ಶಂಬಾ ಜೋಶಿ- ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕøತ ಕನ್ನಡ ಲೇಖಕರ ಕೃತಿಸರಣಿ
ನವ ಕರ್ನಾಟಕ ಪ್ರಕಟಣೆ
ಲೇಖಕರು: ಮಲ್ಲೇಪುರಂ ವೆಂಕಟೇಶ ಸಂ: ಪ್ರಧಾನ ಗುರುದತ್ತ
ಒಟ್ಟು 96
ಪುಟಗಳ ಈ ಕಿರುಹೊತ್ತಗೆಯಲ್ಲಿ ಕನ್ನಡದ ಈ
ನುಡಿದಿಗ್ಗಜನ ಭವ್ಯ ವ್ಯಕ್ತಿತ್ವವನ್ನು
ಅವರ ಕೃತಿಗಳ ಸಂಕ್ಷಿಪ್ತ ಪರಿಶೀಲನೆಯೊಂದಿಗೆ
ಮಾಡಿಕೊಡುವ ದಿಟ್ಟತನವನ್ನು ಮೆರೆದವರು ಮಲ್ಲೇಪುರಂ ವೆಂಕಟೇಶರು.
ಶಂಕರ ಬಾಳಾ ದೀಕ್ಷಿತ ಜೋಷಿ 1896-1991ರ ನಿಡುಗಾಲದ ಬದುಕಿನಲ್ಲಿ ಅನನ್ಯ ಸಂಶೋಧಕರಾಗಿ, ಸಂಸ್ಕತಿ ಚಿಂತಕರಾಗಿ ಮೂಡಿಸಿದ ಛಾಪು ವಿಶೇಷವಾದದ್ದು.ಪರಿಮಿತವಾದ ಶೈಕ್ಷಣಿಕ
ಹಿನ್ನೆಲೆಯೊಂದಿಗೆ ಅವರು ಆಶ್ರಯಿಸಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಧ್ಯಾಪನ
ವೃತ್ತಿಯನ್ನು. ಯಾವುದೇ ವಿಶ್ವವಿದ್ಯಾಲಯಗಳ ಆಸರೆ ಬೆಂಬಲಗಳಿಲ್ಲದೆಯೇ ಒಂಟಿಸಲಗನಂತೆ
ಜ್ಞಾನಪಿಪಾಸುವಾಗಿ ಒಂದರ ಮೇಲೊಂದರಂತೆ ಅವರು ಕೈಗೆತ್ತಿಕೊಂಡ ಶೋಧನೆಗಳು ದಂಗುಪಡಿಸುತ್ತವೆ. ಮಲ್ಲೇಪುರಂ ಪರಿಚಯಿಸುವ ಶಂಬಾ ಅವರ -ಕಣ್ಮರೆಯಾದ ಕನ್ನಡ, ಕನ್ನುಡಿಯ ಹುಟ್ಟು,ಕನ್ನಡದ ನೆಲೆ ಹಾಗೆಯೇ ಶೀಖರಪ್ರಾಯವಾದ
ಕರ್ಣಾಟಕ ಸಂಸ್ಕøತಿಯ
ಪೂರ್ವಪೀಠಿಕೆ- ಈ ಮುಂತಾದ ಕೃತಿಗಳು ಅವರ ಬಹುಶ್ರುತತ್ವವನ್ನು ,
ಬಹುಶಿಸ್ತೀಯ ನೆಲೆಗಳಿಂದ ಸಾಗುವ ಅವರ ಸಂಶೋಧನೆಯ
ದಾರಿಯನ್ನು ಶ್ರುತಪಡಿಸುತ್ತವೆ.ಮರಾಠಿಪ್ರಾಬಲ್ಯದ ಪರಿಸರದಲ್ಲಿ ಕನ್ನಡವನ್ನು ಒಲಿಸಿಕೊಂಡು
ಕರ್ನಾಟಕ ಏಕೀಕರಣದಲ್ಲಿಯೂ ತೊಡಗಿಸಿಕೊಂಡು
ಅದಕ್ಕೆ ಅಗತ್ಯವಾಗಿದ್ದ ಬೌದ್ಧಿಕ ತಳಹದಿಯನ್ನು ಗಟ್ಟಿಗೊಳೊಸಿದ ಗಟ್ಟಿಗನಾಗಿ ಶಂಬಾ
ಮೆರೆದದ್ದನ್ನು ಈ ಕೃತಿಗಳ ತಿರುಳು ಸಾರುತ್ತದೆ.
