Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Wednesday, March 29, 2023
ಉದಯ ಕುಮಾರ ಹಬ್ಬು - ಕೆ ಸತ್ಯನಾರಾಯಣ ಅವರ " ಬೀದಿ ಜಗಳ ಮತ್ತು ಇತರ ಪ್ರಬಂಧಗಳು
ಖ್ಯಾತ ಕಥೆಗಾರ ಕಾದಂಬರಿಕಾರ ವಿಮರ್ಶಕರಾದ ಮಾನ್ಯ ಕೆ ಸತ್ಯನಾರಾಯಣ ಇವರು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆದು ತಮ್ಮದೆ ಆದ ಛಾಪು ಮೂಡಿಸಿದ್ದಾರೆ ಇದೀಗ ಈ ನೂತನ ಅನನ್ಯ ಪ್ರಬಂಧ ಸಂಕಲನ "ಬೀದಿ ಜಗಳ ಮತ್ತು ಇತರ ಪ್ರಬಂಧಗಳು" ಎಂಬ ಪುಸ್ತಕ ಪ್ರೀತಿಯಿಂದ ಕಳಿಸಿದ್ದಾರೆ. ಇವು ಲಘು ಪ್ರಬಂಧಗಳಲ್ಲ. ಮನುಷ್ಯ ಲೋಕದ ಮನುಷ್ಯ ಸ್ವಭಾವದ ಓರೆ ಕೋರೆಗಳ ಬಗ್ಗೆ ಮನುಷ್ಯ ಸ್ವಭಾವದ ಮಾನಸಿಕ ವೈಚಿತ್ರಗಳ ಕುರಿತು ಬರೆದ Critical Essays ಅಂತ ಕರೆಯಲಿಕ್ಕೆ ಇಷ್ಟಪಡುತ್ತೇನೆ ಪ್ರಬಂಧ ಪ್ರಕಾರಗಳಲ್ಲಿ ಇದು analytical essays ಎಂದೂ ಕರೆಯಬಹುದು ಓದುಗರ ಎದುರಿಗೆ ಕೆಲವು premises ಗಳನ್ನು ಪ್ರಸ್ತುಪಡಿಸಿ ಓದುಗರನ್ನು ತಮ್ಮ ಅಭಿಪ್ರಾಯಗಳನ್ನು ಮನವರಿಕೆ ಮಾಡಿಸಿ ಅವರು ಒಪ್ಪುವಂತೆ ಮಾಡುವ ಕಸಬುದಾರಿಕೆ ಈ ಪ್ರಬಂಧಗಳಲ್ಲಿದೆ. ಬೀದಿಜಗಳದ ಬಗ್ಗೆ ವಿಶಿಷ್ಟ ಒಳನೋಟಗಳಿವೆ. ಜಗಳ ಬೀದಿಗೆ ಬಂದರೆ ಮಾತ್ರ ಸ್ವಾರಸ್ಯಕರ ಎಂಬುದು ಚೇಷ್ಟೆಯ ಮಾತೆಂದೆನಿಸಿದರೂ ಅದರಲ್ಲಿ ಸತ್ಯವಿದೆ ಮೊದ ಮೊದಲ ಓದುಗನನನ್ನು ಲೇಖಕನಿಗೆ ಪತ್ತೆ ಮಾಡುವುದು ಹೇಗೆ? ಮುನ್ನುಡಿಕಾರ ಮೊದ ಮೊದಲ ಓದುಗ. ಉಳಿದ ಓದುಗರನ್ನು ಬರಹಗಾರ ಭೇಟಿಯಾದರೆ ಅದು ಲೇಖಕನು ಭೇಟಿಯಾದ ಮೊದ ಮೊದಲ ಓದುಗ. ಓದುಗ ನಮ್ಮೆದುರಿಗೆ ನಮ್ಮ ಕೃತಿಗಳ ಬಗ್ಗೆ ಮೆಚ್ಚುಗೆ ಮಾತುಗಳನ್ಬೇ ಆಡಬೇಕೆಂದು ಬರಹಗಾರ ಬಯಸುವುವುದು ಸಹಜ ತಾನೆ?
