Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Wednesday, September 30, 2020
ಎಲ್. ಸಿ . ಸುಮಿತ್ರಾ - ಎಮ್. ಆರ್ . ಕಮಲಾ ಅವರ " ಗದ್ಯ ಗಂಧಿ " { ಕವನ ಸಂಕಲನ 2020 }
ಜೀವನದ ಪ್ರತಿಕ್ಷಣವೂ ಸಂಭ್ರಮ ಪಡುವಂತಿರಬೇಕು..ಆದರೆ ಸಧ್ಯದ ಈ ಸಾಂಕ್ರಾಮಿಕ ಉಸಿರುಕಟ್ಟಿಸುವಂತಿದೆ..ನಮ್ಮೊಳಗೆ ಇರುವ ನೆನಪಿನ ಲೋಕದ ಮೂಲಕ ಸಧ್ಯದ ಕಷ್ಟ ಕಾಲವನ್ನು ದಾಟುವ ಒಂದು ಬಗೆಯೇ ಎಂ ಆರ್ ಕಮಲಾ ಅವರ ಗಧ್ಯಗಂಧಿ ಕವಿತೆ ಗಳು.
ನೆನಪಿನ ಖಜಾನೆಯಿಂದ ಆಯ್ದ ಈ ಹನಿಗಳು ವರ್ತಮಾನ ದ ಬದುಕನ್ನು ಸಹ್ಯವಾಗಿಸುತ್ತವೆ. ಸಂದು ಹೋದ ಕಾಲದ ಜೀವಂತಿಕೆಯನ್ನು ವರ್ತಮಾನ ಕ್ಕೆ ಎಳೆದುತರುವಲ್ಲಿ ಕಮಲಾ ಯಶಸ್ವಿ ಯಾಗಿದ್ದಾರೆ.
ಇದ್ದಕ್ಕಿದ್ದಂತೆ ನೆನಪಿನ ಲೋಕದಿಂದ ಮನೆಯೊಳಗೆ ಬರುವ ತೆಂಗಿನ ಗರಿ, ಕವಿಯ ಕಲ್ಪನೆ ಯಲ್ಲಿ ಹಕ್ಕಿಗಳಾಗಿ ಕೊನೆಗೆ ಪೊರಕೆಯಾಗಿ ಕನಸಿನ ಹಿಡಿಕೆಯಲ್ಲಿ ಬಂಧಿಯಾಗುತ್ತದೆ. ಇಲ್ಲಿ" ಬಾಲ್ಯದ ಓಣಿಯಲ್ಲಿ ಕುಳಿತು ಮಣ್ಣು ಕೆರೆದು ಬಳೆ ಚೂರುಗಳನ್ನು ಆರಿಸಿ ಲಂಗಕ್ಕೆ ತುಂಬಿಕೊಳ್ಳಬಹುದು." ಬೀದಿಗೆ ಮುಖಮಾಡಿಟ್ಟ ಕನ್ನಡಿಯಲ್ಲಿ ಹಾದು ಹೋಗುವ ಪ್ರತಿ ಜೀವಿಯ ನೋವು ನಲಿವು ನಮ್ಮ ಎದೆಯಲ್ಲಿ ಪ್ರತಿಫಲಿಸುತ್ತದೆ. ಕಡಿಮೆ ಬೆಳಕಿನ ಹಳ್ಳಿಯ ಮನೆಯಿಂದ ಝಗಮಗಿಸುವ ಬೆಳಕಿನ ಕಡೆ ಹೋದವರು "ತಡೆಯಲಾರದಷ್ಟು ಬೆಳಕು ಕಣ್ಣು ಕುಕ್ಕಿದಾಗ ವಾತಾವರಣ ಕ್ಕೆ ಉಸಿರುಗಟ್ಟಿ ಎಲ್ಲರೂ ಮನೆಗೆ ಮರಳುತ್ತಿದ್ದಾರೆ". ಬದುಕಿನ 'ಛಂದವೇ' ಬದಲಾಗಿದೆ. "ಇಡೀ ಬದುಕು ಸಿಕ್ಕು ಬಿಡಿಸುವುದೇ ಹೆಣ್ಣುಮಕ್ಕಳ ಕೆಲಸ " ಎಂಬ ಸತ್ಯ ದರ್ಶನವಾಗಿತ್ತದೆ.
