Powered By Blogger

Tuesday, December 1, 2020

ಮುರಳಿಧರ ಉಪಾಧ್ಯ ಹಿರಿಯಡಕ -ವಾಸಂತಿ ಅಂಬಲಪಾಡಿ "ನಾ ಕಂಡ ಜಗವು ಇಂತಿಹುದಯ್ಯಾ"(ಆಧುನಿಕ ವಚನಗಳು-2020)

ಇಪ್ಪತ್ತು, ಇಪ್ಪತ್ತೋಂದನೇ ಶತಮಾನಗಳಲ್ಲಿ ಆಧುನಿಕ ವಚನ ಸಾಹಿತ್ಯ ಸಾಕಷ್ಟು ಸಮೃದ್ಡವಾಗಿ ಬೆಳೆಯುತ್ತಿದೆ.ತೀ.ನಂ.ಶ್ರೀ,ಕುವೆಂಪು,ಬೇಂದ್ರೆ(ಕರುಳಿನ ವಚನಗಳು) ಜಚನಿ, ಎಸ್.ವಿ.ರಂಗಣ್ಣ,ಸಿಂಪಿ ಲಿಂಗಣ್ಣ ಹೀಗೆ ಹಲವರು ವಚನಗಳನ್ನು ಬರೆದಿದ್ದಾರೆ. ನನ್ನಗುರುಗಳಲ್ಲಿ ಮೂವರು ಎಸ್.ವಿ.ಪರಮೇಶ್ವರ ಭಟ್ (ಉಪ್ಪು ಕಡಲು),ಗುಂಡ್ಮಿ ಚಂದ್ರಶೇಖರ ಐತಾಳ , ರಾಮದಾಸ್ [ ಸ್ವಾತಂತ್ರೇಶ್ವರ ವಚನಗಳು ] -ವಚನಗಳನ್ನು ಬರೆದಿದ್ದಾರೆ.ಒಂದು ಅಂದಾಜಿನ ಪ್ರಕಾರ ಹದಿನೈದು ಸಾವಿರಕ್ಕೂ ಹೆಚ್ಚು ಆಧುನಿಕ ವಚನಗಳು ಪ್ರಕಟವಾಗಿವೆ. ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಉಡುಪಿ ದೊಡ್ದನಗುಡ್ಡೆಯ ಲೇಖಕಿ ವಾಸಂತಿ ಅಂಬಲಪಾಡಿ ಇದೀಗ ಆಧುನಿಕ ವಚನಗಳನ್ನು ಬರೆದು ಕೃತಿಯನ್ನು ಹೊರ ತರುತ್ತಿದ್ದಾರೆ. ಮೂಢ ಭಕ್ತಿ, ಡಾಂಭಿಕತೆಯ ವಿಡಂಬನೆ,ಕರಭಾರ(ತೆರಿಗೆ) ಅಧಿಕಾರಮದ, ನಮ್ಮ ಸೋಲಿಗೆ ಇತರರಮೇಲೆ ದೋಷಾರೋಪಣೆ ಹೊರಿಸುವುದು,ತಥಾಕಥಿತ ನಾಗರೀಕ ಸಮಾಜದಲ್ಲಿ ನಡೆಯುವ ಹತ್ತ್ಯಾಕಾಂಡಗಳು ಬದುಕಿನ ಇತಿ ಮಿತಿ,ಕೃಚೌಯ೯,ಕೋಮು ದ್ವೆಷ,ಪರನಿಂದೆ,ಮತ್ಸರ,ಮನದ ವ್ಯಾಧಿ,ಸಾವಿನ ಚಿಂತನೆ-ಹೀಗೆ ಖಾಸಗಿ ಮತ್ತು ಸಾಮಾಜಿಕ ಜೀವನಕ್ಕೆ ಸಂಬಂಧ ಪಟ್ಟ ವಿವಿಧ ವಸ್ತು ವಿಷಯಗಳನ್ನು ಕುರಿತು ವಚನಗಳು ಇಲ್ಲಿವೆ. ದಾಂಪತ್ಯದಲ್ಲಿರಬೆಕಾದ ಹದವನ್ನು ಕುರಿತು ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಪತಿಯ ಅಡಿಗಡಿಗೆ ನಿಂದಿಸುವ, ಸತಿಯ ಪದ ಪದಕೂ ಹಂಗಿಸುವ,ಸತಿಪತಿಗಳೀವ೯ರೂ ಜಕ್ಕವಕ್ಕಿಗಳಂತೆ ಲೋಕದೆದುರು ನಟನೆ ಮಾಡುವ ದಂಪತಿಗಳ ಬಗ್ಗೆ ಬರೆದ ವಚನಗಳು ಇಲ್ಲಿ ಗಮನ ಸೆಳೆಯುತ್ತವೆ.