Powered By Blogger

Sunday, October 25, 2020

ಎಲ್. ಸಿ. ಸುಮಿತ್ರಾ - ನರೇಂದ್ರ ರೈ ದೇರ್ಲ ಅವರ " ಹಳ್ಳಿಯ ಆತ್ಮಕತೆ "{ 2020 } L. C. SUMITRA / NARENDRA RAI DERLA

 ಲೇಖಕ ರೂ, ಕನ್ನಡ ಅಧ್ಯಾಪಕ ರೂ,ಕೃಷಿಕರೂ ಆದ ಗೆಳೆಯ ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳನ್ನು ಇತ್ತೀಚೆಗೆ ಓದಿದೆ. ಈವರೆಗೆ ಅವರು ಬರೆದ ಕೃಷಿ, ಗ್ರಾಮೀಣ ಸಂಸ್ಕೃತಿ, ಪರಿಸರಕ್ಕೆ ಸಂಬಂಧಿಸಿದ ಬರಹಗಳ ಮುಂದುವರಿದ ಚಿಂತನೆ ಗಳು ಇಲ್ಲಿ ಯೂ ಇದ್ದರೂ ಕರೋನ ಎಂಬ ಸಾಂಕ್ರಾಮಿಕ ತಂದ ಬದಲಾವಣೆ ಗಳು, ಕೃಷಿ ಬದುಕಿನ ಮೇಲೆ ಮಾಡಿದ ಪರಿಣಾಮಗಳನ್ನು ಚಿತ್ರಿಸಿದ್ದಾರೆ..

