Powered By Blogger

Saturday, October 10, 2020

ರಾಜೇಶ್ ಕುಮಾರ್ ಕಲ್ಯ -ಗುರುರಾಜ್ ಸನಿಲ್ ಅವರ " ಹಾವು ನಾವು " GURURAJ SANIL

 ಪುಸ್ತಕ: ಹಾವು ನಾವು

(ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ)
ವಿಭಾಗ: ಭಾರತದ ಸಾಮಾನ್ಯ ಹಾವುಗಳು
ಬೆಲೆ: 500ರೂ
ಲೇಖಕರು: ಶ್ರೀ ಗುರುರಾಜ್ ಸನಿಲ್ (
Gururaj Sanil
)
ಇಂದಿನವರೆಗಿನ ನನ್ನ ಓದಿನ ಪಯಣದಲ್ಲಿ ಎರಡನೇಯಬಾರಿ ಕೊಳ್ಳುತ್ತಿರುವ ಎರಡನೆಯ ಕೃತಿಯಿದು. (ತೆಗೆದುಕೊಂಡವರು ವಾಪಾಸ್ ಕೊಡದೆ ಕರ್ವಾಲೋ ಮೂರು ಕಾಪಿ ಕೊಳ್ಳಬೇಕಾಗಿತ್ತು). ನನ್ನ ಜೀವನಕ್ಕೆ ಪ್ರೇರಣೆಯಾದ ಕೃತಿಗಳ ಸಾಲಿನಲ್ಲಿ 'ಹಾವು-ನಾವು' ಕೂಡಾ ಸೇರುತ್ತದೆ..
ಅಂದರೆ ಅಲ್ಬಮ್‌ನಂತಿರುವ ಈ ಪುಸ್ತಕವನ್ನು ತೆಗೆದುಕೊಂಡವರಿಗೆ ಲವ್ ಆಗಿ ವಾಪಾಸ್ ಕೊಡಲ್ಲ.. ಕೇಳಿದರೆ ತೋಮನಿಗೆ ಕೊಟ್ಟಿದ್ದೇನೆ ದೂಮನಿಗೆ ಕೊಟ್ಟಿದ್ದೇನೆ ಅಂತಾರೆ ಬೈದು ಕೇಳೋಕೆ ಆಗಲ್ಲ.. ಮಿಕ್ಕ ಪುಸ್ತಕವಾದರೆ ಪರವಾಗಿಲ್ಲ.. ದಿನನಿತ್ಯದ ಜೀವನದಲ್ಲಿ ಬಳಸುವ ಇಂತಹ ಕೃತಿಗಳನ್ನು ವಾಪಾಸು ಕೊಡದಿದ್ದರೆ ಹೇಗಾಗುತ್ತದೆ ಅದಕ್ಕೆ ನಾನೀಗ ಪುಸ್ತಕ ಕೊಡುವುದನ್ನೇ ಬಿಟ್ಟಿದ್ದೇನೆ..
ನಾನು ಹಾವು ನಾವು ಕೃತಿಯನ್ನು ಮೊದಲನೇಯ ಬಾರಿಗೆ ಓದಿದ್ದು 2014ರಲ್ಲಿ.. ಈ ಪುಸ್ತಕವನ್ನು ನೀವು ಒಮ್ಮೆಗೇ ಓದಲಾರಿರಿ. ಓದಿದರೂ ಏನೂ ಅನಿಸಲಾರದು. ಜೀವನದಲ್ಲಿ ಅನುಭವಿಸುತ್ತಲೇ ಓದುವ ಓದುತ್ತಲೇ ಅನುಭವಿಸುವ ಹೊತ್ತಗೆಯಿದು. ನಾವು ಹಳ್ಳಿಗರಾದ್ದರಿಂದ ಕೆಲವು ಘಟನೆಗಳು ನಮ್ಮ‌ ನೆರೆಹೊರೆಯಲ್ಲಿ ನಡೆದವೇನೋ ಎಂಬಂತೆ ಭಾಸವಾಗುತ್ತದೆ. ಹೊತ್ತಗೆ ತನ್ನನ್ನು ಅರ್ಧ ಓದುವಾಗಲೇ ನನ್ನನ್ನು ಆವರಿಸಿದ್ದ ಅಂಧಕಾರದ ಪೊರೆ ಸರಿಸಿತ್ತು.. ! ಅಂದಿನಿಂದ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದೇನೆ..