ಹಾಗೆಯೇ - ಕೆರೆ ಹಳ್ಳ ನದಿಯ ಉದಕ ಬತ್ತ ಬಹುದಯ್ಯಾ ಲವಣವುಳ್ಳ ಶರಧಿಯುದಕ ಬತ್ತುವುದೇನು? ಸತಿಪತಿಸುತ ಸಂಬಂಧಗಳು ಹಳಸಬಹುದಯ್ಯಾ ಕುಡಿಯಲಾರದ ಜಲದೊಳಗಡೆ ಅಮೂಲ್ಯ ಮಣಿಗಳು ಇರುವಂತೆ ಹದವರಿತು ಬೆರೆತೊಡೆ ಸಂಬಂಧ ಉಳಿವುದು ದಿಟ ಶ್ರೀ ಚಂದ್ರಮೌಳೀಶ್ವರಾ ಎಂದು ಹೇಳುತ್ತಾರೆ ಈ ಕವಯತ್ರಿ.ದಂಪತಿಗಳು ಮಾಗಿದರೆ, ಹದವರಿತು ಬಾಳಿದರೆ ಮನೆ ಸುಖಕರವಾಗಿ ಇರಬಲ್ಲದು ಎನ್ನುವುದರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಮತ್ತು ಸತಿಪತಿಯರು ಮಿತ್ರರಂತೆ ಬಾಳಬೇಕು ಎಂಬ ಚಿಂತನೆ ಇಲ್ಲಿದೆ. ಇನ್ನೊಂದು ವಿಶೇಷವೆಂದರೆ ವಾಸಂತಿ ಅಂಬಲಪಾಡಿ ಯವರ ವಚನಗಳ ಅಂಕಿತ ನಾಮ "ಚಂದ್ರಮೌಳೀಶ್ವರಾ"-ಉಡಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲೇ ಇತಿಹಾಸ ಪ್ರಸಿದ್ದ ಶ್ರೀ ಚಂದ್ರಮೌಳೀಶ್ವರನ ದೇವಸ್ಠಾನವು ಇದೆ. ಸಾಮಾಜಿಕ ಜೀವನದ, ಕುಟುಂಬದ ಸಣ್ಣ ಸಣ್ಣ ಸಂಗತಿಗಳನ್ನು ಕೂಡಾ ಅಲಕ್ಷಿಸಬಾರದು ಎಂಬ ವಿವೇಕ ಈ ವಚನಗಳಲ್ಲಿದೆ.ವಾಸಂತಿ ಅಂಬಲಪಾಡಿ, ಮೆಲುದನಿಯ, ಪಿಸುಮಾತಿನ ಕವಯತ್ರಿ.ಇವರ ಪಿಸುಮಾತಿನಲ್ಲಿ ಆಧುನಿಕ ಬದುಕಿನ ಪಿಸುರುಗಳನ್ನು ತೊಳೆಯಬೇಕು ಎನ್ನುವ ವಿವೇಚನೆ ಇದೆ. ಹಿಂಸೆಯನ್ನುಸಮಥಿ೯ಸುವ ಸಮೂಹ ಸನ್ನಿಯ ನಿರಾಕರನೆ ಇದೆ.ಇವರ ವಚನಗಳು ವಚನ ಶೈಲಿಯಲ್ಲಿ ವಚನ ಕಾಲವನ್ನು, ವೈಚಾರಿಕತೆಯಲ್ಲಿ ಆಧುನಿಕ ಕಾಲವನ್ನು ನೋಡುವಂತಹ ವಚನಗಳು. "ಹುಂಡಿಯ ಕದ್ದವರಿಹರು" "ಪರಬರಹವ ಕದ್ದವರಿಹರು" "ನಿಮ್ಮ ದೇವರು, ನಮ್ಮ ದೇವರು ಎಂಬ ಭೇದ" "ಎನಗೆ ಸೆಗಣಿ ಸಾರಿಸುವ ಗೆರಸೆಯೇ ಸಾಕಯ್ಯಾ"-ಇಂಥ ನೆನಪಿನಲ್ಲಿ ಉಳಿಯುವಂತಹ ಅನೇಕ ಸಾಲುಗಳು ಈ ವಚನಗಳಲ್ಲಿವೆ. ಕವಯಿತ್ರಿ ವಾಸಂತಿ ಅಂಬಲಪಾಡಿ ವಚನಕಾರರ ಅನುಭವ ಮಂಟಪದ ಒಳಗಿರುವ ಅಕ್ಕ,ಮುಕ್ತಾಯಕರಂಥಹ ಸಂಗಾತಿಗಳಿವೆ ಇವರ ಪಿಸುದನಿ ಕೇಳಿಸಲಿ. ಅವರು ಬಾಗಿಲು ತೆರೆದು ಈ ಆಧುನಿಕ ವಚನಕಾತಿ೯ಯ ಕೈ ಹಿಡಿದು ಮುನ್ನಡೆಸಲಿ ಎಂದು ಹಾರೈಸುತ್ತೇನೆ -ಮುರಳೀಧರ ಉಪಾಧ್ಯ ಹಿರಿಯಡಕ ಮುನ್ನುಡಿ (೧-೧೧-೨೦೨೦)

No comments:

Post a Comment