ನಾಡಿನಲ್ಲಿ ಅದು ಹಬ್ಬಿದ ರೀತಿಯನ್ನು ಕೆದಕಿ
ಕೆದಕಿ ಅವರು ಬಣ್ಣಿಸಿದ ಬಗೆ – ಇತ್ಯಾದಿಗಳನ್ನು
ಲೇಖಕರು ಮನೋಜ್ಞವಾಗಿ ನಿರೂಪಿಸಿದ್ದಾರೆ.ನುಡಿಶೋಧದ ಹಿನ್ನೆಲೆಯಾಗಿ ಶಂಬಾ ಅವರ ಪ್ರಾರ್ಥನೆಯ
ಸೊಲ್ಲುಗಳು ಗಮನೀಯ.
ಹೊನ್ನ ಮುಸುಕನ್ನು ಓಸರಿಸಿ ತಾಯ್
ನನ್ನಿಯೇ
ನಿನ್ನ ಮೊಗವನ್ನು ತೋರೆ
ಬನ್ನಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ
(
ಶಂಬಾ ಅವರ ಮೊದಲ ಸ್ವತಂತ್ರ ಕವಿತೆಯಾಗಿ ಮಲ್ಲೇಪುರಂ
ಇದನ್ನು ದಾಖಲಿಸಿದ್ದಾರೆ.)
ಕೃತಿಸಂಪುಟ- 1999-
ಪು266ರಲ್ಲಿ) ಓರ್ವ ನಿಜವಿದ್ವಾಂಸನಿಗೆ ಸಹಜವಾದ ವಿನಯದಿಂದಲೂ ಕಾಳಜಿಯಿಂದಲೂ
ಪ್ರಶ್ನಿಸಿದ್ದನ್ನು ಮಲ್ಲೇಪುರಂ ಅವರು ಉಲ್ಲೇಖಿಸುತ್ತಾರೆ.
ಮಲ್ಲೇಪುರಂ ಅವರು ಗುರುತಿಸುವಂತೆ ಶಂಬಾ ಇಡಿಯಾದ ಆಕೃತಿಯ ಮುಖಾಂತರ
ಒಟ್ಟುಸಂಸ್ಕತಿಯ ಆಶಯವನ್ನು ಗ್ರಹಿಸಿಕೊಳ್ಳುವ ತವಕದಿಂದ ಮುಂದುವರಿದವರು.ಕನ್ನಡ
ಸಂಸ್ಕತಿಸಮಸ್ಯೆಗಳ ಬೇರನ್ನು ಭಾರತೀಯ ಸಂಸ್ಕತಿಯ ಅಂತರ್ ನೆಲೆಗಳ ಹಾಸು ಮತ್ತು ಹೊಕ್ಕುಗಳಲ್ಲಿ
ಹುಡುಕಿಕೊಳ್ಳುವ ಪ್ರಯತ್ನ ಮಾಡಿದರು.
ಶಂಬಾ ಅವರ ಸಂಶೋಧನೆಯ ಹೆಜ್ಜೆಗಳು ಯಾವ ಯಾವ ನೆಲೆಗಳಲ್ಲಿ ಸಾಗಿದ್ದವು ಎನ್ನುವುದು
ಕುತೂಹಲಕರ.
1.