ಜಸ್ಟ್ ಈಗ ಸಂಜೆ ಒಬ್ಳು ಹುಡುಗಿ ಯಾವುದೋ ನೀರು ಹಾವು ಕಚ್ಚಿತೆಂದು ಕರೆ ಮಾಡಿದ್ದಳು. ನೀರೊಳ್ಳೆ(checkered keelback water snake) ನ ಪಟ ತೋರಿಸಿದಾಗ ಇದೇ ಎಂದು ಗುರುತಿಸಿ ನಿರಾಳಲಾದಳು..
ಪರಿಸರದಲ್ಲಿ ಒಂದನ್ನೊಂದು ಹೋಲುವ ಹತ್ತಾರು ಹಾವುಗಳಿವೆ. ಕಂಡಕೂಡಲೇ ಇದು ಕನ್ನಡಿ ಹಾವೆಂದು ಕೊಲ್ಲುವುದು ಮನುಷ್ಯನ ಮೂರ್ಖತನ..
ಉದಾಹರಣೆಗೆ ತುಳುವಿನ ತಾರಿಮಡಲ ಅಥವಾ ಪಾರಂಬೊಲ್ ಕನ್ನಡದ ಬಿಲ್ಲುಮುರಿ(bronz backed tree snake) . ಈ ಪ್ರಬೇಧದ ಹತ್ತಾರು ಹಾವುಗಳ ಮಾರಣಹೋಮವನ್ನು ನಾನು ಕಣ್ಣಾರೆ ಕಂಡವ..! ಬೇರೆಯವರಲ್ಲ ನಮ್ಮ ಮನೆಯವರೇ ಪೂರ್ವಜನ್ಮದ ದ್ವೇಷವೇನೋ ಎಂಬಂತೆ ಕೊಲ್ಲುತ್ತಿದ್ದರು..!
ಇನ್ನೊಂದು ಮೈಮೇಲೆ ಪಟ್ಟಿಯಿರುವ ಹಾವುಗಳನ್ನು ಕಂಡ ಕೂಡಲೇ ಇವು ಕಟ್ಟುಹಾವು(ಕಡಂಬಳ-krait) ಎಂದು ಕೊಲ್ಲೋದು.. ಕಡಂಬಳ ನಿಜವಾಗಿ ಜೋಡಿಯಾಗಿ ವಾಸಿಸುವುದು . ಅಪರೂಪಕ್ಕೆ ಒಂಟಿಯಾಗಿ ಕಾಣಸಿಗುವುದು.‌ ಕಡಂಬಳದ ಹೆಸರಿನಲ್ಲಿ ಹತ್ತಕ್ಕೂ ಹೆಚ್ಚು ಸಾಮಾನ್ಯ ಕುಕ್ರಿ ಹಾವುಗಳು(common kukri) ನನ್ನ‌ ಕಣ್ಣೆದುರೇ ಕೊಲೆಯಾಗಿ ಹೋಗಿದ್ದವು. ದೇಹದಲ್ಲಿ ಪಟ್ಟಿಕಂಡ ಕೂಡಲೇ ಕಡಂಬಳ ಎಂದು ಹೊಡೆದು ಸಾಯಿಸುವ ಮನುಷ್ಯ ತನ್ನ ಎಂಜಲು ಇತರ ಪ್ರಾಣಿಗಳಿಗೆ ನಂಜೆಂದು ಅರಿಯದಿರುವುದು ದುರಂತ..!
ಇನ್ನು ವಿಷಕಾರಿಯಲ್ಲದ dumerils black headed snakeಹಾವಿಗೆ ಕೃಷ್ಣ ಸರ್ಪದ ಹೆಸರಲ್ಲಿ ಕೊಡ್ಯಾಣಕ್ಕೆ ತಿಥಿ ಮಾಡಿ ಉಂಡಿದ್ದೇ ಉಂಡಿದ್ದು. ಪಾಪ ಬಡಜನಗಳು ಸಾಲ ಮಾಡಿ ತಿಥಿಗೆ ಖರ್ಚು ಮಾಡಿದ್ದನ್ನೂ ನಾನು ನೋಡಿದವ.. ನನಗೆ ಕೃಷ್ಣ ಸರ್ಪ ತೋರಿಸುತ್ತೇನೆ ಎಂದು ಚಾಲೆಂಜ್ ಮಾಡಿದವರ ಪತ್ತೆಯಿಲ್ಲ. ಯಾವಾಗ ಸನಿಲರ ಹಾವು ನಾವು ಕೃತಿ ಊರಿಗೆ ಕಾಲಿಟ್ಟಿತೋ ಅಂದಿಗೆ ಕೃಷ್ಣಸರ್ಪಕ್ಕೆ ಬೊಜ್ಜ ಮಾಡಿಸುವವರೂ ಇಲ್ಲ ಬೊಜ್ಜ ಮಾಡುವವರೂ ಇಲ್ಲ..!
ಸುತ್ತಮುತ್ತಲಿನ ಪರಿಸರದ ಬಗೆಗೆ ನಮಗಿರುವ ಮೂಢನಂಬಿಕೆಗಳು ಕಂದಾಚಾರಗಳು ದೂರವಾಗಬೇಕಾದಲ್ಲಿ ಇಂತಹ ಕೃತಿಗಳು ಉಪಯುಕ್ತ. ನಾವು ಕತ್ತಲಿಂದ ಬೆಳಕಿನತ್ತ ಬರುತ್ತೇವೆ.. ಹೊತ್ತಗೆ ಬೆಳಕಿನತ್ತ ಎಳೆದು ತರುತ್ತದೆ.. "ಪ್ರಕೃತಿ ನಮ್ಮ ಭಾಗವಲ್ಲ ನಾವು ಪ್ರಕೃತಿಯ ಭಾಗ" ಎಂಬುದು ಅರಿವಾಗುತ್ತದೆ
ಈ ಪುಸ್ತಕದಿಂದ ಪ್ರಭಾವಿತನಾಗಿ 2014ರಿಂದ ಶುರುವಾದ ನನ್ನ ಪಯಣ ಇಲ್ಲಿಯವರೆಗೆ ಮುಂದುವರೆದಿದೆ. ಸುಮಾರು ಐವತ್ತಕ್ಕೂ ಹೆಚ್ಚು ಅಮಾಯಕ ಹಾವುಗಳ ರಕ್ಷಿಸಿದ್ದೇನೆ. ನಾಲ್ಕೈದು ಭಾರಿ ವಿಷಕಾರಿ ಹಾವುಗಳು ಕಂಡರೂ ಉಪಾಯದಿಂದ ಹಿಡಿದು ಮನೆಯಿಂದ ದೂರ ಬಿಟ್ಟು ಬಂದಿದ್ದೇನೆ. ಮೊನ್ನೆ ಮೊನ್ನೆ ಅತ್ಯಂತ ವಿಷಕಾರಿಯಾದ ಕೊಳಕುಮಂಡಲದ ಮರಿಯನ್ನು ಮನೆಯ ಬದಿಯಿಂದ ಹಿಡಿದು ದೂರ ಬಿಟ್ಟಿದ್ದೆ. ನಮ್ಮ ಮನೆಯವರು ಹಾವುಗಳನ್ನು ಕಂಡಲ್ಲಿ ಸಾಯಿಸುವುದನ್ನು ನಿಲ್ಲಿಸಿದ್ದಾರೆ‌. ಈಗ ವಿಷಯ ವಿನಿಮಯ ಹಿಂದಿನ ಕಾಲದಂತೆ ಕಷ್ಟವಲ್ಲ.. ವಾಟ್ಸಪ್ ಇದೆ.. ಸೆಕೆಂಡಿನಲ್ಲಿ ಪಟಗಳು‌ ವಿನಿಮಯವಾಗುತ್ತವೆ. ಹಾವುಗಳು ತಮ್ಮ‌ ಜೀವ ಉಳಿಸಿಕೊಳ್ಳುತ್ತವೆ. ಇದರಿಂದಾಗಿ ನನ್ನ ಹೆಚ್ಚಿನ ಇಂಜಿನಿಯರಿಂಗ್‌‌ನ ಮಾಡರ್ನ್ ನಿಬ್ಬ ನಿಬ್ಬಿಯರಿಗೂ ಹಾವುಗಳ ಮೇಲೆ ಪ್ರೀತಿ ಮೂಡಿದೆ.. ಇನ್ನೇನು ಬೇಕು..ಹತ್ತೇ ಹತ್ತು ಜನರಿಗೆ ಹಾವುಗಳ ಮೇಲೆ ಪ್ರೀತಿ ಮೂಡಿದರೂ ಪುಸ್ತಕದ ಉದ್ದೇಶ ಈಡೇರಿದಂತೆಯೇ...!ಈ ಕೃತಿಯನ್ನು ಸೇರಿದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಧನ್ಯವಾಯಿತು..!
ಈ ಪರಿಷ್ಕೃತ ಮೂರನೇ ಮುದ್ರಣದಲ್ಲಿ 47 ಹಾವುಗಳನ್ನು ಮದುವೆಯ ಅಲ್ಬಮಿನಂತೆ ಚಿತ್ರ ಸಮೇತ ವಿವರಿಸಲಾಗಿದೆ.. ಎಲ್ಲೂ ಬೋರ್ ಅನಿಸಲ್ಲ.. ಇನ್ನು ಲೇಖಕರ ಸುಮಾರು ಮೂವತ್ತು ವರ್ಷಗಳ ಅನುಭವದ ಸಾರವಿದು.. ಬೆಲೆ ಹೆಚ್ಚೆಂದುಕೊಳ್ಳದಿರಿ.. ನನಗಂತೂ ಈ ಕೃತಿಗೆ ಐನೂರಲ್ಲ ಐದು ಸಾವಿರ ನೀಡಿದರೂ ಕಮ್ಮಿಯೇ ಅನಿಸುತ್ತದೆ..
No photo description available.
Nayana Bajakudlu, Shashikala Vorkady and 56 others
20 Comments
5 Shares
Like
Comment
Share

CommentsNayana Bajakudlu

  • 1

No comments:

Post a Comment