಕನ್ನಡ ಸಾಹಿತ್ಯದ ಬಗ್ಗೆ ಯಾವುದೇ ನಿರಾಸೆ ಬೇಡ.
*ಜವಾಬ್ದಾರಿ ಮರೆಯದಿರಿ
ಕನ್ನಡಿಗರು ಹಾಗೂ ಸರಕಾರ ಕನ್ನಡತನದಿಂದ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಬೇಕು, ಇದು ನಮ್ಮೆಲ್ಲರ ಜವಾಬ್ದಾರಿ.
*ಕು. ಗೋ. ಹೆಸರ ಹಿಂದೆ...
ಕಾಲೇಜು ದಿನಗಳಲ್ಲಿ ಕುಸುಮಾ ಎಂಬ ಬೆಳದಿಂಗಳ ಬಾಲೆಯನ್ನು ಆಕೆಗೆ ಗೊತ್ತಿಲ್ಲದಂತೆ (ಒನ್ ವೇ ಲವ್) ಮನಸಾ ಪ್ರೀತಿಸುತ್ತಿದ್ದೆ. ಆಕೆಯ ಹೆತ್ತವರು ನನ್ನನ್ನು ಇಷ್ಟಪಟ್ಟು ಮದುವೆ ಪ್ರಸ್ತಾಪದೊಂದಿಗೆ ಬಂದರೂ ಸಗೋತ್ರದಿಂದಾಗಿ ಮದುವೆಯಾಗಲಿಲ್ಲ.
ಅದೃಶ್ಯವಾಗಿ, ಅವ್ಯಕ್ತವಾಗಿ ಸಾಹಿತ್ಯ-ಬದುಕಿಗೆ ಕುಸುಮಾ ಇಂದೂ ಪ್ರೇರಣೆಯಾಗಿದ್ದಾಳೆ. ಮೈಸೂರಿನಲ್ಲಿದ್ದ ಅಣ್ಣನ ಹೋಟೆಲಿಗೆ ಬರುತ್ತಿದ್ದ ಕುಸುಮನಿಗೆ ಎರಡು ಇಡ್ಲಿ ಕೇಳಿದರೆ ನಾಲ್ಕಿಡ್ಲಿ ಕಟ್ಟಿಕೊಡುತ್ತಿದ್ದರು. ಕುಸುಮಾ ಹೆಸರಲ್ಲಿ ಸಾಹಿತ್ಯ ರಚಿಸುತ್ತಿದ್ದೆ. ದಾಂಪತ್ಯದ ಗಂಟು ಬೀಳದಿದ್ದರೂ ಆಕೆಯ ಹೆಸರಿನ ಒಂದಕ್ಷರವನ್ನು(ಕು) ನನ್ನ ಹೆಸರಿಗೆ ಗಂಟು ಹಾಕಿಕೊಂಡು ಕುಖ್ಯಾತನಾಗಿದ್ದೇನೆ(ಕು. ಗೋ.)
..........................
*ಮಗ, ಮಗಳು: ದೊಡ್ಡ ಮಗ ಆತ್ಮಭೂತಿ ವಿಪೆÇ್ರೀ ಸಂಸ್ಥೆಯ ಉದ್ಯೋಗಿ, ವಿಷ್ಣುಮೂರ್ತಿ ಗೋ ಸಾಕಣೆಯಲ್ಲಿ ನಿರತ, ಮಗಳು ಆಶಾ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲಿನಲ್ಲಿ ಶಿಕ್ಷಕಿ.
*ಅಸಹ್ಯ ನೋವು: ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಕು. ಗೋ. ಇಳಿ ವಯಸ್ಸಿನಲ್ಲಿ ಸರ್ಪ ಸುತ್ತಿನ ನೋವು ಅನುಭವಿಸಿದರೂ ಜನರ ಪ್ರೀತಿ ವಿಶ್ವಾಸದಿಂದ ವಾಕಿಂಗ್ ಸ್ಟಿಕ್ ಹಿಡಿದು ನಡೆವಷ್ಟು ಸುಧಾರಿಸಿದ್ದಾರೆ.
........................
--
Labels:
ಕು. ಗೋ
Location:
Udupi, Karnataka, India
Friday, June 3, 2022
Subscribe to:
Posts (Atom)