ಅಲವತ್ತುಕೊಳ್ಳುವುದು ಸರ್ಜನಶೀಲತೆಗೆ ಪೂರಕ ಎನ್ನುವ ಮಾತು ಸತ್ಯದಿಂದ ದೂರವಿಲ್ಲ "ಸಾಹಿತ್ಯಕೃತಿಗಳು ತಮ್ಮ ಜೀವಂತಿಕೆ ಉಳಿಸಿಕೊಂಡಿರುವುದು ಹೀಗೆ ಪುಸ್ತಕಗಳು ಹುಡುಕುವ, ಕಂಡುಕೊಳ್ಳುವ ಮೊದಮೊದಲ ಓದುಗರಿಂದಲೇ ಹೊರತು ಲೇಖಕರು ಬಯಸುವ ಹುಡುಕುವ, ಬಯಸುವ ಕಂಡುಬಿಟ್ಟೆವು ಎಂದು ಭ್ರಮಿಸುವ ನೊದಮೊದಲ ಓದುಗರಲ್ಲ.
ನಮಗೇ ಯಾಕೆ ಹೀಗಾಗುತ್ತೆ? ಈ ಪ್ರಶ್ನೆಯನ್ನು ಬದುಕಿನಲ್ಲಿ ಸೋತ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಲ್ಲಿ ಅಲವತ್ತುಕೊಳ್ಳುವುದು ಸಹಜ. ನಮಗೇ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲ ಎನ್ನುತ್ತಾರೆ ಪ್ರಬಂಧಕಾರರು ಒಳಾಂಗಣದ ಬದುಕು ನಮ್ಮ ಕೌಟುಂಬಿಕ ಬದುಕಿನ ಮನೆಯ ನೆಮ್ಮದಿ ಸಂತೋಷದ ತೃಪ್ತಿಯ ಸಥಯವಾ ಕಹಿ ಸಂಬಂಧಗಳ ನೋವಿನ ಕೃತಕತೆಯ ಪ್ರತಿಬಿಂಬ ಎನ್ನುತ್ತ ಈ ತೃಪ್ತಿ ನಾವು ಹೊಂದಿರುವ ಬಂಗಲೆ ಆಸ್ತಿ ಹಣದ ಮೇಲೆ ಅವಲಂಬಿಸಿಲ್ಲ ಎನ್ನುತ್ತಾರೆ ಪ್ರಬಂಧಕಾರರು. ಹೆಚ್ಚಿನ ಪ್ರಬಂಧಗಳು ಆಧುನಿಕ ಮನುಷ್ಯನ ಟೊಳ್ಳು ಗಟ್ಟಿಯನ್ನು ವಿಮರ್ಶಿಸಿ ಆ ಟೊಳ್ಳು ಗಟ್ಟಿಯಿಂದ ಹೊರ ಹೋಗುವ ದಾರಿಯನ್ನು ತೋರಿಸುತ್ತವೆ ಉದಾಹರಣೆಗೆ ", ತೀರಿಕೊಂಡವರ ಕುರಿತು ಮಾತು ಬೇಕೆ?" "ಸದಾ ಸ್ವಾಭಿನಂದನೆಯ ಯುಗ", " ಸರ್ಟಿಫಿಕೆಟ್ ದಾತರು", "ಹ್ಯಾಂಗರ್ಸ್ ಆನ್", ", " "ಇತರೆಯವರು" "ಪ್ರಬಂಧಕಾರರಿಗೆ ಉಪದೇಶಾಮೃತ" ಈ ಪ್ರಬಂಧಗಳು ಸೊಶಿಯಲ್ ಇಶ್ಶ್ಯೂಸ್ ಕುರಿತಾದ ವಿಡಂಬನೆ ಬರಹಗಳು. ಸ್ವವಿಡಂಬನೆಯೂ ಇದೆ "ಸಂಬಂಧಗಳನ್ನು ಏಕೆ ತೊರೆಯಬೇಕು?" ಹಳಸಿದ ಮಾನವ ಸಂಬಂಧಗಳು ದಾಂಪತ್ಯ ಸಂಬಂಧಗಳನ್ನೂ ಒಳಗೊಂಡಂತೆ ಈ ಪ್ರಶ್ನೆಯನ್ನೆತ್ತಿದ್ದಾರೆ. ತೊರೆಯುವುದೆ ಕ್ಷೇಮ ಎಂಬ ಧ್ವನಿಯೂ ಇದೆ. ಇಳಿ "ಇಳಿಯಸ್ಸಿನ ಕಾಠಿಣ್ಯ ಇತ್ಯಾದಿ" ವೃದ್ಧರ ಅಸಹಿಷ್ಣುತೆ ತಾಳ್ಮೆಗೆಡುವುದರ ಕಾರಣವಾಗಿ ಅವರ ಮನೋಶಾಸ್ತ್ರದ ವಿವರಣೆ ಇದೆ ಮಸಲ್‌ಮೆಮೊರಿ ಈ ಪ್ರಬಂಧವು ಸರ್ಜನಶೀಲ ಚಟುವಟಿಕೆಗಳೂ ಯಾಂತ್ರಿಕವೆ ಎಂಬ ಪ್ರಶ್ನೆಗೆ ಉತ್ತರವಿದೆ. ಇಂದು ಕಂಪ್ಯೂಟರ್ ಕವಿತೆ ಕಥೆ ಕಾದಂಬರಿ ಬರೆಯುವ ಕಾಲ. ಅಂತೆಯೆ ಬರಹಗಾರನೂ ಮಸಲ್ ಮೆಎಮೊರಿಯಿಂದ ಯಾಂತ್ರಿಕವಾಗಿ ಬರೆಯುತ್ತಾನೆ ಎಂಬುದು ಒಂದು ಪ್ರಮೇಯ.
ಈ ಪ್ರಬಂಧಗಳಲ್ಲಿ ಪ್ರಬಂಧಕಾರರ ಗಾಢವಾದ ಆಳವಾದ ಲೌಕಿಕಾನುಭವ ನಡುಗಟ್ಟಿದೆ argumentative ಪ್ರಬಂಧಗಳಂತೆಯೂ analytical ಪ್ರಬಂಧಗಳಂತೆಯೂ ಎಲ್ಲಕ್ಕಿಂತ ಹೆಚ್ಚಾಗಿ social critical essays ಎಂದೂ ಕರೆಯಬಹುದಾಗಿದೆ ಓದುಗರಿಡನೆ rapport ಸಾಧಿಸುವ ಅವರನ್ನು address ಮಾಡಿ ಅವರನ್ನು ತನ್ನ ವಾದಗಳಿಗೆ ಹೌದೆನ್ನಿಸುವ ಜಾಣ ತರ್ಕ ಈ ಪ್ರಬಂಧಗಳಲ್ಲಿದ್ದು ಓದುವುದರಿಂದ ನಮ್ಮ ಲೋಕಾನುಭವವೂ ಹೆಚ್ಚುತ್ತದೆ ತಲೆಗೆ ಒಂದಿಷ್ಟು ಕೆಲಸ ಕೊಡುತ್ತವೆ ಈ ಪ್ರಬಂಧಗಳು
ಓದಿರಿ
ಉದಯಕುಮಾರ ಹಬ್ಬು
Uday Kumar Habbu is with Satyanarayana Krishnam
Labels:
k sathyanarayana
Location:
Udupi, Karnataka, India
Subscribe to:
Post Comments (Atom)
No comments:
Post a Comment