ಮನದೊಳಗಿನ ಲೋಕದಲ್ಲಿ ತಂದೆಯ ಪತ್ರಗಳು ಬರುತ್ತಲೇ ಇರುತ್ತವೆ. ಫಲ್ಗುಣಿ ಕರು ಹಾಕಿದ್ದು, ಊರಿಗೆ ನಲ್ಲಿ ಬಂದಿದ್ದು, ತೋಟ ಕ್ಕೆ ಮಣ್ಣು ಹಾಕಿದ್ದು...ನನಗೆ ನನ್ನದೇ ನೆನಪುಗಳನ್ನು ಹೊಳೆಯಿಸಿತು.ನನಗೆ ಫಸ್ಟ್ ಪಿ ಯು ನಲ್ಲಿ ಕರಾವಳಿಯ ಒಂದು ಹಾಸ್ಟೆಲ್ ನಲ್ಲಿ ದ್ದಾಗ ಮತ್ತೆ ಮೈಸೂರಿನ ಲ್ಲಿ ಓದುತ್ತಿದ್ದಾಗ ತಮ್ಮ ಬರೆಯುತ್ತಿದ್ದ ಕಾಗದದ ಸಾಲುಗಳು ನೆನಪಾದವು. " ಅರಿಸಿನ ದಾಸವಾಳ ತುಂಬಾ ಹೂ ಬಿಡುತ್ತಿದೆ, ಜೂಲುನಾಯಿ ಮರಿ ಹಾಕಿದೆ ಎರಡು ಬಿಳಿ ಒಂದು ಕಪ್ಪು, ...ಊರಿನ ....ಮನೆ ಬಿಟ್ಟು ಓಡಿ ಹೋಗಿ ದ್ದಾನೆ .ಅಲ್ಲೇನಾದರೂ ಕಂಡರೆ ಹೇಳು.." ಮತ್ತೆ ಆ ಕಾಲಕ್ಕೆ ಹೋದೆ. ವರ್ತಮಾನ ಕ್ಕೆಬಂದರೆ ಇಸ್ತ್ರಿ ಮಾಡುವ ಮುದುಕನ ಗಾಡಿ ಪ್ಲಾಸ್ಟಿಕ್ ಹೊಂದಿಸಿಕೊಂಡು ರಸ್ತೆಯ ಪಕ್ಕ ನಿಂತಿದೆ..ಅವನ ಸುಳಿವಿಲ್ಲ.
ದೈನಂದಿನ ಚಿಕ್ಕ ಪುಟ್ಟ ಸಂತೋಷ ಗಳಿಂದ ಬದುಕಿನ ದೊಡ್ಡ ಕಷ್ಟ ಗಳನ್ನು ಸಹಿಸಿಕೊಳ್ಳುವ ಒಂದು ಮನಸ್ಸು ಈ ಗದ್ಯಗಂಧೀ ಕವಿತೆಗಳಲ್ಲಿದೆ...ಲಂಗದ ಜೇಬಿಗೆ ಆಟಕ್ಕಾಗಿ ಕಲ್ಲು ತುಂಬಿಕೊಳ್ಳುವ ಆ ಪುಟ್ಟ ಹುಡುಗಿ ನನಗೆ ಕುವೆಂಪು ಅವರ
" ಚೇತನ ಮೂರ್ತಿ ಯು ಆ ಕಲ್ಲು;
ತೆಗೆ ಜಡವೆಂಬುದು ಬರೀ ಸುಳ್ಳು " ಎಂಬ ಸಾಲುಗಳನ್ನು ನೆನಪಿಸಿತು.. ಇದೊಂದು ಹೊಸಬಗೆಯ ಬರೆಹ. ಇದರಲ್ಲಿ ನೀವು ಯಶಸ್ವಿಯಾಗಿದೀರಿ. ಅಭಿನಂದನೆಗಳು ಕಮಲಾ ಇಷ್ಟು ಚೆಂದ ದ ಪುಸ್ತಕ ಕಳಿಸಿದ್ದಕ್ಕೆ.Metikurke Ramaswamy Kamala
Thank you
Sumithra Lc
98You, Sumithra Lc, Sukanya Kalasa and 95 others
14 Comments
Like
Comment
Share
Comments
Tuesday, September 29, 2020
Sunday, September 27, 2020
ವಿಮರ್ಶಕ ಡಾ. ಜಿ.ಎಸ್. ಆಮೂರ ನಿಧನ 28- -9 -2020 -G. S. AMUR
ವಿಮರ್ಶಕ ಡಾ. ಜಿ.ಎಸ್. ಆಮೂರ ನಿಧನ | Prajavani: ಹಿರಿಯ ವಿಮರ್ಶಕ ಡಾ. ಜಿ.ಎಸ್.ಆಮೂರ (96) ಸೋಮವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.