ಭೌಗೋಳಿಕ ವ್ಯಾಪ್ತಿಯ ನೆಲೆಗಳು(ನರ್ಮದಾ, ಕಾವೇರಿ ಸೀಮೆಗಳು)
2.ಜಾನಾಂಗೀಯ ಅಧ್ಯಯನದ ನೆಲೆಗಳು( ಹಟ್ಟಿಗಾರರು- ದ್ರವಿಡ, ಹಟ್ಟೀಕಾರ, ತುರುವ,ಕುರುವ, ಪಶುಪಾಲನೆಯ ಪತ್ತಿಜನ- ಪಟ್ಟಿಜನ- ಹೀಗೆ)
3.ಭಾಷಿಕ ಅಂತ:ಪ್ರಮಾಣದ ನೆಲೆಗಳು( ಸ್ಥಳನಾಮಗಳು, ಇನ್ನಿತರ ಶಬ್ದಮೂಲಗಳು)
4.ಆಚರಣಾ ಮೂಲದ ನೆಲೆಗಳು( ಮಾನವಮಿ, ದೀಪಾವಳಿ, ಗೋಕ್ರೀಡನ
ಇತ್ಯಾದಿ)
5.ದೈವತ ಕತೆಗಳು, ಸಾಂಕೇತಿಕ
ಆಕೃತಿಗಳ ನೆಲೆಗಳು( ಗೊಂಡರದೇವ, ಖಂಡೋಬಾ,ಮಲ್ಲಯ್ಯ, ಮಾಳವ್ವೆ, ಗ್ರಾಮದೇವತೆಗಳು
ಇತ್ಯಾದಿ)
ವಿಸ್ತರಿಸುತ್ತದೆ.ಪ್ರವಾಹಪತಿತರ ಕರ್ಮ
ಹಿಂದೂ ಎಂಬ ಧರ್ಮ,ಬುದ್ಧನ ಜಾತಕ ಮುಂತಾದ ಕೃತಿಗಳು ಇದಕ್ಕೆ ಸಾಕ್ಷಿಯಾಗಿವೆಯೆಂದು ಮಲ್ಲೇಪುರಂ
ಹೇಳುತ್ತಾರೆ.ಗ್ರೀಕ್, ಈಜಿಪ್ಟ್,ಮೆಸಪೊಟೇಮಿಯಾ ಹಾಗೂ ಭಾರತೀಯ ಸಾಮಾಜಿಕ
ಧಾರ್ಮಿಕ ನೆಲೆಗಳ ತುಲನಾತ್ಮಕ ವಿವೇಚನೆ ಮಾನವ ಸಂಸ್ಕತಿಯನ್ನು ವಿವರಿಸಿಕೊಳ್ಳುವ ಅವರ
ಪ್ರಯತ್ನವಾಗಿ ಅದರ ಹಿಂದೆ ವಿಶಾಲವಾದ ಮಾನವ ಧರ್ಮದತ್ತ ತುಡಿಯುವ ಶಂಬಾ ಅವರ ಮನಸ್ಸನ್ನು
ಲೇಖಕರು ಗುರುತಿಸುತ್ತಾರೆ.
ಸಂಸ್ಕ್ರತಿಯ ಒಳಸುಳಿಗಳು
ಜಾನಪದದಲ್ಲಿ ಬೇರುಬಿಟ್ಟಿರುವುದನ್ನು
ಮಾತೃದೇವತೆಯ ಆರಾಧನೆ ಆದಿಮ ಸಂಸ್ಕತಿಯಲ್ಲಿ ನೆಲೆಗೊಂಡದ್ದನ್ನು, ಮಾತೃಪ್ರಧಾನ ಮೌಲ್ಯಗಳು ಪುರುಷಪ್ರಧಾನ ವೈದಿಕ
ಸಂಸ್ಕತಿಗಿಂತ ಮೊದಲೇ ಇಲ್ಲಿ ಬದುಕಿದ್ದನ್ನು ಕೊನೆಗೆ ವೈದಿಕ ಸಂಸ್ಕತಿಯು ತನ್ನೊಡಲಲ್ಲಿ
ಅವುಗಳನ್ನು ಸ್ವೀಕರಿಸಿದ್ದನ್ನು ಶಂಬಾ ಅನಾವರಣಗೊಳಿಸಿದ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ.ಕನ್ನಡದ
ಮೂಲ ಸ್ಥಾನ ನರ್ಮದಾ ನದಿಯ ತೀರಪ್ರಾಂತವಿರಬೇಕೆನ್ನುವ ಅವರ ತರ್ಕ, ಅದಕ್ಕೆ ಅವರು ಕಂಡು ಕೊಳ್ಳುವ ಆಧಾರಗಳು ಮಹತ್ವಪೂರ್ಣವಾದವು.