"ಹಳ್ಳಿಯ ಆತ್ಮಕಥೆ "ದೇರ್ಲ ಎಂಬ ಹಳ್ಳಿಯ ಅರ್ಧ ಶತಮಾನದ ಕಥೆ..ಇದು ಲೇಖಕ ರ ಬಾಲ್ಯದ ಆತ್ಮ ಕಥನ ವನ್ನು ಒಳಗೊಂಡಿದೆ ಯಾದರೂ ಇಲ್ಲಿ ಹಳ್ಳಿ ಯ ಪ್ರಾಕೃತಿಕ ಪರಿಸರ, ತರವಾಡಿನ ಜೀವನ ಶೈಲಿ, ಕೃಷಿ ಕರ ಬವಣೆ, ರಬ್ಬರ್ ನಂತಹ ಹೊರಗಿನ ಕೃಷಿ ಬಂದಾಗ ಆದ ಸ್ಥಳೀಯತೆಯ ನಾಶ ಹೀಗೆ ಹಲವು ವಿಷಯ ಗಳು ಕೇಂದ್ರ ದಲ್ಲಿವೆ. ಈ ಕುರಿತು ಲೇಖಕ ರೈಹೇಳುವುದು ಹೀಗೆ. "ಇಲ್ಲಿ ಹದಿನೆಂಟು ಪ್ರಬಂಧಗಳಿವೆ. ಎಲ್ಲವೂ ನನ್ನ ನ್ನು ಸೇರಿಸಿಯೇ ನನ್ನೂರನ್ನು ಕಟ್ಟಿ ಕೊಡುತ್ತವೆ. ಇದು ನನ್ನ ಆತ್ಮ ಕಥೆ ಯೂ ಹೌದು, ನನ್ನೂರ,ನನ್ನೂರವರ ಆತ್ಮ ಕತೆಯೂ ಹೌದು. ಹಾಗೆ ನೋಡಿದರೆ ಈ ಜಗತ್ತಿನ ಯಾವುದೇ, ಯಾರದೇ ಆತ್ಮ ಕಥೆ ಕೇವಲ ಒಬ್ಬನ, ಒಂದು ಮನೆ ಕುಟುಂಬದ ಆತ್ಮ ವೃತ್ತಾಂತ ವಾಗಿ ಉಳಿಯದು."
ಈ ಪುಸ್ತಕ ದ ಮುಖಪುಟ ದಲ್ಲಿ ವೃದ್ಧ ವ್ಯಕ್ತಿ ಯ ಚಿತ್ರ ವಿದೆ. ಇದು ಇವತ್ತಿನ ನಮ್ಮ ಹಳ್ಳಿ ಗಳ ಹಣ್ಣಾದ ಪರಿಸ್ಥಿತಿ ಯನ್ನು ಸೂಚಿಸುವಂತಿವೆ. ಕೊಳ್ಳುಬಾಕ ಸಂಸ್ಕೃತಿಯ ಅಲೆಯಲ್ಲಿ ಪ್ರಪಂಚವೇ ತೇಲುತ್ತಿರುವ ಈ ಸ್ಥಿತಿಯಲ್ಲಿ ಹಳ್ಳಿ ಯ ಬದುಕೂ ಅದರಿಂದ ದೂರ ಇರಲು ಸಾಧ್ಯವಿಲ್ಲ ಎನ್ನುವ ವಾಸ್ತವ ಚಿತ್ರವಿದೆ..
ತಂದೆಯ ವ್ಯಸನಗಳಿಂದಾಗಿ ತಾಯಿ ಅನುಭವಿಸಿದ ಕಷ್ಟ, ತಂದೆ ಕುಂಬ್ರದಿಂದ ,ದೇರ್ಲಕ್ಕೆ ವಾಸ ಬದಲಾಯಿಸಿ ದಾಗ ,ಹೊಸ ಜಾಗದಲ್ಲಿ ಗದ್ದೆಮಾಡಿದಾಗ ಚಿಕ್ಕ ಹುಡುಗ ನರೇಂದ್ರ ನ ಅನುಭವ ಗಳು, ಅಮ್ಮ,ಅಪ್ಪ, ಗಾಂಧಿ ಯನ್ನು ಹತ್ತಿರ ತಂದ ಅಜ್ಜ, ಮೇಷ್ಟ್ರು, ಎಲ್ಲ ರೂ ಆಪ್ತ ವಾಗಿ ಚಿತ್ರಿಸಲ್ಪಟ್ಟಿದ್ದಾರೆ. ದೇರ್ಲದ ಹಳೆಯಮನೆ ಯಲ್ಲಿ ಬುಟ್ಟಿ ಹೆಣೆಯುವ ಹವ್ಯಾಸದಲ್ಲಿ ಬದುಕಿನ ಬಹುಭಾಗವನ್ನು ಕಳೆಯುವ ಅಜ್ಜಿ, ಯ ಬುಟ್ಟಿ ನೇಯ್ಗೆ ಎಷ್ಟೇ ಕಲಾತ್ಮಕ ವಾಗಿದ್ದರೂ ಮನೆಯವರಿಗೆ ಅಜ್ಜಿ ಯ ಕಣ್ಣಿಗೆ ಅದರಿಂದ ತೊಂದರೆ ಎಂದು ಅದನ್ನು ನಿಲ್ಲಿಸಲು ಪ್ರಯತ್ನ ಮಾಡುವುದು ಅಜ್ಜಿ ಜಗ್ಗದೆ ಮುಂದುವರೆಸುವುದು..ಒಂದು ರೂಪಕದಂತೆ ಕಾಣಿಸುತ್ತದೆ.
ಮಹಾಮನೆಯಲ್ಲಿ ನಡೆಯುವ ಭೂತ,ಕೋಲ, ಯಕ್ಷಗಾನ ದಂತಹ ಆಚರಣೆ ಗಳು ಇಂದಿಗೂ ಬಂಧುಗಳನ್ನು ಒಂದೆಡೆ ಸೇರಿಸುವ ಆಚರಣೆ ಗಳಾಗಿವೆ. ಅವುಗಳ ಹಿಂದಿನ ನಂಬಿಕೆ ಗಳು ಏನೇ ಆಗಿರಲಿ ಅವುಗಳಲ್ಲಿ ಗುಣಾತ್ಮಕ ಅಂಶಗಳು ಇವೆ ಎಂದು ಗುರುತಿಸಿದ್ದಾರೆ.