Saturday, September 26, 2020
Friday, September 25, 2020
Thursday, September 24, 2020
Wednesday, September 23, 2020
Tuesday, September 22, 2020
ರಾಜ್ಯಸಭೆ | ಮೂರೂವರೆ ತಾಸಿನಲ್ಲಿ ಅಂಗೀಕಾರಗೊಂಡ 7 ಮಸೂದೆಗಳ ಸಂಕ್ಷಿಪ್ತ ಪರಿಚಯ
ರಾಜ್ಯಸಭೆ | ಮೂರೂವರೆ ತಾಸಿನಲ್ಲಿ ಅಂಗೀಕಾರಗೊಂಡ 7 ಮಸೂದೆಗಳ ಸಂಕ್ಷಿಪ್ತ ಪರಿಚಯ | Prajavani: ಎಂಟು ಸದಸ್ಯರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ ಬಳಿಕ ಈ ಮಸೂದೆಗಳಿಗೆ ಒಪ್ಪಿಗೆ ದೊರೆತಿದೆ. ಒಪ್ಪಿಗೆ ದೊರೆತವುಗಳಲ್ಲಿ ಎರಡು ವಿವಾದಾತ್ಮಕ ಮಸೂದೆಗಳೂ ಸೇರಿವೆ.
Monday, September 21, 2020
Sunday, September 20, 2020
Saturday, September 19, 2020
Friday, September 18, 2020
Thursday, September 17, 2020
Wednesday, September 16, 2020
Tuesday, September 15, 2020
Monday, September 14, 2020
Sunday, September 13, 2020
ಸುಬ್ರಾಯ ಚೊಕ್ಕಾಡಿ ---ತಿರುಮಲೇಶ್ 80
ತಿರುಮಲೇಶ್ 80
ಹೊರಟುಬಿಟ್ಟರು ಇವರು ಮೂಲ ನೆಲೆಯಿಂದ
ಒಸರಾಗಿ,ಹೊಳೆಯಾಗಿ,ನದಿಯಾಗಿ ಹರಿವಂತೆ ಮುಖವಾಡಗಳ ಕಳಚುತ್ತ,ತನ್ನ ವಠಾರ ದಾಟಿ
ಗಡಿನಾಡ ದಾಟಿ,ಕಲ್ಲು ಮುಳ್ಳುಗಳ ಕೊರಕಲು ಹಾದಿ ದಾಟಿ
ಜೋಡಿಸುತ ಕಿರುದಾರಿ ಹೆದ್ದಾರಿಗೆ.ಹಾಗೆ
ಹೆದ್ದಾರಿಯಲಿ ನಡೆದರೂ
ಅಕ್ಕ ಪಕ್ಕದ ಅನಾಮಿಕ ಮರ,ಸ್ವರ,ನೀರವವ ಧ್ಯಾನಿಸುತ
ಮುನ್ನಡೆದರು ಈ ಜ್ಞಾನದಾಹಿ
ಮಹಾ ಪಥಿಕನಾಗಿ.ನಡೆದು ಹೋದರು
ಒಂಟಿ ಸಲಗವಾಗಿ.