‘ಇಂದಿ’ನ
ಅವಗತಿಗಳಿಗೂ ಅವಸರ್ಪಿಣಿ ರೂಪಕ್ಕೂ ‘ನಿನ್ನೆ’ಯೇ
ಕಾರಣವಾಗಬಲ್ಲದೆಂಬುದನ್ನ ತಮ್ಮ ಬರಹಗಳ ಮೂಲಕ ಅವರು ಮಂಡಿಸಿದ್ದು ವಿಶೇಷ.ಇಂದಿನ ಪಡಿಪಾಟಲು ಮತ್ತು
ವಿಸಂಗತಿಗಳನ್ನು ಸರಿಪಡಿಸಿಕೊಳ್ಳದೆ ನಾಳೆಯ ಭವಿಷ್ಯಕ್ಕೆ ಅರ್ಥ ಇರುವುದಿಲ್ಲವೆಂಬ ಶಂಬಾ ತತ್ವಚಿಂತನೆಯು ಕೂಡ ಬಹಳ ಮುಖ್ಯವಾದದ್ದು.' ನಿನ್ನೆ ಮುಖ್ಯ ಎಂದರೆ ಅದು ಪರಿಮಿತ. ನಾಳೆಯೂ
ಮುಖ್ಯ ಎಂದರೆ ಅದು ಅಪರಿಮಿತ " ಈ ಎಚ್ಚರ ಬೇಕು ಎನ್ನುವುದು ಅವರ ಇಂಗಿತವಾಗಿ ಮಲ್ಲೇಪುರಂ
ಅವರು ಕಾಣುತ್ತಾರೆ.
ಒಟ್ಟಿನಲ್ಲಿ ಶಂಬಾ ಅವರ
ವಿದ್ವತ್ತು ಪ್ರತಿಭೆಗಳ ಕುರಿತು ಅಪ್ಪಟ ಅಭಿಮಾನವೂ ಅರಿವೂ ಉಳ್ಳ ಲೇಖಕರು ಈ ಕೃತಿಯಲ್ಲಿ ಅವರ ಮಹೋನ್ನತ
ಚೇತನಕ್ಕೆ ನ್ಯಾಯ ಒದಗಿಸಿದ್ದಾರೆ. ಮುಂದಿನ ಪೀಳಿಗೆಗೆ ಒಂದು ಸ್ಫೂರ್ತಿಯನ್ನು ನೀಡಿದ್ದಾರೆ
ಶಂಬಾ ಅವರ ಸಾವಿನ ಬೆನ್ನಲ್ಲೆ ಅವರ ಬಾಳ
ಸಂಗಾತಿ ಪಾರ್ವತಿಯ ಮರಣವೂ ಜರಗಿ ಇಬ್ಬರನ್ನೂ ಒಂದೇ ಚಿತೆಯಲ್ಲಿ ಸಂಸ್ಕಾರ ಮಾಡಲಾಯಿತು ಎನ್ನುವ ವಿಚಾರವನ್ನು ಲೇಖಕರು ಉಲ್ಲೇಖಿಸಿದ್ದು ಒಂದು
ವಿಶೇಷ ಘಟನೆಯಾಗಿ ಮನಸ್ಸಿನಲ್ಲಿ ಉಳಿಯುತ್ತದೆ.
ಮಹೇಶ್ವರಿ.ಯು
No comments:
Post a Comment