ನಿರೂಪಕ ಬಾಲ್ಯದ ಲ್ಲಿ ಏನೇ ಆರ್ಥಿಕ ಕಷ್ಟ ಗಳಿದ್ದರೂ ಸಾಮಾಜಿಕ ಮನ್ನಣೆಯ ಕುಟುಂಬದ ಲ್ಲಿ ಹುಟ್ಟಿದ್ದರಿಂದ ಬರುವ ಆತ್ಮ ವಿಶ್ವಾಸ ಅವರಲ್ಲಿತ್ತು..ಇದು ಹಳ್ಳಿಯ ಕೃಷಿ ಕಾರ್ಮಿಕರಿಗೆ ಇರಲು ಸಾಧ್ಯವಿಲ್ಲ. ಅವರು ಇನ್ನೊಬ್ಬ ರ ಜಮೀನಿನ ಲ್ಲಿ ದುಡಿಯುವ ಬದಲು ಪೇಟೆಯಲ್ಲಿ ಗಾರೆ ಕೆಲಸ ,ರಿಕ್ಷಾ ಓಡಿಸುವುದು ಅಥವಾ ಬೆಂಗಳೂರಿನ ಂತಹ ಊರಿಗೆ ಹೋಗಿ ಕಟ್ಟಡ ಕಾರ್ಮಿಕ ರಾಗುವುದು ನಡೆಯುತ್ತದೆ.. ಪರಿಣಾಮ ಕೃಷಿ ಕೆಲಸಕ್ಕೆ ಜನರ ಕೊರತೆ..ಮೊನ್ನೆ ಕೊರೊನಾ ಆರಂಭದಲ್ಲಿ ಪಟ್ಟಣದಿಂದ ಹಳ್ಳಿ ಯ ಕಡೆಗೆ ಹೊರಟ ಮಹಾವಲಸೆ..(ಪುನರ್ ವಲಸೆ) ..ಹೀಗೆ ಮರಳಿ ಬಂದವರಲ್ಲಿ ಕೆಲವರು ಕೃಷಿ ಯಲ್ಲಿ ತೊಡಗಿ ದ್ದಾರೆ.
ದೇರ್ಲ ಕ್ಕೆ ರೇಡಿಯೋ, ಬಂದಾಗ, ಟಿ ವಿ ಬಂದಾಗ ಆದ ಬದಲಾವಣೆ ಗಳನ್ನು , ಶಾಲೆ ಗೆ ಸೇರಲು ಹೋದಾಗ ತಮ್ಮ ಹೆಸರನ್ನು ತಾವೇ ಇಟ್ಟುಕೊಂಡ ಪ್ರಸಂಗವನ್ನು ಸ್ವಾರಸ್ಯ ಕರವಾಗಿ ದಾಖಲಿಸಿದ್ದಾರೆ. ಹಳ್ಳಿ ಯ ಬದುಕು ಬದಲಾಗಿದೆ,ಬದಲಾವಣೆ ಅನಿವಾರ್ಯ, ಎಂಬ ಅರಿವಿನ ಜತೆಗೆ ಬದಲಾವಣೆ ಯ ನಡುವೆ ನಾವು ಉಳಿಸಿಕೊಳ್ಳಬೇಕಾದ ಅನೇಕ ಮೌಲ್ಯ ಗಳು ಮರೆಯಾಗುತ್ತಿರುವುದರ ಕುರಿತು ಲೇಖಕ ರ ಕಾಳಜಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಐ ಟಿ ಯಿಂದ ಮೇಟಿಗೆ ಎಂಬ ಪುಸ್ತಕವನ್ನು ಬರೆದು ಸಾಫ್ಟವೇರ್ ಉದ್ಯೋಗವನ್ನು ಬಿಟ್ಟು ಕೃಷಿಗೆ ಮರಳಿದ ನರೇಂದ್ರ ರೈ ಅವರ ನೆರೆಯವರೇ ಆದ
Vasanth Kaje
ಯವರಂತಹ ತರುಣರು ಭರವಸೆ ಮೂಡಿಸುತ್ತಾರೆ.ಕೃಷಿ ಯಿಂದ ಲೇ ಬದುಕು ರೂಪಿಸಿಕೊಂಡು ಶ್ರೀ ಂಗೇರಿಯ ಕಾಡಿನ ನಡುವೆ ಹಲವಾರು ಪ್ರಾಕೃತಿಕ ಸವಾಲುಗಳನ್ನು ಎದುರಿಸುತ್ತಿರುವ
Srinivasa Murthy
ಯವರು ಇನ್ನೊಂದು ಮಾದರಿ. ಕೂನಬೇವು ಎಂಬ ಬಯಲುಸೀಮೆಯಲ್ಲಿ ನೆಲೆಸಿ ಬೇಸಾಯದ ಕಥೆಯನ್ನು ಬರೆದಿರುವ
ಚಂಸು ಪಾಟೀಲ
ರದು ಮತ್ತೊಂದು ಮಾದರಿ. ರೈತರಿಗೆ ಮಂಗನ ಕಾಟದಿಂದ ಬೆಳೆಯನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟ ಎಂದು ಓದುವಾಗ ಶ್ರೀ ನಿವಾಸ ಮೂರ್ತಿ ಯವರ ಅನುಭವದ ಬರಹ ನೆನಪಾಯಿತು. ಆಧುನಿಕ ಸೌಲಭ್ಯ ಗಳ ಜತೆಗೆ ಕೃಷಿ ಯನ್ನೂ , ಹಳ್ಳಿ ಯ ಆತ್ಮ ವನ್ನು ಉಳಿಸಿಕೊಳ್ಳುವ ಅಗತ್ಯ ವನ್ನು ದೇರ್ಲ ಅವರು ಮನಗಾಣಿಸಿದ್ದಾರೆ. ಅವರಿಗೆ ಅಭಿನಂದನೆಗಳು.. ನರೇಂದ್ರ. ರೈ ದೇರ್ಲ ರಂತಹ ಕೃಷಿ ಯಲ್ಲಿ ಸ್ವಾನುಭವ ವುಳ್ಳ ವರ ಬರಹದ ತೂಕವೆ ಬೇರೆ ,ಇಂಟರ್ನೆಟ್ ಮಾಹಿತಿಯ ಪರಿಸರ ತಜ್ಞ ರ ಬರಹದ ಮಿತಿಯನ್ನು ಈ ಪುಸ್ತಕ ತಿಳಿಸುತ್ತದೆ.
Narendra Rai Derla
.
You, Purushottama Bilimale, Girija Shastry and 45 others
18 Comments
Like
Comment

No comments:

Post a Comment