ಪರಮ ಕುತೂಹಲಿ ಇವರು
ಸ್ವೀಕರಿಸುತ್ತಾ ಹೋದರೆಲ್ಲವನ್ನೂ
ಹೋದ ಜಾಗವನೆಲ್ಲ ತನ್ನದೇ ನೆಲೆಯಾಗಿಸುತ
ಕಂಡದ್ದು,ಕೇಳಿದ್ದು,ಓದಿದ್ದು,ಅನುಭವಿಸಿದ್ದು..
ಮುಖಾಮುಖಿಯಾಗಿ ಎಲ್ಲದಕ್ಕೂ
ತನ್ನದೇ ಭಾಷೆಗೆ ರೂಪಾಂತರಿಸುತ್ತ ಎಲ್ಲವನ್ನೂ.
ಬದಲಾದ ಈ ಎಲ್ಲ ಅಸಂಖ್ಯ ರೂಪಗಳು
ಒಳರೂಪ,ಹೊರರೂಪಗಳ ಸಮನ್ವಯದ ಸಖ್ಯದಲಿ
ಚಲಿಸುತ್ತ,ತನ್ನ ಸೀಮೆಯ ತಾನೆ ಮೀರುತ್ತ
ಹೊಸ ಸೀಮೆಯನ್ನೆಲ್ಲ ಆವರಿಸಿಕೊಳ್ಳುತ್ತ
ಹೆಕ್ಕಿಕೊಂಡರು
ಧೂಳೊಳಡಗಿದ ಪುಟ್ಟ ಮಣಿ,ಇದ್ದಿಲ ಚೂರು
ಹೆಸರಿರದ,ಉಸಿರಿರದ,ವಸ್ತುಗಳನೆತ್ತಿ
ಉಜ್ಜಿ,ಉಸಿರೂಡಿ,ಹೊಳಪಾಗಿಸುತ ,ಹೆಣೆದು ಮಾಡಿದರು ಸೊಬಗಿನಕ್ಷಯ ಹಾರ.
ಸುದೀರ್ಘ ಪಯಣದ ಕೊನೆಗೆ
ಹಿಂದಿರುಗಿ ನೋಡಿದರೆ
ಇವರದೇ ಹೆಜ್ಜೆಗುರುತು.
ತೃಪ್ತಿ,ಅತೃಪ್ತಿಯ ನಡುವೆ ಜೋಕಾಲಿಯಾಡುವ ಇವರು
ಕೆಲವೊಮ್ಮೆ ಸಿಡಿವ ಜ್ವಾಲಾಮುಖಿ
ಮತ್ತೊಮ್ಮೆ ತಣ್ಣಗಿನ ಮಂಜುಗಡ್ಡೆ.
ಅಶಾಂತ ಚಿತ್ತದ ತಹತಹದ ನಡುವೆಯೂ
ಕೊನೆಗೂ ಉಳಿದಿರುವ ನಿರ್ಮಲ ಚಿತ್ತ.
ಎಲ್ಲ ಇದ್ದೂ ಇವರು ಅನಿಕೇತನ
ಆಗಿಸುತ ನಿಂತ ನೆಲೆಯೇ ಕೇತನ.
--ಸುಬ್ರಾಯ ಚೊಕ್ಕಾಡಿ.
166You, Alaka Jithendra, Purushottama Bilimale and 163 others
30 Comments
5 Shares
Like
Comment
Share
ಸಂದರ್ಶನ: ಜಿ ರಾಜಶೇಖರ್ ಹಾಗೂ ಕೆ ಫಣಿರಾಜ್ ಸಂವಾದ | | ಅವಧಿ । AVADHI G. RAJASHEKHAR -PHANIRAJ
Subscribe to:
Posts (Atom)